ಅಂತಾರಾಷ್ಟ್ರೀಯ ಡ್ರಗ್ಸ್ ಜಾಲ ಪತ್ತೆ: ಐವರ ಸೆರೆ, 90 ಕೋಟಿ ಮೌಲ್ಯದ ಹೆರಾಯಿನ್ ವಶ..!

ಈ ಸುದ್ದಿಯನ್ನು ಶೇರ್ ಮಾಡಿ

ನವದೆಹಲಿ, ಸೆ.12- ಬೆಂಗಳೂರು, ಮುಂಬೈ ಸೇರಿದಂತೆ ದೇಶದ ವಿವಿಧ ನಗರಗಳಲ್ಲಿ ಮಾದಕ ವಸ್ತುಗಳ ಪೂರೈಕೆ ಪ್ರಕರಣಗಳು ಆತಂಕಕಾರಿ ಮಟ್ಟದಲ್ಲಿ ಹೆಚ್ಚಾಗಿರುವಾಗಲೇ ರಾಜಧಾನಿ ದೆಹಲಿಯಲ್ಲಿ ಅಂತಾರಾಷ್ಟ್ರೀಯ ಡ್ರಗ್ಸ್ ಕಳ್ಳ ಸಾಗಣೆಯ ಜಾಲವೊಂದು ಪತ್ತೆಯಾಗಿದೆ.

ಇಂಟರ್‍ನ್ಯಾಷನಲ್ ನಾರ್ಕೊಟಿಕ್ ಡ್ರಗ್ ಕಾರ್ಟೆಲ್ (ಅಂತಾರಾಷ್ಟ್ರೀಯ ಮಾದಕ ವಸ್ತು ವ್ಯವಸ್ಥಿತ ದಂಧೆ) ಒಂದೆನ್ನು ಪತ್ತೆ ಮಾಡಿರುವ ದೆಹಲಿ ಪೊಲೀಸರು ಈ ಸಂಬಂಧ ಐವರನ್ನು ಬಂಧಿಸಿದ್ದಾರೆ. ಈ ಸಂಬಂಧ 90 ಕೋಟಿ ರೂ.ಗಳಿಗೂ ಅಧಿಕ ಮೌಲ್ಯ 23 ಕಿಲೋ ಹೆರಾಯಿನ್‍ನನ್ನು ವಶಪಡಿಸಿಕೊಳ್ಳಲಾಗಿದೆ.

ಬಂಧಿತರಲ್ಲಿ ಇಡೀ ವ್ಯವಸ್ಥಿತ ಕಾರ್ಯಾಚರಣೆಯ ಕಿಂಗ್‍ಪಿನ್ ಸಹ ಸೇರಿದ್ದಾನೆ. ಮ್ಯಾನ್ಮರ್ ಮೂಲಕ ಈಶಾನ್ಯ ರಾಜ್ಯ ಮಣಿಪುರದಿಂದ ಭಾರತಕ್ಕೆ ಭಾರೀ ಪ್ರಮಾಣದಲ್ಲಿ ಡ್ರಗ್ಸ್‍ನನ್ನು ಕಳ್ಳಸಾಗಣೆ ಮಾಡಲಾಗುತ್ತಿತ್ತು. ಈ ಸಂಬಂಧ ಬಿಹಾರದ ಉದಯಕುಮಾರ್ (30), ಸುಭೋದ್ ದಾಸ್ (26), ಮತ್ತು ಸಂಬೀವ್ ಕುಮಾರ್ (25) ಹಾಗೂ ಅಸ್ಸಾಂನ ನಿತ್ಯಾನಂದ (28) ಮತ್ತು ರಾಹುಲ್ ಹ್ಯಾಂಡಿಕ್ (30) ಎಂಬುವನ್ನು ಬಂಧಿಸಲಾಗಿದೆ ಎಂದು ಉನ್ನತ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಆರೋಪಿಗಳು ತಮ್ಮ ಕಾರುಗಳ ಅಡಿಯಲ್ಲಿ ಟೊಳ್ಳಾದ ಪೈಪುಗಳನ್ನು ಅಳವಡಿಸಿ ಅದರೊಳಿಗೆ ಡ್ರಗ್ಸ್‍ಗಳನ್ನು ತುಂಬಿ ಕಳ್ಳ ಸಾಗಣೆ ಮಾಡುತ್ತಿದ್ದರು. ಕಳ್ಳಸಾಗಣೆಗೆ ಬಳಸಲಾ ಇನ್ನೊಂದು ಕಾರಿನ ಮ್ಯೂಸಿಕ್ ಸ್ಟಿಸ್ಟಂ ಒಳಗೆ ರಹಸ್ಯವಾಗಿ ಹೆರಾಯಿನ್ ಅಡಗಿಸಿಡಲಾಗಿತ್ತು.

