ರಾಮಮಂದಿರ ಭೂಮಿ ಪೂಜೆಗೆ ಬಾಬರಿ ಮಸೀದಿ ಧ್ವಂಸ ಪ್ರಕರಣದ ಎಲ್ಲ 32 ಆರೋಪಿಗಳಿಗೆ ಆಹ್ವಾನ ನೀಡಲು ಆಗ್ರಹ

ಈ ಸುದ್ದಿಯನ್ನು ಶೇರ್ ಮಾಡಿ

ಆಯೋಧ್ಯೆ, ಜು.23- ಆಯೋಧ್ಯೆಯಲ್ಲಿ ನಡೆಯುವ ರಾಮಮಂದಿರ ನಿರ್ಮಾಣ ಭೂಮಿ ಪೂಜೆಗೆ ಬಾಬರಿ ಮಸೀದಿ ಧ್ವಂಸ ಪ್ರಕರಣದ ಎಲ್ಲ 32 ಆರೋಪಿಗಳನ್ನು ಆಹ್ವಾನಿಸಿ ಗೌರವಿಸಬೇಕೆಂದು ಹಿಂದು ಧರ್ಮ ಸೇನಾ ಅಧ್ಯಕ್ಷ ಸಂತೋಷ್ ದುಬೆ ಆಗ್ರಹಿಸಿದ್ದಾರೆ.

ಆಯೋಧ್ಯೆಯಲ್ಲಿ ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಬಾಬರಿ ಮಸೀದಿ ಧ್ವಂಸ ಪ್ರಕರಣದ ಪ್ರಮುಖ ಆರೋಪಿಗಳಲ್ಲಿ ಒಬ್ಬರಾದ ಸಂತೋಷ್ ದುಬೆ, ಆಗಸ್ಟ್ 5ರಂದು ನಡೆಯುವ ರಾಮಮಂದಿರ ಶಿಲಾನ್ಯಾಸ ಕಾರ್ಯಕ್ರಮದಲ್ಲಿ ದೇಶದಲ್ಲಿರುವ ನಾಲ್ವರು ಶಂಕರಚಾರ್ಯರಿಗೂ ಆಹ್ವಾನ ನೀಡುವಂತೆ ಮನವಿ ಮಾಡಿದರು.

ಶ್ರೀರಾಮ ಜನ್ಮ ಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ಆಯೋಧ್ಯೆಯಲ್ಲಿನ ಬಾಬರಿ ಮಸೀದಿ ಧ್ವಂಸ ಪ್ರಕರಣದ ಎಲ್ಲ 32 ಆರೋಪಿಗಳಿಗೆ ಆಹ್ವಾನ ನೀಡಬೇಕು. ಅಲ್ಲದೇ ರಾಮ ಜನ್ಮ ಭೂಮಿ ಆಂದೋಲನದಲ್ಲಿ ಪ್ರಾರ್ಣಾಪಣೆ ಮಾಡಿದ ರಾಮಸೇವಕರ ಕುಟುಂಬ ವರ್ಗದವರಿಗೂ ಸಹ ಭೂಮಿ ಪೂಜೆಗೆ ಆಮಂತ್ರಿಸಬೇಕೆಂದು ಅವರು ಒತ್ತಾಯಿಸಿದ್ದಾರೆ.

Facebook Comments

Sri Raghav

Admin