ಭಾರತ-ಪಾಕ್ ಮಾತುಕತೆಗೆ ಅಮೆರಿಕಾ ಸಹಕಾರ

ಈ ಸುದ್ದಿಯನ್ನು ಶೇರ್ ಮಾಡಿ

ವಾಷಿಂಗ್ಟನ್,ಏ.7- ಭಾರತ ಮತ್ತು ಪಾಕಿಸ್ತಾನ ನೇರ ಮಾತುಕತೆ ಮೂಲಕ ಸಮಸ್ಯೆ ಬಗೆಹರಿಸಿಕೊಳ್ಳಲು ಮುಂದಾದರೆ ಎಲ್ಲಾ ರೀತಿಯ ಬೆಂಬಲ ನೀಡುವುದಾಗಿ ಅಮೆರಿಕಾ ಘೋಷಿಸಿದೆ. ಇತ್ತಿಚೆಗೆ ಭಾರತದಿಂದ ಹತ್ತಿ ಮತ್ತು ಸಕ್ಕರೆ ಅಮುದು ಮಾಡಿಕೊಳ್ಳುವುದಕ್ಕೆ ಪಾಕ್ ನಿರ್ಬಂಧ ವಿಧಿಸಿರುವ ಕುರಿತಂತೆ ಯಾವುದೇ ಪ್ರತಿಕ್ರಿಯೆ ನೀಡಲು ಸ್ಟೇಟ್ ಡಿಪಾರ್ಟ್‍ಮೆಂಟ್ ವಕ್ತಾರ ನೆಡ್ ಪ್ರೈಸ್ ನಿರಾಕರಿಸಿದ್ದಾರೆ.

ಪಾಕ್ ನಿರ್ಬಂಧ ಕುರಿತಂತೆ ನಾವು ಯಾವುದೇ ಹೇಳಿಕೆ ನೀಡುವುದಿಲ್ಲ.ಆದರೆ, ಆ ಎರಡು ರಾಷ್ಟ್ರಗಳ ನಡುವಿನ ಭಾಂದವ್ಯ ಉತ್ತಮಗೊಳ್ಳಲು ನಾವು ಎಲ್ಲ ರೀತಿಯ ಸಹಕಾರ ನೀಡುತ್ತೇವೆ ಎಂದು ಅವರು ತಿಳಿಸಿದ್ದಾರೆ.

Facebook Comments