ದೆಹಲಿಯ ಮುಕುಂದಪುರ್ ಮತ್ತು ಪ್ರಗತಿ ಮೈದಾನ್ ಹೊರ ವಲಯದ ರಿಂಗ್ ರೋಡ್‍ಗಳಲ್ಲಿ ನಡೆಸಿದ ಕಾರ್ಯಾಚರಣೆ ಗಳಲ್ಲಿ ಎರಡು ಕಾರುಗಳಲ್ಲಿ ಅಡಗಿಸಿಟ್ಟಿದ 90 ಕೋಟಿ ರೂ.ಗಳಿಗೂ ಹೆಚ್ಚು ಮೌಲ್ಯದ ಒಟ್ಟು 23 ಕೆಜಿ ಹೆರಾಯಿನ್ ವಶಪಡಿಸಿಕೊಳ್ಳಲಾಗಿದೆ.

ಮಣಿಪುರ, ಅಸ್ಸಾಂ, ದೆಹಲಿ, ಉತ್ತರ ಪ್ರದೇಶ ಮತ್ತು ಬಿಹಾರ ರಾಜ್ಯಗಳಲ್ಲಿ ಮಾದಕ ವಸ್ತುಗಳ ಕಳ್ಳಸಾಗಣೆ ದಂಧೆ ಬಗ್ಗೆ ಲಭಿಸಿದ ಮಾಹಿತಿಯನ್ನು ಆಧರಿಸಿ ಈ ಕಾರ್ಯಾಚರಣೆ ನಡೆಸಲಾಗಿದೆ. ಆರೋಪಿಗಳ ವಿಚಾರಣೆಯಿಂದ ಮತ್ತಷ್ಟು ಸಂಗತಿಗಳು ಬಹಿರಂಗಗೊಳ್ಳಲಿದೆ ಎಂದು ಉನ್ನತ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಮ್ಯಾನ್ಮಾರ್‍ನಿಂದ ಮಣಿಪುರಕ್ಕೆ ಬರುತ್ತಿದ್ದ ಡ್ರಗ್ಸ್ ಅಸ್ಶಾಂನ ಬೋಕೊಜನ್ ಎಂಬ ಸ್ಥಳಕ್ಕೆ ಪೂರೈಕೆಯಾಗುತ್ತಿತ್ತು. ಅಲ್ಲಿಂದ ದೇಶದ ವಿವಿಧ ಭಾಗಗಳಿಗೆ ಹೆರಾಯಿನ್ ಮತ್ತಿತರ ಮಾದಕ ವಸ್ತುಗಳು ಪೂರೈಕೆಯಾಗುತ್ತಿದ್ದವು.

ಸಹಾಯಕ ಪೊಲೀಸ್ ಆಯುಕ್ತ (ಎಸಿಪಿ) ಅತ್ತರ್ ಸಿಂಗ್ ಮಾರ್ಗದರ್ಶನದಲ್ಲಿ ಇನ್ಸ್‍ಪೆಕ್ಟರ್‍ಗಳಾದ ಶಿವಕುಮಾರ್ ಮತ್ತು ಕರ್ಮವೀರ್ ಸಿಂಗ್ ನೇತೃತ್ವದ ತಂಡ ಅಂತಾರಾಷ್ಟ್ರೀಯ ಡ್ರಗ್ಸ್ ಕಳ್ಳ ಸಾಗಣೆ ಜಾಲವನ್ನು ಭೇದಿಸಿದೆ.

Facebook Comments