ತೆರಿಗೆ ವಂಚನೆ : 5.6 ಕೋಟಿ ರೂ. ಪಾವತಿಸಿ ಪ್ರಕರಣ ಇತ್ಯರ್ಥಕ್ಕೆ ಇನ್ಫೋಸಿಸ್ ಒಪ್ಪಿಗೆ

ಈ ಸುದ್ದಿಯನ್ನು ಶೇರ್ ಮಾಡಿ

ವಾಷಿಂಗ್ಟನ್/ನ್ಯೂಯಾರ್ಕ್, ಡಿ.18-ವಿದೇಶಿ ಉದ್ಯೋಗಿಗಳ ದೋಷಪೂರಿತ ವರ್ಗೀಕರಣ ಮತ್ತು ತೆರಿಗೆ ವಂಚನೆ ಆರೋಪಗಳನ್ನು ಎದುರಿಸುತ್ತಿರುವ ಅಗ್ರಮಾನ್ಯ ಐಟಿ ಕಂಪನಿ ಇನ್ಫೋಸಿಸ್ ಈ ಪ್ರಕರಣಗಳಿಗೆ ತೆರೆ ಎಳೆಯಲು ಮುಂದಾಗಿದೆ.

ಈ ವಿವಾದಗಳನ್ನು 8,00,000 ಡಾಲರ್‍ಗಳಿಗೆ(ಸುಮಾರು 5.6 ಕೋಟಿ ರೂ.ಗಳ ಪಾವತಿ ಮೂಲಕ ಇತ್ಯರ್ಥಗೊಳಿಸಿಕೊಳ್ಳಲು ಸಮ್ಮತಿಸಲಾಗಿದೆ ಎಂದು ಸಂಸ್ಥೆ ತಿಳಿಸಿದೆ. ಈ ಆರೋಪಗಳಿಂದ ವಿಮುಕ್ತಿ ಪಡೆಯಲು ಕ್ಯಾಲಿಫೋರ್ನಿಯಾ ಆಟಾರ್ನಿ ಜನರಲ್ ಅವರಿಗೆ ಇನ್ಫೋಸಿಸ್ 8 ಲಕ್ಷ ಡಾಲರ್‍ಗಳನ್ನು ಪಾವತಿಸಲು ಒಪ್ಪಿಗೆ ಸೂಚಿಸಿದೆ.

ಇದು 2006 ಮತ್ತು 2017ಕ್ಕೆ ಸಂಬಂಧಪಟ್ಟ ಪ್ರಕರಣಗಳಾಗಿವೆ. ಸುಮಾರು 500 ಉದ್ಯೋಗಿಗಳು ಅಮೆರಿಕದಲ್ಲಿ ಇನ್ಫೋಸಿಸ್ ಪ್ರಾಯೋಜಕತ್ವದ ಬಿ-1 ವೀಸಾಗಳ ಮೇಲೆ ಕಾರ್ಯ ನಿರ್ವಹಿಸುತ್ತಿದ್ದಾರೆ. ಆದರೆ ವಾಸ್ತವವಾಗಿ ಇದಕ್ಕೆ ಎಚ್-1ಬಿ ವೀಸಾಗಳ ಅಗತ್ಯವಿದೆ. ಇನ್ಫೋಸಿಸ್ ತಪ್ಪು ವರ್ಗೀಕರಣ ಮಾಹಿತಿ ನೀಡಿತ್ತು. ಈ ಹಿನ್ನೆಲೆಯಲ್ಲಿ ಐಟಿ ಸಂಸ್ಥೆ ವಿರುದ್ಧ ಅರೋಪಗಳು ಕೇಳಿ ಬಂದಿದ್ದವು. ಈ ದೋಷಪೂರಿತ ವರ್ಗೀಕರಣದ ಮೂಲಕ ಕ್ಯಾಲಿಫೋರ್ನಿಯಾ ಪೇ ರೋಲ್ ತೆರಿಗೆಗಳ ಪಾವತಿಯನ್ನು ತಪ್ಪಿಸಿಕೊಂಡಿತ್ತು ಎಂದು ಆರೋಪಿಸಲಾಗಿದೆ.

ಈ ಎರಡೂ ಪ್ರಕರಣಗಳನ್ನು ಈಗ ಇನ್ಫೋಸಿಸ್ ಸುಮಾರು 5.6 ಕೋಟಿ ರೂ.ಗಳನ್ನು ಕ್ಯಾಲಿಫೋರ್ನಿಯಾ ಆಟಾರ್ನಿ ಜನರಲ್ ಕ್ಷೇವಿಯರ್ ಬೆಸಿರಿಯಾ ಅವರಿಗೆ ಪಾವತಿಸಲು ಒಪ್ಪಿಗೆ ನೀಡಿ ವಿವಾದವನ್ನು ಬಗೆಹರಿಸಿಕೊಳ್ಳುತ್ತಿದೆ.

Facebook Comments