ಇಂದಿರಾ ಕ್ಯಾಂಟೀನ್ ಗೋಲ್‍ಮಾಲ್, ಎರಡು ಗುತ್ತಿಗೆ ಕಂಪನಿಗಳ ವಿರುದ್ಧ ದೂರು

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಜ.22- ಬಡವರ ಹಸಿವು ನೀಗಿಸಲು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅಧಿಕಾರಾವಧಿಯಲ್ಲಿ ಸ್ಥಾಪಿಸಲಾಗಿರುವ ಇಂದಿರಾ ಕ್ಯಾಂಟೀನ್ ಹೆಸರಿನಲ್ಲಿ ಭಾರೀ ಗೋಲ್‍ಮಾಲ್ ನಡೆದಿದ್ದು, ಎರಡು ಗುತ್ತಿಗೆ ಕಂಪನಿಗಳ ವಿರುದ್ಧ ಬಿಬಿಎಂಪಿ ಹಲಸೂರು ಗೇಟ್ ಪೊಲೀಸ್ ಠಾಣೆಯಲ್ಲಿ ಎಫ್‍ಐಆರ್ ದಾಖಲಿಸಿದೆ.

ಇಂದಿರಾ ಕ್ಯಾಂಟಿನ ಹೆಸರಿನಲ್ಲಿ ಕೋಟಿ ಕೋಟಿ ಲೂಟಿ ಮಾಡಿರುವ ಇಂದಿರಾ ಕ್ಯಾಂಟೀನ್ ಟೆಂಡರ್ ಪಡೆದ ಗುತ್ತಿಗೆ ಕಂಪನಿಗಳು ಸರ್ಕಾರಕ್ಕೆ ಸಬ್ಸಿಡಿ ಹೆಸರಿನಲ್ಲಿ ವಂಚನೆ ಮಾಡಿವೆ. ಇಂದಿರಾ ಕ್ಯಾಂಟೀನ್ ಊಟದ ಗುತ್ತಿಗೆ ಪಡೆದಿರುವ ಚೆಫ್ ಟಾಕ್ ಮತ್ತು ರಿವಾಡ್ರ್ಸ್ ಎಂಬ ಸಂಸ್ಥೆಗಳ ವಿರುದ್ದ ಹಲಸೂರು ಗೇಟ್ ಪೊಲೀಸ್ ಠಾಣೆಯಲ್ಲಿ ಬಿಬಿಎಂಪಿ ಹಣಕಾಸು ವಿಭಾಗದ ಜಂಟಿ ಆಯುಕ್ತ ವೆಂಕಟೇಶ್ ಅವರು ದೂರು ದಾಖಲಿಸಿದ್ದು, ಈ ಕುರಿತು ಹಲಸೂರು ಗೇಟ್ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಈ ಎರಡೂ ಗುತ್ತಿಗೆ ಕಂಪನಿಗಳು ಮಾಸಿಕ 6.82 ಕೋಟಿ ಸಬ್ಸಿಡಿ ಪಡೆಯುತ್ತಿದ್ದು, ಇಂದಿರಾ ಕ್ಯಾಂಟೀನ್‍ಗೆ ಕಳಪೆ ಆಹಾರ, ಸುಳ್ಳು ಲೆಕ್ಕ ಕೊಟ್ಟು ಸಬ್ಸಿಡಿ ಪಡೆಯುತ್ತಿವೆ. ನಗರದ 174 ಇಂದಿರಾ ಕ್ಯಾಂಟೀನ್‍ಗಳು, 15 ಮೊಬೈಲ ಕ್ಯಾಂಟೀನ್‍ಗಳಿಗೆ ಈ ಕಂಪನಿ ಗಳು ಉಪಹಾರ ಸರಬರಾಜು ಮಾಡುತ್ತಿದ್ದವು. ಪತ್ರಿ ತಿಂಗಳಿಗೆ 62.70 ಲಕ್ಷ ಜನರಿಗೆ 3 ಹೊತ್ತು ಊಟ ಒದಗಿಸುತ್ತಿವೆ ಇಂದಿರಾ ಕ್ಯಾಂಟೀನ್‍ಗಾಗಿ 2017 -18ರಲ್ಲಿ 100 ಕೋಟಿ ಮೀಸಲಿಡಲಾಗಿತ್ತು. ಆದರೆ ಗುತ್ತಿಗೆ ಕಂಪನಿಗಳು 124 ಕೋಟಿ ನಿರ್ವಹಣಾ ವೆಚ್ಚ ತೋರಿಸಿ ವಂಚಿಸಿದ್ದವು.

2018 -19 115 ಕೋಟಿ ರೂ ಮೀಸಲಿಟ್ಟರೂ 24 ಕೋಟಿ ಹೆಚ್ಚುವರಿ ವೆಚ್ಚ ತೋರಿಸಿವೆ. 2019-20 ಸಾಲಿಗೆ 152 ಕೋಟಿ ನಿರ್ವಹಣಾ ವೆಚ್ಚ ಅಂದಾಜಿಸಲಾಗಿದೆ.ಎರಡು ಸಾಲಿನ ಹೆಚ್ಚು ವರಿ ನಿರ್ವಹಣಾ ವೆಚ್ಚದ ಕುರಿತು ತನಿಖೆ ನಡೆಸು ವಂತೆ ಬಿಬಿಎಂಪಿ ಹಣಕಾಸು ವಿಭಾಗದ ಜಂಟಿ ಆಯುಕ್ತ ವೆಂಕಟೇಶ್ ಪೊಲೀಸರಿಗೆ ದೂರು ನೀಡಿದ್ದಾರೆ.

Facebook Comments