30 ವರ್ಷಗಳ ಸೇವೆ ನಂತರ ವಿರಾಟ್ ಯುದ್ಧನೌಕೆ ಗುಜರಿಗೆ

ಈ ಸುದ್ದಿಯನ್ನು ಶೇರ್ ಮಾಡಿ

ಮುಂಬೈ/ಅಲಾಂಗ್, ಸೆ.19- ಭಾರತೀಯ ನೌಕಾಪಡೆಯಲ್ಲಿ 30 ವರ್ಷಗಳ ಸೇವೆ ನಂತರ ವಿರಾಟ್ ಯುದ್ಧನೌಕೆ ಇಂದು ತನ್ನ ಕೊನೆ ಪ್ರಯಾಣವನ್ನು ಪೂರ್ಣಗೊಳಿಸಿ ಗುಜರಿಗೆ ಸೇರಲಿದೆ. ಮುಂಬೈನ ನೌಕಾ ಬಂದರುಕಟ್ಟೆಯಿಂದ ಗುಜರಾತ್‍ನ ಅಲಾಂಗ್‍ಗೆ ಪ್ರಯಾಣ ಬೆಳೆಸಿದ ವಿರಾಟ್ ಸಮರ ನೌಕೆಯನ್ನು ಗುಜರಿಗೆ ಮಾರಾಟ ಮಾಡಲಾಗುತ್ತದೆ.

ಭಾರತ ಸಶಸ್ತ್ರ ಪಡೆಗಳ ವಿಮಾನಗಳನ್ನು ಹೊತ್ತೊಯ್ಯುವ ಕಾರ್ಯವನ್ನು ನಿರ್ವಹಿಸುತ್ತಿದ್ದ ವಿರಾಟ್ ಮೂರು ದಶಕಗಳ ಬಳಿಕ ತನ್ನ ಸೇವೆಯನ್ನು ಸ್ಥಗಿತಗೊಳಿಸಿದೆ.

Facebook Comments