ಇಂಡೋನೇಷ್ಯಾದಲ್ಲಿ ಮತ್ತೆ ಕಂಪಿಸಿದ ಭೂಮಿ..!

ಈ ಸುದ್ದಿಯನ್ನು ಶೇರ್ ಮಾಡಿ

ಇಂಡೋನೇಷ್ಯಾ,ಜು.16- ದ್ವೀಪ ರಾಷ್ಟ್ರ ಇಂಡೋನೇಷ್ಯಾದಲ್ಲಿ ಇಂದು ಕೂಡ ಸಂಭವಿಸಿದೆ. ಸಬ್‍ಸಿಯಾ ಭೂಕಂಪಕವೂ ಬಾಲಿ ಮತ್ತು ಲೊಂಬೊಕ್ ಮತ್ತು ಪೂರ್ವ ಜಾವದಲ್ಲಿ ಭೂಕಂಪಗಳು ಉಂಟಾದರೂ ಸುನಾಮಿ ಅಪ್ಪಳಿಸುವಂತಹ ತೀವ್ರತೆ ಹೊಂದಿಲ್ಲ.

ಡೆನಪಸರ್‍ದ ಬಾಲಿಯ ನೈರುತ್ಯ ದಿಕ್ಕಿನಲ್ಲಿ ಇಂದು 5.7 ತೀವ್ರತೆಯ ಭೂಕಂಪನವಾಗಿದ್ದು, 91 ಕಿ.ಮೀ ಭೂಗರ್ಭದಲ್ಲಿ ವಾಯುವ್ಯ ದಿಕ್ಕಿಗೆ 82 ಕಿ.ಮೀನಷ್ಟು ಭೂಕಂಪದ ಕೇಂದ್ರಬಿಂದು ಇತ್ತು ಎಂದು ಯುಎಸ್ ಭೂ ವೈಜ್ಞಾನಿಕ ಸಮೀಕ್ಷೆ ತಿಳಿಸಿದೆ.

ನಿನ್ನೆ ಕೂಡ ಮಲುಕು ದ್ವೀಪದಲ್ಲಿ ಮುಂಜಾನೆ ಸುಮಾರು 6.28ರ ಉತ್ತರ ಮಾಲುಕು ಪ್ರಾಂತ್ಯದ ಟೆರ್ನೇಟ್ ಪಟ್ಟಣದಿಂದ ದಕ್ಷಿಣ-ನೈರುತ್ಯ ದಿಕ್ಕಿನಲ್ಲಿ ಸುಮಾರು 165 ಕಿಲೋಮೀಟರ್ ಆಳದಲ್ಲಿ ಭೂ ಕಂಪಿಸಿತ್ತು. ಪರಿಣಾಮ ಒಬ್ಬರು ಮೃತಪಟ್ಟಿದ್ದು, 100ಕ್ಕೂ ಹೆಚ್ಚು ಮಂದಿಯನ್ನು ಸ್ಥಳಾಂತರಿಸಲಾಗಿತ್ತು. ದಕ್ಷಿಣ ಹಲ್ಮಹೇರಾ ಜಿಲ್ಲೆಯು ಸುತ್ತಮುತ್ತ 160 ಮನೆಗಳಿದ್ದು ಭೂಕಂಪದಿಂದ ಜಖಂಗೊಂಡಿದ್ದು, ಒಬ್ಬ ಮಹಿಳೆ ಸಾವನ್ನಪ್ಪಿದ್ದರು.

ಇಂದು ಕೂಡ ಬಾಲಿಯಲ್ಲಿ ಭೂಕಂಪ ಸಂಭವಿಸಿದ್ದು ರಾಷ್ಟ್ರೀಯ ವಿಪ್ಪತ್ತು ಏಜೆನ್ಸಿಯು ತನ್ನ ಟ್ವಿಟರ್‍ನಲ್ಲಿ ಬಾಲಿಯಲ್ಲಿ ದೇವಸ್ಥಾನವೊಂದು ಜಖಂಗೊಂಡಿರುವ ಹಾಗೂ ಪೂರ್ವ ಜಾವದ ಬಂಯುವಾಂಗಿಯಲ್ಲಿ ಕೆಲವು ಮನೆಗಳು ಹಾನಿಗೀಡಾಗಿರುವ ಫೋಟೋಗಳನ್ನು ಹರಿಬಿಟ್ಟಿದೆ.

Facebook Comments