ಫೆ.28ರ ವರೆಗೆ ಅಂತಾರಾಷ್ಟ್ರೀಯ ಪ್ರಯಾಣಿಕರ ವಿಮಾನಗಳ ಸಂಚಾರ ಅಮಾನತು ವಿಸ್ತರಣೆ

ಈ ಸುದ್ದಿಯನ್ನು ಶೇರ್ ಮಾಡಿ

ನವದೆಹಲಿ,ಜ.19- ದೇಶದಲ್ಲಿ ಅನುಸೂಚಿತ ಅಂತಾರಾಷ್ಟ್ರೀಯ ಪ್ರಯಾಣಿಕರ ವಿಮಾನಗಳ ಸಂಚಾರ ಅಮಾನತು ಅವಧಿಯನ್ನು ಫೆಬ್ರವರಿ 28ರ ತನಕ ವಿಸ್ತರಿಸಲಾಗಿದೆ ಎಂದು ಗಗನಯಾನ ನಿಯಂತ್ರಕ ಡಿಜಿಸಿಎ ಇಂದು ತಿಳಿಸಿದೆ.ಅನುಸೂಚಿತ ಅಂತಾರಾಷ್ಟ್ರೀಯ ಪ್ರಯಾಣಿಕರ ವಿಮಾನಗಳ ಸಂಚಾರವನ್ನು 2020ರ ಮಾರ್ಚ್‍ನಿಂದ ಅಮಾನತುಗೊಳಿಸಲಾಗಿತ್ತು.

ಆದಾಗ್ಯೂ 2020ರ ಜುಲೈನಿಂದ ಭಾರತ ಮತ್ತು ಸುಮಾರು 40 ದೇಶಗಳ ನಡುವೆ ವಿಶೇಷ ಪ್ರಯಾಣಿಕರ ವಿಮಾನಗಳು ಏರ್ ಬಬಲ್ ವ್ಯವಸ್ಥೆಯೊಂದಿಗೆ ಸಂಚರಿಸುತ್ತಿವೆ.

ಈ ನಿರ್ಬಂಧವು ಅಂತಾರಾಷ್ಟ್ರೀಯ ಸಂಪೂರ್ಣ ಸರಕು ಕಾರ್ಯಾಚರಣೆ ವಿಮಾನಗಳಿಗೆ ಮತ್ತು ಡಿಜಿಸಿಎಯಿಂದ ವಿಶೇಷ ಅನುಮೋದನೆ ಪಡೆದ ವಿಮಾನಗಳಿಗೆ ಅನ್ವಯಿಸುವುದಿಲ್ಲ ಎಂದು ಉಲ್ಲೇಖಿಸಲಾಗಿದೆ. ಏರ್‍ಬಬಲ್ ವ್ಯವಸ್ಥೆಯಲ್ಲಿರುವ ವಿಮಾನಗಳ ಸಂಚಾರ ಅಬಾತ ಎಂದು ಡಿಜಿಸಿಎ ಗಮನ ಸೆಳೆದಿದೆ.

Facebook Comments

Sri Raghav

Admin