ಸೆ.19ರಿಂದ ಐಪಿಎಲ್, ನ.8ಕ್ಕೆ ಫೈನಲ್

ಈ ಸುದ್ದಿಯನ್ನು ಶೇರ್ ಮಾಡಿ

ನವದೆಹಲಿ, ಜು.24- ಕೋವಿಡ್ ಹಾವಳಿಯಿಂದ ಮುಂದೂಡಲ್ಪಟ್ಟಿದ್ದ 13ನೆ ಆವೃತ್ತಿಯ ಐಪಿಎಲ್‍ಗೆ ಕೊನೆಗೂ ದಿನಾಂಕ ನಿಗದಿಯಾಗಿದೆ ಎಂದು ಐಪಿಎಲ್ ಆಡಳಿತ ಸಮಿತಿ ಮುಖ್ಯಸ್ಥ ಬ್ರಿಜೇಶ್ ಪಟೇಲ್ ಸ್ಪಷ್ಟಪಡಿಸಿದ್ದಾರೆ.

ಈ ಕುರಿತು ಮುಂದಿನ ವಾರ ಆಡಳಿತ ಮಂಡಳಿ ಸಭೆ ನಡೆಸಲಿದ್ದು, ಸಭೆಯ ನಂತರ ಐಪಿಎಲ್‍ನ ದಿನಾಂಕ ಹಾಗೂ ಪ್ರಸಾರದ ಹಕ್ಕುಗಳ ಬಗ್ಗೆ ಫ್ರಾಂಚೈಸಿಗಳಿಗೆ ತಿಳಿಸಲಿದ್ದೇವೆ ಎಂದು ಪಟೇಲ್ ತಿಳಿಸಿದ್ದಾರೆ.

ಮೂಲಗಳ ಪ್ರಕಾರ ಐಪಿಎಲ್ 13ನೇ ಆವೃತ್ತಿಯು ಸೆಪ್ಟೆಂಬರ್ 19 ರಿಂದ ನವೆಂಬರ್ 8ರವರೆಗೂ ನಡೆಯಲಿದ್ದು, 51 ದಿನಗಳ ನಡೆಯಲಿರುವ ಐಪಿಎಲ್‍ನಲ್ಲಿ 60 ಪಂದ್ಯಗಳು ನಡೆಯಲಿದೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

ಕೊರೊನಾ ಸೋಂಕು ಭಾರತದಲ್ಲಿ ವ್ಯಾಪಕವಾಗಿ ಹರಡಿರುವುದರಿಂದ ಈ ಬಾರಿಯೂ ಐಪಿಎಲ್ ಅನ್ನು ಯುಎಐನಲ್ಲೇ ನಡೆಸಲು ನಿರ್ಧರಿಸಲಾಗಿದೆ ಎಂದು ಬ್ರಿಜೇಶ್ ಪಟೇಲ್ ಹೇಳಿದ್ದಾರೆ.

Facebook Comments

Sri Raghav

Admin