ಐಟಿಐ, ಪದವಿ ಮುಗಿಸಿದ ಅಭ್ಯರ್ಥಿಗಳಿಗೆ ಐಒಸಿಎಲ್‌ನಲ್ಲಿ ನೇಮಕಾತಿ

ಈ ಸುದ್ದಿಯನ್ನು ಶೇರ್ ಮಾಡಿ

ಇಂಡಿಯನ್ ಆಯಿಲ್ ಕಾರ್ಪೊರೇಷನ್ , ಅಥವಾ ಇಂಡಿಯನ್ ಆಯಿಲ್ , ಎನ್ನುವುದು ಭಾರತದ ಸರ್ಕಾರಿ-ಮಾಲೀಕತ್ವದ ತೈಲ ಮತ್ತು ಅನಿಲ ಕಂಪನಿಯಾಗಿದೆ. ಇದು ಭಾರತದ ಅತೀ ದೊಡ್ಡ ವಾಣಿಜ್ಯಿಕ ಸಂಸ್ಥೆಯಾಗಿದ್ದು, 2009 ರ ಫಾರ್ಚ್ಯೂನ್ ಗ್ಲೋಬಲ್ 500 ಪಟ್ಟಿಯಲ್ಲಿ 105 ನೇ ಶ್ರೇಣಿಯನ್ನು ಪಡೆದುಕೊಂಡಿದೆ.

ಇಂಡಿಯನ್ ಆಯಿಲ್ ಮತ್ತು ಅದರ ಅಂಗಸಂಸ್ಥೆಗಳು ಪೆಟ್ರೋಲಿಯಂ ಮಾರುಕಟ್ಟೆಯಲ್ಲಿ 47% ರಷ್ಟು, ಸಂಸ್ಕರಣೆ ಸಾಮರ್ಥ್ಯದಲ್ಲಿ 40% ರಷ್ಟು ಮತ್ತು ಭಾರತದಲ್ಲಿನ ಪೈಪ್‌ಲೈನ್‌ಗಳ ಪ್ರಮುಖ ವಿಭಾಗದಲ್ಲಿ 67% ಪಾಲನ್ನು ಹೊಂದಿವೆ. ಇಂಡಿಯಲ್ ಆಯಿಲ್ ಕಂಪನಿಗಳ ಸಮೂಹವು ಭಾರತದಲ್ಲಿ 19 ತೈಲ ಸಂಸ್ಥರಣಾಗಾರಗಳಲ್ಲಿ 10 ರ ಮಾಲೀಕತ್ವ ಮತ್ತು ಕಾರ್ಯನಿರ್ವಹಣೆಯನ್ನು ಹೊಂದಿದ್ದು, ಪ್ರತಿ ವರ್ಷ 60.2 ಮಿಲಿಯನ್ ಮೆಟ್ರಿಕ್ ಟನ್‌ನಷ್ಟು ಸಂಯೋಜಿತ ಸಂಸ್ಕರಣಾ ಸಾಮರ್ಥ್ಯವನ್ನು ಹೊಂದಿದೆ. ರಾಷ್ಟ್ರದಲ್ಲಿ ಇಂಡಿಯನ್ ಆಯಿಲ್ 17606 ರಷ್ಟು ಸಂಖ್ಯೆಯಲ್ಲಿ ಅತಿದೊಡ್ಡ ಮತ್ತು ವ್ಯಾಪಕವಾದ ಇಂಧನ ಕೇಂದ್ರಗಳನ್ನು ಹೊಂದಿದೆ.

#ಐಒಸಿಎಲ್‌ನಲ್ಲಿ ಐಟಿಐ, ಪದವಿ ಮುಗಿಸಿದವರಿಗೆ ಉದ್ಯೋಗವಕಾಶ:
ಇಂಡಿಯನ್ ಆಯಿಲ್ ಕಾರ್ಪೊರೇಶನ್ ಲಿಮಿಟೆಡ್ ನಲ್ಲಿ ಖಾಲಿ ಇರುವ 176 ಟ್ರೇಡ್ ಮತ್ತು ಟೆಕ್ನಿಷಿಯನ್ ಅಪ್ರೆಂಟಿಸ್ಗೆ ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿಗಳನ್ನು ಆಹ್ವಾನಿಸಲಾಗಿದೆ. 05/08/2019 ಅರ್ಜಿ ಸಲ್ಲಿಸಲು ಆರಂಭದ ದಿನಾಂಕವಾಗಿದ್ದು. 31/08/2019ರ ವರೆಗೆ ಅರ್ಜಿ ಸಲ್ಲಿಸಲು ಅವಕಾಶವಿರುತ್ತದೆ.

ಟ್ರೇಡ್ ಮತ್ತು ಟೆಕ್ನಿಷಿಯನ್ ಅಪ್ರೆಂಟಿಸ್ಗೆ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಮಾನ್ಯತೆ ಪಡೆದ ಇನ್ಸ್ಟಿಟ್ಯೂಟ್ನಿಂದ ಐಟಿಐ, ಡಿಪ್ಲೊಮಾ, ಪದವೀಧರ ಅಥವಾ ಸಮನಾಗಿರುವ ವಿದ್ಯಾರ್ಹತೆ ಹೊಂದಿರಬೇಕು.

18 ರಿಂದ 24 ವರ್ಷದ ಅಭ್ಯರ್ಥಿಗಳು ಅರ್ಜಿ ಸಲ್ಲಿಸಲು ಅರ್ಹರಾಗಿರುತ್ತಾರೆ. ಇನ್ನು ಆಯ್ಕೆ ಆಯ್ಕೆ ಪರೀಕ್ಷೆ ಮತ್ತು ಸಂದರ್ಶನವನ್ನು ಆಧರಿಸಿರುತ್ತದೆ ನೇಮಕಾತಿ ಪ್ರಕ್ರಿಯೆ ನಡೆಯಲಿದೆ.
ಹೆಚ್ಚಿನ ಮಾಹಿತಿಗಾಗಿ ಕೆಳಗಿನ ಅಧಿಸೂಚನೆ ಪರಶೀಲಿಸಿ :

Facebook Comments