ಉಗ್ರ ಮುನೀರ್, ಆದಿಲ್ ಸಹಚರರಿಗಾಗಿ ಎನ್‍ಐಎ ಪೊಲೀಸರ ಶೋಧ

ಈ ಸುದ್ದಿಯನ್ನು ಶೇರ್ ಮಾಡಿ

NIA-Police
ಬೆಂಗಳೂರು, ಆ.14- ರಾಮನಗರದಲ್ಲಿ ಪೊಲೀಸರಿಗೆ ಸಿಕ್ಕಿ ಬಿದ್ದ ಜೆಎಂಬಿ ಸಂಘಟನೆಯ ಉಗ್ರ ಮುನೀರ್ ಹಾಗೂ ಆದಿಲ್‍ನ ಸಹಚರರಿಗಾಗಿ ಎನ್‍ಐಎ ಪೊಲೀಸರು ನಗರದ ಹಲವೆಡೆ ಶೋಧ ಕಾರ್ಯ ನಡೆಸಿದ್ದಾರೆ. ಮುನೀರ್ ನೀಡಿದ ಮಾಹಿತಿಯ ಹಿನ್ನೆಲೆಯಲ್ಲಿ ಈ ಶೋಧ ಕಾರ್ಯ ನಡೆದಿದ್ದು, ಈತನಿಗೆ ನಗರದಲ್ಲಿ ಕೆಲವರು ಸಹಕಾರ ನೀಡಿದ್ದಾರೆ. ಅವರ ಬೇಟೆಗೆ ಇದೀಗ ಪೊಲೀಸರು ಬಲೆ ಬೀಸಿದ್ದಾರೆ.

ಜಮಾತುಲ್ ಮುಜಾಹಿದೀನ್ ಬಾಂಗ್ಲಾದೇಶ (ಜೆಎಂಬಿ) ಉಗ್ರ ಸಂಘಟನೆಯ ಪ್ರಮುಖ ಸದಸ್ಯನಾದ ಜೈದುಲ್ ಇಸ್ಲಾಂ ಅಲಿಯಾಸ್ ಮುನೀರ್ ಈ ವರ್ಷದ ಜನವರಿ 19ರಂದು ಬಿಹಾರದ ಬೋದ್‍ಗಯಾದಲ್ಲಿ ನಡೆದ ಸ್ಫೋಟ ಪ್ರಕರಣದ ಪ್ರಮುಖ ಸೂತ್ರಧಾರಿ ಎನ್ನಲಾಗಿದೆ. ಈತನ ಬಂಧನದೊಂದಿಗೆ ಪ್ರಕರಣಕ್ಕೆ ಸಂಬಂಧಿಸಿದಂತೆ ಒಟ್ಟು 7 ಮಂದಿಯ ಬಂಧನವಾದಂತಾಗಿದೆ. ಮುನೀರ್ ನೀಡಿದ ಮಾಹಿತಿಯ ಆಧಾರದಲ್ಲಿ ಆತನ ಸಹಚರ ಆದಿಲ್ ಎಂಬಾತನನ್ನು ಎನ್‍ಐಎ ಪೊಲೀಸರು ಈಗಾಗಲೇ ಕಂಟೋನ್ಮೆಂಟ್ ರೈಲು ನಿಲ್ದಾಣದ ಬಳಿ ವಶಕ್ಕೆ ಪಡೆದು ಬಂಧಿಸಿದ್ದಾರೆ.  ಆತನಿಂದ ಮೂರು ಮೊಬೈಲ್ ಫೋನ್‍ಗಳು, ಬ್ಯಾಂಕ್‍ನ ಪಾವತಿ ರಶೀದಿ, ಬಾಂಗ್ಲಾ ಭಾಷೆಯಲ್ಲಿ ಬರೆದ ಟಿಪ್ಪಣಿ, ಐಇಡಿಯ ತಯಾರಿಕೆಗೆ ಸಂಬಂಧಿಸಿದ ರಾಸಾಯನಿಕದ ಸೂತ್ರವನ್ನು ಬರೆದ ನೋಟ್ ಬುಕ್‍ನ್ನು ತನಿಖಾಧಿಕಾರಿಗಳು ವಶಪಡಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

Facebook Comments

Sri Raghav

Admin