ಚೀನಾ ಸುತ್ತ ಭಾರತದ ಮೂರೂ ಸಶಸ್ತ್ರ ಪಡೆಗಳ ಸರ್ಪಕೋಟೆ..!

ಈ ಸುದ್ದಿಯನ್ನು ಶೇರ್ ಮಾಡಿ

ಲಡಾಖ್, ಜೂ.28- ಪೂರ್ವ ಲಡಾಖ್‍ನ ಗಲ್ವಾನ್ ಕಣಿವೆಯಲ್ಲಿ ಕ್ರೌರ್ಯತನದಿಂದ 20 ಭಾರತೀಯರನ್ನು ಹತ್ಯೆ ಮಾಡಿದ ಚೀನಾ ಸೇನಾಪಡೆಗೆ ತಕ್ಕ ಪಾಠ ಕಲಿಸಲು ಭಾರತದ ಮೂರು ಸಶಸ್ತ್ರ ದಳಗಳು ಗಡಿ ಪ್ರಾಂತ್ಯಗಳಲ್ಲಿ ಸಂಪೂರ್ಣ ಸನ್ನದ್ಧವಾಗಿವೆ.

ಚೀನಾ ಸುತ್ತ ಭಾರತದ ಸರ್ಪಕೋಟೆ ನಿರ್ಮಾಣವಾಗಿದ್ದು, ನೆಲ-ಜಲ ಮತ್ತು ವಾಯು ಮಾರ್ಗಗಳಿಂದ ಚೀನಾವನ್ನು ನಿಗ್ರಹಿಸಲು ಭಾರತೀಯ ಭೂ ಸೇನೆ, ವಾಯುಪಡೆ ಮತ್ತು ನೌಕಾ ದಳಗಳು ಸಜ್ಜಾಗಿವೆ.

ನಿನ್ನೆ ಸಂಜೆಯಿಂದಲೂ ಹಿಮಾಲಯ ಪ್ರಾಂತ್ಯದ ಗಡಿ ಭಾಗದಲ್ಲಿ ಭಾರತದ ಯುದ್ಧ ವಿಮಾನಗಳು ಮತ್ತು ಸಮರ ಹೆಲಿಕಾಪ್ಟರ್‍ಗಳು ನಿರಂತರ ಗಸ್ತು ತಿರುಗುತ್ತಿದ್ದು, ಎದುರಾಗಬಹುದಾದ ಯಾವುದೇ ಸನ್ನಿವೇಶ ಎದುರಿಸಲು ಸಜ್ಜಾಗಿವೆ.

ಇನ್ನೊಂದೆಡೆ ಲಡಾಖ್, ಸಿಕ್ಕಿಂ, ಅರುಣಾಚಲ ಪ್ರದೇಶ ಸೇರಿದಂತೆ ಈಶಾನ್ಯ ಪ್ರಾಂತ್ಯದ ಗಡಿ ಭಾಗಗಳಲ್ಲಿ ಭೂ ಸೇನೆ ಭಾರೀ ಪ್ರಮಾಣದ ಯುದ್ಧಾಸ್ತ್ರಗಳೊಂದಿಗೆ ಅಗಾಧ ಭಾರತೀಯ ಸೇನೆಯನ್ನು ನಿಯೋಜಿಸಿದೆ.

ಮತ್ತೊಂದೆಡೆ ಚೀನಾವನ್ನು ಸುತ್ತುವರೆದಿರುವ ಸಮುದ್ರ ಪ್ರದೇಶಗಳಲ್ಲಿ ಭಾರತದ ನೌಕಾಪಡೆಯ ಯುದ್ಧ ನೌಕೆಗಳು, ಜಲಾಂತರ್ಗಾಮಿಗಳು, ವೈರಿ ಹಡಗು ನಾಶಕ ಟಾರ್ಪೆಡಾಗಳು ಪಹರೆಗೆ ನಿಂತಿವೆ.

ಭಾರತದ ಶಸ್ತ್ರಾಸ್ತ್ರ ಬತ್ತಳಿಕೆಯಲ್ಲಿರುವ ಬ್ರಹ್ಮಾಸ್ತ್ರಗಳಾದ ಅಪಾಚೆ ಹೆಲಿಕಾಪ್ಟರ್‍ಗಳು, ಮಿಗ್-21 ಯುದ್ಧ ವಿಮಾನಗಳು ಸೇರಿದಂತೆ ಅನೇಕ ಪೈಟರ್ ಜೆಟ್‍ಗಳು ಗಸ್ತು ಹಾರಾಟದಲ್ಲಿವೆ. ಭೀಷ್ಮ ಸಮರ ಟ್ಯಾಂಕ್‍ಗಳನ್ನು ಗಡಿ ಭಾಗಗಳಲ್ಲಿ ನಿಯೋಜಿಸಿದ್ದು, ಚೀನಾ ಸೇನಾಪಡೆ ದುಸ್ಸಾಹಸಕ್ಕೆ ಮುಂದಾದರೆ ನುಚ್ಚುನೂರು ಮಾಡಲು ಸಜ್ಜಾಗಿವೆ.

ಭಾರತೀಯ ಸೇನಾಪಡೆಯ ಮೂಲಗಳ ಪ್ರಕಾರ, ಚೀನಾದ ಒಬ್ಬ ಯೋಧನಿಗೆ ಭಾರತದ ಐವರು ಸೈನಿಕರ ಬಲವನ್ನು ಗಡಿಯಲ್ಲಿ ನಿಯೋಜಿಸಲಾಗಿದೆ. ಭಾರತ ಸೇನಾಪಡೆಯ ಅಗಾಧ ಶಸ್ತ್ರಾಸ್ತ್ರಬಲವನ್ನು ನೋಡಿ ಡ್ರ್ಯಾಗನ್ ಬೆಚ್ಚಿಬಿದ್ದಿದ್ದು ಬಾಲ ಮುದುರಿಕೊಳ್ಳುತ್ತಿದೆ.

Facebook Comments