ಉಪ ಆಯುಕ್ತರ ಪತ್ನಿಗೆ 1 ಕೋಟಿ ರೂ.ವಂಚನೆ : ಲೇಡಿ ಇನ್ಸ್ ಪೆಕ್ಟರ್ ಹಾಗೂ ಆಕೆ ಪತಿ ಅರೆಸ್ಟ್

ಈ ಸುದ್ದಿಯನ್ನು ಶೇರ್ ಮಾಡಿ

ಗಾಜಿಯಾಬಾದ್, ಅ.20- ಕಾರ್ಮಿಕ ಇಲಾಖೆ ಉಪ ಆಯುಕ್ತರಿಗೆ ಒಂದು ಕೋಟಿ ರೂ. ವಂಚನೆ ಮಾಡಿದ ಆರೋಪಕ್ಕೆ ಗುರಿಯಾಗಿರುವ ಲೇಡಿ ಇನ್ಸ್‍ಪೆಕ್ಟರ್ ಹಾಗೂ ಆಕೆಯ ಪತಿಯನ್ನು ಗಾಜಿಯಾಬಾದ್ ಪೊಲೀಸರು ಬಂಧಿಸಿದ್ದಾರೆ.ಇನ್ಸ್‍ಪೆಕ್ಟರ್ ನರ್ಗಿಸ್‍ಖಾನ್ ಹಾಗೂ ಮೀರತ್ ಮೂಲದ ವಾಣಿಜ್ಯೋದ್ಯಮಿ ಆಕೆಯ ಪತಿ ಸುರೇಶ್ ಯಾದವ್ ಬಂಧಿತ ಆರೋಪಿಗಳು.

ಆರೋಪಿಗಳು ಖಾಲೀದ್ ರಾವೂಫ್, ಜಿತೇಂದ್ರಸಿಂಗ್, ಸೋಂಪಾಲ್ ಎಂಬುವರೊಂದಿಗೆ ಶಾಮಿಲ್ಲಾಗಿ ಕಾರ್ಮಿಕ ಇಲಾಖೆಯಲ್ಲಿ ಉಪ ಆಯುಕ್ತರಾಗಿರುವ ರೋಶನ್‍ಲಾಲ್ ಅವರ ಪತ್ನಿ ಉಮಾದೇವಿ ಎಂಬುವರಿಂದ ಪೆಟ್ರೋಲ್ ಪಂಪ್ ತೆರೆಯಲು ಸಹಾಯ ಮಾಡಿಕೊಡುವುದಾಗಿ ನಂಬಿಸಿ ಒಂದು ಕೋಟಿ ರೂ. ಪಡೆದು ವಂಚಿಸಿದ್ದರು.

ಈ ಕುರಿತಂತೆ ಉಮಾದೇವಿ ನೀಡಿದ ದೂರಿನ ಆಧಾರದ ಮೇರೆಗೆ ಗಾಜಿಯಾಬಾದ್‍ನ ಕವಿನಗರ ಪೊಲೀಸರು ಆರೋಪಿಗಳಿಬ್ಬರನ್ನು ಬಂಧಿಸಿ ನ್ಯಾಯಾಲಯದ ಮುಂದೆ ಹಾಜರುಪಡಿಸಿದ್ದು, ಅವರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

Facebook Comments