ಐಪಿಎಲ್ 2ನೇ ಹಂತದ ಸಮರಕ್ಕೆ ಮುಹೂರ್ತ ಫಿಕ್ಸ್, ಚಾಂಪಿಯನ್ ಆಗಲು RCB ಕಾತರ

ಈ ಸುದ್ದಿಯನ್ನು ಶೇರ್ ಮಾಡಿ

ದುಬೈ, ಆ. 20- ಕ್ರಿಸ್ಗೇಲ್, ಎಬಿಡಿ ವಿಲಿಯರ್ಸ್, ವಿರಾಟ್ಕೊಹ್ಲಿಯಂತಹ ಘಟಾನುಘಟಿ ಆಟಗಾರರನ್ನು ಹೊಂದಿದ್ದರೂ ಕೂಡ ಒಮ್ಮೆಯೂ ಐಪಿಎಲ್ ಚಾಂಪಿಯನ್ ಆಗುವಲ್ಲಿ ಎಡವಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು 14 ನೆ ಐಪಿಎಲ್ನ 2ನೆ ಆವೃತ್ತಿ ಪಂದ್ಯಗಳಿಗೆ ಸಜ್ಜಾಗಿದೆ.

# ಸ್ಟಾರ್ ಆಟಗಾರರ ಬಲ:
ಟ್ವೆಂಟ್ವಿ- 20 ಸ್ಪೆಷಾಲಿಸ್ಟ್ಗಳೆಂದೇ ಬಿಂಬಿಸಿಕೊಂಡಿರುವ ದಕ್ಷಿಣ ಆಫ್ರಿಕಾದ ಮಿಸ್ಟರ್ 360 ಖ್ಯಾತಿಯ ಎಬಿಡಿವಿಲಿಯರ್ಸ್, ಆಸ್ಟ್ರೇಲಿಯಾದ ಸ್ಫೋಟಕ ಆಟಗಾರ ಗ್ಲೆನ್ ಮ್ಯಾಕ್ಸ್ವೆಲ್, ಡೇರ್ ಆ್ಯಂಡ್ ಡ್ಯಾಶಿಂಗ್ ಆಟಗಾರ ವಿರಾಟ್ ಕೊಹ್ಲಿ, ಯುವ ಆಟಗಾರರಾದ ದೇವೇಂದ್ರ ಪಡಿಕ್ಕಲ್, ಫ್ಯಾಬ್ ಅಲೆನ್, ಮೊಹಮ್ಮದ್ ಅಜರುದ್ದೀನ್ರ ಬ್ಯಾಟಿಂಗ್ ಬಲ. ಎದುರಾಳಿ ಬ್ಯಾಟ್ಸ್ಗಳ ರನ್ ದಾಹಕ್ಕೆ ಲಗಾಮು ಹಾಕುವ ಚಾಕಚಕ್ಯತೆ ಹೊಂದಿರುವ ಬೌಲರ್ಗಳಾದ ನ್ಯೂಜಿಲ್ಯಾಂಡ್ನ ಕೇಲ್ ಜೇಮಿಸನ್, ಭಾರತದ ಖ್ಯಾತ ಸ್ಪಿನ್ನರ್ ಯಜುವೇಂದ್ರ ಚಹಾಲ್, ವಾಷಿಂಗ್ಟನ್ ಸುಂದರ್, ವೇಗಿ ಹರ್ಷಲ್ಪಟೇಲ್, ಡೇನಿಯಲ್ ಸ್ಯಾಮ್ಸ್ರಂತಹ ಘಟಾನುಘಟಿಗಳನ್ನು ಬೌಲರ್ಗಳನ್ನು ಹೊಂದಿರುವ ವಿರಾಟ್ ಸಾರಥ್ಯದ ಆರ್ಸಿಬಿ ಈ ಬಾರಿ ಚಾಂಪಿಯನ್ ಆಗುವ ಎಲ್ಲಾ ಲಕ್ಷಣಗಳನ್ನು ಹೊಂದಿದೆ.

