142 ಇನ್‌ಸ್ಪೆಕ್ಟರ್‌ಗಳ ವರ್ಗಾವಣೆ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಜ.9- ರಾಜ್ಯ ಪೊಲೀಸ್ ಇಲಾಖೆಯ 142 ಪೊಲೀಸ್ ಇನ್ಸ್‍ಪೆಕ್ಟರ್‍ಗಳನ್ನು (ಸಿವಿಲ್) ವರ್ಗಾವಣೆ ಮಾಡಲಾಗಿದೆ. ವಿವಿಐಪಿ ಭದ್ರತೆಯಲ್ಲಿರುವ ಪುಟ್ಟಸ್ವಾಮಿ ಅವರನ್ನು ಬನಶಂಕರಿ ಪೊಲೀಸ್ ಠಾಣೆಗೆ ವರ್ಗಾಯಿಸಲಾಗಿದೆ.  ಅಶೋಕ್‍ಕುಮಾರ್ ಅವರನ್ನು ಎಚ್‍ಎಸ್‍ಆರ್ ಲೇಔಟ್ ಸಂಚಾರ ಪೊಲೀಸ್ ಠಾಣೆ, ಸಿದ್ದೇಗೌಡ- ಗಂಗಮ್ಮನ ಗುಡಿ, ಕಿಶೋರ್‍ಕುಮಾರ್- ಪುಟ್ಟೇನಹಳ್ಳಿ, ಸುನಿಲ್ ವೈ.ನಾಯಕ್- ಮಡಿವಾಳ, ರಾಮಚಂದ್ರಪ್ಪ ಎಸ್.ಚೌಧರಿ – ಮೈಕೋ ಲೇಔಟ್, ಅಶ್ವತ್ಥಗೌಡ ಅವರನ್ನು ಆರ್‍ಟಿ ನಗರ ಪೊಲೀಸ್ ಠಾಣೆಗೆ ವರ್ಗಾಯಿಸಲಾಗಿದೆ.

ಬಸವನಗುಡಿ ಮಹಿಳಾ ಪೊಲೀಸ್ ಠಾಣೆಯ ಹೇಮಲತಾ ಅವರನ್ನು ಆಡುಗೋಡಿ ಸಂಚಾರಿ ಠಾಣೆ, ಹೇಮಂತ್‍ಕುಮಾರ್- ವೈಯಾಲಿ ಕಾವಲ್, ಉಮಾಶಂಕರ್- ಸದಾಶಿವನಗರ ಸಂಚಾರಿ, ಸಂದೀಪ್‍ಕುಮಾರ್- ಹನುಮಂತನಗರ, ಮುನಿರಾಜು- ದೇವನಹಳ್ಳಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಸಂಚಾರ ಪೊಲೀಸ್ ಠಾಣೆಗೆ ವರ್ಗಾಯಿಸಲಾಗಿದೆ.

ಶಿವಾಜಿನಗರ ಪೊಲೀಸ್ ಠಾಣೆಯ ಸಿದ್ದರಾಜು ಅವರನ್ನು ತಲಘಟ್ಟಪುರ ಪೊಲೀಸ್ ಠಾಣೆ, ಕಿರಣ್- ಅಶೋಕನಗರ ಸಂಚಾರ, ದೀಪಕ್- ಸಿಸಿಬಿ, ಗಿರೀಶ್‍ನಾಯಕ್- ಸಿಸಿಬಿ, ಅಶೋಕ್ ಅವರನ್ನು ಸಿಸಿಬಿಗೆ ವರ್ಗಾಯಿಸಲಾಗಿದೆ.

ರವಿನಾಥ್- ವಿವಿಐಪಿ ಭದ್ರತೆ, ವೆಂಕಟಾಚಲಯ್ಯ, ಘೋರ್ಪಡೆ ಯಲ್ಲಪ್ಪ- ಸಿಟಿ ಎಸ್‍ಬಿ, ಮಿಥುನ್ ಶಿಲ್ಪಿ- ವಿಧಾನಸೌಧ ಭದ್ರತೆ, ಯೋಗೇಂದ್ರ ಕುಮಾರ್- ಸಿಟಿ ಎಸ್‍ಬಿ, ನಾಗರಾಜ್- ವಿವಿಐಪಿ ಭದ್ರತೆ, ರವಿ- ಎಸಿಬಿ, ಚಂದ್ರಶೇಖರ್- ಪೊಲೀಸ್ ಪ್ರಧಾನ ಕಚೇರಿ, ಕಾನೂನು ಶಾಖೆ, ಪ್ರಕಾಶ್- ಸಿಐಡಿ, ಕೃಷ್ಣಪ್ಪ- ಕರ್ನಾಟಕ ಲೋಕಾಯುಕ್ತ, ವೀರೇಂದ್ರ ಪ್ರಸಾದ್- ಸಿಐಡಿ ವಿಭಾಗಕ್ಕೆ ವರ್ಗಾವಣೆಯಾಗಿದ್ದಾರೆ.  ಅಶೋಕನಗರ ಸಂಚಾರ ಪೊಲೀಸ್ ಠಾಣೆಯ ಮೀನಾಕ್ಷಿ ಅವರನ್ನು ಬಸವನಗುಡಿಯ ಮಹಿಳಾ ಪೊಲೀಸ್ ಠಾಣೆಗೆ ವರ್ಗಾಯಿಸಿ ಡಿಜಿ ಡಾ.ಎಂ.ಎ.ಸಲೀಂ ಆದೇಶಿಸಿದ್ದಾರೆ.

Facebook Comments