ಮಾಜಿ ಪ್ರಧಾನಿ ಇಂದಿರಾಗಾಂಧಿ ಜನ್ಮ ಜಯಂತಿ : ಮೋದಿ ಸೇರಿ ಗಣ್ಯರ ನಮನ

ಈ ಸುದ್ದಿಯನ್ನು ಶೇರ್ ಮಾಡಿ

ನವದೆಹಲಿ, ನ.16-ಮಾಜಿ ಪ್ರಧಾನಮಂತ್ರಿ ಇಂದಿರಾಗಾಂಧಿ ಅವರ ಜನ್ಮಜಯಂತಿ ನಿಮಿತ್ತ ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಅನೇಕ ಗಣ್ಯರು ಗೌರವ ನಮನ ಸಲ್ಲಿಸಿದ್ದಾರೆ.  ಮಾಜಿ ಪ್ರಧಾನಿ ಡಾ. ಮನಮೋಹನ್ ಸಿಂಗ್, ಕಾಂಗ್ರೆಸ್‍ಅಧ್ಯಕ್ಷೆ ಸೋನಿಯಾಗಾಂಧಿ, ಪಕ್ಷದ ಮುಖಂಡರಾದ ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ, ಗುಲಾಂ ನಬಿ ಅಜಾದ್, ಅಧೀರ್ ರಂಜನ್ ಚೌಧರಿ, ಮಲ್ಲಿಕಾರ್ಜುನಖರ್ಗೆ ಸೇರಿದಂತೆ ಅನೇಕರು ಇಂದಿರಾಗಾಂಧಿ ಅವರಿಗೆ ಗೌರವಾಂಜಲಿ ಸಮರ್ಪಿಸಿದ್ದಾರೆ.

ಸ್ವತಂತ್ರ ಭಾರತದ ಪ್ರಥಮ ಪ್ರಧಾನಮಂತ್ರಿ ಪಂಚಿತ್ ಜವಹರ್‍ಲಾಲ್ ನೆಹರು ಅವರ ಪುತ್ರಿಯಾದ ಇಂದಿರಾ ಪ್ರಿಯದರ್ಶಿನಿ ನವೆಂಬರ್ 19, 1917ರಂದು ಜನಿಸಿದರು. ಬಾಲ್ಯದಿಂದಲೂ ನಾಯಕತ್ವ ಗುಣಗಳನ್ನು ಮೈಗೂಡಿಸಿಕೊಂಡಿದ್ದ ಅವರು ಕೇಂದ್ರ ಸಚಿವರಾಗಿ ಕೆಲವು ಖಾತೆಗಳನ್ನು ನಿರ್ವಹಿಸಿದ್ದರು. 1966 ರಿಂದ 1977ರವರೆಗೆ ಹಾಗೂ 1980ರಿಂದ 1984ರವರೆಗೂ ಅವರು ಪ್ರಧಾನ ಮಂತ್ರಿಯಾಗಿದ್ದರು.

Facebook Comments