# ಆರ್ಸಿಬಿಗೆ 2ನೆ ಸ್ಥಾನ:
ಏಪ್ರಿಲ್ 8ರಲ್ಲಿ ಆರಂಭಗೊಂಡಿದ್ದ ಐಪಿಎಲ್ 14 ಕೊರೊನಾ ಕಾಟದಿಂದ ಮೇ ನಲ್ಲಿ ಸ್ಥಗಿತಗೊಳಿಸಲಾಗಿತ್ತು, ಆಗ ವಿರಾಟ್ ಪಡೆಯು ಉತ್ತಮ ಪ್ರದರ್ಶನವನ್ನು ತೋರಿದ್ದು ಆಡಿರುವ 7 ಪಂದ್ಯಗಳಲ್ಲಿ 5 ಗೆಲುವು ಹಾಗೂ 2 ಸೋಲಿನಿಂದ 10 ಅಂಕಗಳನ್ನು ಕಲೆಹಾಕುವ ಮೂಲಕ ಪಾಯಿಂಟ್ಸ್ ಪಟ್ಟಿಯಲ್ಲಿ 2 ನೆ ಸ್ಥಾನವನ್ನು ಅಲಂಕರಿಸಿತ್ತು.

# ಕೆಕೆಆರ್ ಸವಾಲು:
ಈಗ ಮತ್ತೆ ಸೆಪ್ಟೆಂಬರ್ 19 ರಿಂದ ಐಪಿಎಲ್ನ ದ್ವಿತೀಯ ಆವೃತಿ ಆರಂಭಗೊಳ್ಳುತ್ತಿದ್ದು 2009, 2011, 2016ರ ರನ್ನರ್ಅಪ್ ಆಗಿದ್ದ ಆರ್ಸಿಬಿ ತಂಡವು ಪಾಯಿಂಟ್ಸ್ ಪಟ್ಟಿಯಲ್ಲಿ 7ನೆ ಸ್ಥಾನ ಪಡೆದಿರುವ ಇಯಾನ್ ಮಾರ್ಗನ್ ಸಾರಥ್ಯದ ಕೋಲ್ಕತ್ತಾ ನೈಟ್ ರೈಡರ್ಸ್ ತಂಡದ ಸವಾಲನ್ನು ಎದುರಿಸಲಿದೆ.

# 7 ಡಬ್ಬಲ್ ಡಕ್ಕರ್ ಪಂದ್ಯಗಳು:
ಈಗಾಗಲೇ 29 ಪಂದ್ಯಗಳು ನಡೆದಿದ್ದು ಬಾಕಿ ಉಳಿದಿರುವ 31 ಪಂದ್ಯಗಳಲ್ಲಿ 7 ಡಬ್ಬಲ್ ಡಕ್ಕರ್ ಪಂದ್ಯಗಳನ್ನು ಆಡಿಸಲು ಐಸಿಸಿ ಮಂಡಳಿಯು ನಿರ್ಧರಿಸಿದೆ.

31 ಪಂದ್ಯಗಳ ಪೈಕಿ 13 ಪಂದ್ಯಗಳನ್ನು ದುಬೈನ ಇಂಟರ್ನ್ಯಾಷನಲ್ ಮೈದಾನದಲ್ಲಿ ನಡೆಸಲು ನಿರ್ಧರಿಸಿದ್ದರೆ, 10 ಪಂದ್ಯಗಳನ್ನು ಶಾರ್ಜಾದಲ್ಲಿ ನಡೆಯಲಿವೆ.

ಸೆಪ್ಟೆಂಬರ್ 19ರಂದು ಆರಂಭಗೊಳ್ಳಲಿರುವ ಐಪಿಎಲ್ 14ರ ದ್ವಿತೀಯ ಆವೃತ್ತಿಯ ಆರಂಭಿಕ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಮುಂಬೈ ಇಂಡಿಯನ್ಸ್ ಮತ್ತು ಚೆನ್ನೈ ಸೂಪರ್ ಕಿಂಗ್ಸ್ ತಂಡಗಳು ಸೆಣಸಾಟ ನಡೆಸಲಿವೆ.

Facebook Comments

Sri Raghav

Admin