ಯಾವುದೇ ಕಾರಣಕ್ಕೂ ಇಂದಿರಾ ಕ್ಯಾಂಟೀನ್ ನಿಲ್ಲಿಸಬೇಡಿ : ಸರ್ಕಾರಕ್ಕೆ ಸಿದ್ದರಾಮಯ್ಯ ಆಗ್ರಹ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಅ.12-ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಜಾರಿಗೆ ತಂದಿರುವ ಇಂದಿರಾ ಕ್ಯಾಂಟೀನ್‍ಗಳನ್ನು ಯಾವುದೇ ಕಾರಣಕ್ಕೂ ನಿಲ್ಲಿಸಬೇಡಿ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಸರ್ಕಾರವನ್ನು ಆಗ್ರಹಿಸಿದರು. 2019-20ನೇ ಸಾಲಿನ ವಿವಿಧ ಇಲಾಖೆಗಳ ಅನುದಾನ ಬೇಡಿಕೆಗಳ ಮೇಲಿನ ಚರ್ಚೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಇಂದಿರಾ ಕ್ಯಾಂಟೀನ್ ಬಗ್ಗೆ ಗೊಂದಲವಿದೆ.

ಬೆಂಗಳೂರಿನಲ್ಲಿ 98 ಇಂದಿರಾ ಕ್ಯಾಂಟೀನ್ ಇದ್ದರೆ, ರಾಜ್ಯದ ಇತರೆಡೆ 200 ಕ್ಯಾಂಟೀನ್‍ಗಳು ಕಾರ್ಯನಿರ್ವಹಿಸುತ್ತಿವೆ. ಹೊಸ ತಾಲ್ಲೂಕುಗಳಲ್ಲೂ ಇಂದಿರಾ ಕ್ಯಾಂಟೀನ್ ಪ್ರಾರಂಭ ಮಾಡಿ. ಇಂದಿರಾ ಕ್ಯಾಂಟೀನ್‍ಗೆ 100 ರಿಂದ 150 ಕೋಟಿ ರೂ. ಖರ್ಚಾಗಬಹುದು. ಹೀಗಾಗಿ ಅದನ್ನು ನಿಲ್ಲಿಸಬೇಡಿ. ಇನ್ನೂ ಹೆಚ್ಚಿನ ರೀತಿಯಲ್ಲಿ ಒಳ್ಳೆಯ ಆಹಾರ ಕೊಡಿ.

ಬಿಬಿಎಂಪಿಯಲ್ಲೂ ಅನುದಾನವಿಲ್ಲ ಎನ್ನುತ್ತಾರೆ, ಬಜೆಟ್‍ನಲ್ಲೂ ಅನುದಾನವಿಲ್ಲ ಎನ್ನುತ್ತಾರೆ ಹೀಗಾಗಿ ಗೊಂದಲವಿದೆ. ಜನರಿಂದಲೂ ಒಳ್ಳೆಯ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಹೆಚ್ಚಿನ ವಿಧಧ ಆಹಾರ ಕೊಡಿ ಜನರಿಗೆ ಅನುಕೂಲವಾಗುತ್ತದೆ ಎಂದು ಹೇಳಿದರು.

Facebook Comments