IPL-2021 ರದ್ದುಗೊಳಿಸಿ ಬಿಸಿಸಿಐ ಆದೇಶ..!

ಈ ಸುದ್ದಿಯನ್ನು ಶೇರ್ ಮಾಡಿ

ನವದೆಹಲಿ, ಮೇ 4- ಕೊರೊನಾ ಆರ್ಭಟಕ್ಕೆ ಕೊನೆಗೂ ಬಿಸಿಸಿಐ ಎಚ್ಚೆತ್ತುಕೊಂಡಿದೆ. ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಪಂದ್ಯಾವಳಿಯನ್ನು ರದ್ದುಗೊಳಿಸಿ ಆದೇಶ ಹೊರಡಿಸಿದ್ದು, ಈಗ ಆಟಗಾರರ ಸುರಕ್ಷತೆ ಹಾಗೂ ವಿದೇಶಿ ಆಟಗಾರರನ್ನು ಅವರ ದೇಶಗಳಿಗೆ ಕಳುಹಿಸಲು ತಯಾರಿ ಆರಂಭಿಸಿದೆ.

ನಿನ್ನೆಯಷ್ಟೆ ಅಹಮದಾಬಾದ್‍ನಲ್ಲಿ ನಡೆಯಬೇಕಿದ್ದ ಕೋಲ್ಕತ್ತಾ ನೈಟ್ ರೈಡರ್ರ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ನಡುವಿನ ಪಂದ್ಯವನ್ನು ರದ್ದುಗೊಳಿಸಿದ ನಡುವೆಯೇ ಐಪಿಎಲ್ ಟ್ವೆಂಟಿ-20ಯನ್ನು ರದ್ದುಪಡಿಸುವ ಮುನ್ಸೂಚನೆ ಸಿಕ್ಕಿತ್ತು.

ಕೋಲ್ಕತ್ತಾ ನೈಟ್ ರೈಡರ್ಸ್‍ನ ಇಬ್ಬರು ಆಟಗಾರರಿಗೆ ಸೋಂಕು ತಗುಲಿದೆ ಎಂಬ ಸ್ಫೋಟಕ ಮಾಹಿತಿ ಹೊರಬೀಳುತ್ತಿದ್ದಂತೆ ಇಂದು ಬೆಳಗ್ಗೆ ಕೂಡ ಸನ್‍ರೈಜರ್ಸ್ ಹೈದರಾಬಾದ್, ಡೆಲ್ಲಿ ಕ್ಯಾಪಿಟಲ್ಸ್‍ನ ಆಟಗಾರರಿಗೆ ಸೋಂಕಿನ ಲಕ್ಷಣಗಳು ಕಂಡುಬಂದಿರುವ ಹಿನ್ನೆಲೆಯಲ್ಲಿ ದಿಢೀರ್ ಸಭೆ ನಡೆಸಿದ ಬಿಸಿಸಿಐ ಪದಾಧಿಕಾರಿಗಳು ಐಪಿಎಲ್‍ಅನ್ನು ರದ್ದುಗೊಳಿಸುವ ಕುರಿತು ನಿರ್ಧಾರ ಪ್ರಕಟಿಸಿದ್ದಾರೆ.

ಬಿಸಿಸಿಐ ಉಪಾಧ್ಯಕ್ಷ ರಾಜೀವ್ ಶುಕ್ಲಾ ಅವರು ಸಾಮಾಜಿಕ ಜಾಲತಾಣದಲ್ಲಿ ಈ ವಿಷಯ ಪ್ರಕಟಿಸಿದ್ದಾರೆ. ಇಂದು ಸಂಜೆ ನಡೆಯಬೇಕಿದ್ದ ಸಿಎಸ್‍ಕೆ-ಆರ್‍ಆರ್ ನಡುವಿನ ಪಂದ್ಯ ಮುಂದೂಡುವ ಬಗ್ಗೆ ಕರೆದಿದ್ದ ಸಭೆಯಲ್ಲಿ ಒಟ್ಟಾರೆ ಪಂದ್ಯಾವಳಿಯನ್ನೇ ರದ್ದುಗೊಳಿಸುವ ನಿರ್ಧಾರ ಕೈಗೊಳ್ಳಲಾಗಿದೆ.

Facebook Comments

Sri Raghav

Admin