ಇನ್ಫೋಸಿಸ್ ನಿಂದ 60 ಲಕ್ಷ ವೆಚ್ಚದಲ್ಲಿ ಆಟದ ಮೈದಾನ ನಿರ್ಮಾಣ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ನ.23- ಇನೋಸಿಸ್ ಫೌಂಡೇಷನ್ ವತಿಯಿಂದ ಸಿಎಸ್‍ಆರ್ ಯೋಜನೆಯಡಿ ಆಡುಗೋಡಿಯ ಸಿಎಆರ್ (ದಕ್ಷಿಣ) ಮತ್ತು ಬಿನ್ನಿಮಿಲ್ ವಸತಿ ಗೃಹಗಳ ಸಮುಚ್ಛಯದಲ್ಲಿ ಆಟದ ಮೈದಾನ ಹಾಗೂ ಕ್ರೀಡಾ ಚಟುವಟಿಕೆಯ ಮೂಲ ಸೌಲಭ್ಯ ನಿರ್ಮಿಸಿಕೊಳ್ಳಲು ಸರ್ಕಾರ ಅನುಮತಿ ನೀಡಿ ಆದೇಶಿಸಿದೆ.

ಆಡುಗೋಡಿ ಮತ್ತು ಬಿನ್ನಿಮಿಲ್ ಬಳಿ ಆಟದ ಮೈದಾನ ಹಾಗೂ ಕ್ರೀಡಾ ಚಟುವಟಿಕೆ ಮೂಲ ಸೌಲಭ್ಯಗಳನ್ನು ಕಲ್ಪಿಸಲು ಇನೋಸಿಸ್ ಸಿಎಸ್‍ಆರ್ ಯೋಜನೆಯಡಿ 68,06,063ರೂ.ಗಳನ್ನು ವೆಚ್ಚ ಮಾಡಲಿದೆ.

ರಾಜ್ಯ ಪೊಲೀಸ್ ಮಹಾನಿರ್ದೇಶಕರು ಮತ್ತು ಆರಕ್ಷಕ ಮಹಾ ನಿರೀಕ್ಷಕರು ಈ ಸಂಬಂದ ಸರ್ಕರಕ್ಕೆ ಸಲ್ಲಿಸಿದ್ದ ಪ್ರಸ್ತಾವನೆಗೆ ಅನುಮತಿ ನೀಡಲಾಗಿದೆ. ಬೆಂಗಳೂರು ನಗರದ ಸ್ಥಳೀಯ ನಿವಾಸಿ, ಪೊಲೀಸ್ ಇಲಾಖೆಯ ಅಕಾರಿ ಮತ್ತು ಸಿಬ್ಬಂದಿ ಮಕ್ಕಳ ಕ್ರೀಡಾ ಚಟುವಟಿಕೆಯನ್ನು ಉತ್ತೇಜಿ ಸುವ ನಿಟ್ಟಿನಲ್ಲಿ ಇನೋಸಿಸ್ ಫೌಂಡೇಷನ್ ವತಿಯಿಂದ ಆಟದ ಮೈದಾನ ಹಾಗೂ ಕ್ರೀಡಾ ಸೌಲಭ್ಯಗಳನ್ನು ನಿರ್ಮಿಸಲು ಉದ್ದೇಶಿಸಲಾಗಿದೆ.

ಇನೋಸಿಸ್ ಫೌಂಡೇಷನ್‍ನ ಸಿಎಸ್‍ಆರ್ ಯೋಜನೆಯಡಿ ಆಟದ ಮೈದಾನ ನಿರ್ಮಿಸಿ ಕೊಳ್ಳಲು ಅನುಮತಿ ಕೋರಿದ್ದ ಹಿನ್ನೆಲೆಯಲ್ಲಿ ಒಳಾಡಳಿತ ಇಲಾಖೆ ಅನುಮತಿ ನೀಡಿ ಆದೇಶ ಹೊರಡಿಸಿದೆ. ಇನೋಸಿಸ್ ಫೌಂಡೇಷನ್ ವತಿಯಿಂದ ಆಟದ ಮೈದಾನ ಮತ್ತು ಕ್ರೀಡಾ ಚಟುವಟಿಕೆಯ ಮೂಲ ಸೌಕರ್ಯ ನಿರ್ಮಿಸಿಕೊಡುತ್ತಿರುವುದಕ್ಕೆ ಗೃಹ ಸಚಿವ ಆರಗ ಜ್ಞಾನೇಂದ್ರ ಅಭಿನಂದನೆ ಸಲ್ಲಿಸಿದ್ದಾರೆ.

Facebook Comments