5 ತಿಂಗಳ ನಂತರ ಅಭ್ಯಾಸ ಆರಂಭಿಸಿದ ಕೊಹ್ಲಿ ಹೇಳಿದ್ದೇನು ಗೊತ್ತೇ..?

ಈ ಸುದ್ದಿಯನ್ನು ಶೇರ್ ಮಾಡಿ

ದುಬೈ, ಆ.30- ಐದು ತಿಂಗಳ ನಂತರ ನಾನು ನೆಟ್‍ನಲ್ಲಿ ಆಡುತ್ತಿರುವುದು ಸ್ವಲ್ಪ ಮಟ್ಟಿನಲ್ಲಿ ಭಯ ಮೂಡಿಸಿತ್ತು ಎಂದು ಭಾರತ ಕ್ರಿಕೆಟ್ ತಂಡದ ನಾಯಕ ಹಾಗೂ ಐಪಿಎಲ್‍ನಲ್ಲಿ ಬೆಂಗಳೂರು ರಾಯಲ್ಸ್ ಚಾಲೆಂಜರ್ಸ್ ತಂಡದ ಸಾರಥಿ ವಿರಾಟ್ ಕೊಹ್ಲಿ ಹೇಳಿದ್ದಾರೆ.

ಇಲ್ಲಿ ನಡೆಯಲಿರುವ ಐಪಿಎಲ್ ಪಂದ್ಯಾವಳಿಗಾಗಿ ಆಗಮಿಸಿರುವ ಆರ್‍ಸಿಬಿ ತಂಡ ಇಂದು ಅಭ್ಯಾಸ ಆರಂಭಿಸಿದ್ದು, ಈ ವೇಳೆ ಸುದ್ದಿ ಮಾಧ್ಯಮಕ್ಕೆ ಸಂಘರ್ಷ ನೀಡಿದ ವಿರಾಟ್ ಕೊಹ್ಲಿ ಕ್ರಿಕೆಟ್ ಅನ್ನು ಐದು ತಿಂಗಳು ನಿಲ್ಲಿಸಿದ್ದ ಬಗ್ಗೆ ತಮ್ಮ ಅನುಭವವನ್ನು ಹಂಚಿಕೊಂಡಿದ್ದಾರೆ.

ಪ್ರಾಮಾಣಿಕವಾಗಿ ಹೇಳುತ್ತೇನೆ ಅಭ್ಯಾಸದ ವೇಳೆ ನಾನು ನೆಟ್ಸ್ ನಲ್ಲಿ ಬ್ಯಾಟ್ ಬೀಸಲು ಸ್ವಲ್ಪ ಅಳುಕಿದೆ. ಆದರೆ ಪಂದ್ಯಾವಳಿಯಲ್ಲಿ ನಿರೀಕ್ಷೆಗೂ ಮೀರಿದ ಉತ್ತಮ ಪ್ರದರ್ಶನ ನೀಡುತ್ತೇವೆ ನೋಡುತ್ತಿರಿ ಎಂದು ಹೇಳಿದ್ದಾರೆ.

ದಕ್ಷಿಣ ಆಫ್ರಿಕಾದ ವೇಗಿ ಸ್ಟೇರ್ ಅವರ ಜತೆ ಆಡುವುದು ಹೊಸ ಅನುಭವ ನೀಡುತ್ತದೆ. ಲಾಕ್‍ಡೌನ್ ಸಂದರ್ಭದಲ್ಲಿ ದೇಹಾರೋಗ್ಯವನ್ನು ಕಾಪಾಡಿಕೊಳ್ಳುವುದು ಸವಾಲಾಗಿತ್ತು. ಆದರೆ ನಾನು ಈಗ ಗಟ್ಟಿಮುಟ್ಟಾಗಿದ್ದೇನೆ.

ಏಕಾಗ್ರತೆ ಮತ್ತು ಪಂದ್ಯದ ಮೇಲೆ ಹಿಡಿತ ಸಾಸುವ ಕಾರ್ಯತಂತ್ರದ ಬಗ್ಗೆ ಈಗ ಹೆಚ್ಚಿನ ಒತ್ತು ನೀಡಬೇಕಾಗಿದೆ ಎಂದು ಕಳೆದ ಐಪಿಎಲ್‍ನಲ್ಲಿ ರನ್ ಹೊಳೆಯನ್ನೇ ಹರಿಸಿದ ವಿರಾಟ್ ಕೊಹ್ಲಿ ಹೇಳಿದ್ದಾರೆ.

Facebook Comments

Sri Raghav

Admin