ಮುಂದಿನ ವರ್ಷದಿಂದ ಐಪಿಎಲ್ ಹರಾಜಿಗೆ ಬ್ರೇಕ್..!

ಈ ಸುದ್ದಿಯನ್ನು ಶೇರ್ ಮಾಡಿ

ನವದೆಹಲಿ, ನ. 30- ವಿಶ್ವದ ಅತ್ಯಂತ ಶ್ರೀಮಂತ ಕ್ರಿಕೆÀಟ್ ಲೀಗ್ ಎಂದೇ ಬಿಂಬಿಸಿಕೊಂಡಿರುವ ಐಪಿಎಲ್‍ನ ಮಹಾ ಹರಾಜು ಪ್ರಕ್ರಿಯೆಗಳು ಸಿದ್ಧತೆಗಳು ನಡೆಯುತ್ತಿರುವಂತೆಯೇ ಮುಂದಿನ ವರ್ಷದಿಂದ ಮೆಗಾ ಹರಾಜು ಇರುವುದಿಲ್ಲ ಎಂದು ಖ್ಯಾತ ಕ್ರಿಕೆಟ್ ವಿಶ್ಲೇಷಕ ಕೆ. ಶ್ರೀನಿವಾಸ್ ಅವರು ತಮ್ಮ ಟ್ವಿಟ್ ಮೂಲಕ ತಿಳಿಸಿದ್ದಾರೆ. ಕೆ.ಶ್ರೀನಿವಾಸ್‍ರ ಈ ಟ್ವಿಟ್‍ಗೆ ಸಾಕಷ್ಟು ಪ್ರತಿಕ್ರಿಯೆಗಳು ಕೂಡ ವ್ಯಕ್ತವಾಗಿವೆ.

ಮುಂಬರುವ ಐಪಿಎಲ್‍ನಲ್ಲಿ ಈಗಿರುವ 8 ತಂಡಗಳ ಜೊತೆಗೆ ಲಕ್ನೋ ಹಾಗೂ ಅಹಮದಾಬಾದ್ ತಂಡಗಳು ಕೂಡ ಸೇರಿಕೊಂಡು 10 ತಂಡಗಳೊಂದಿಗೆ ರೋಚಕ ಹಣಾಹಣಿ ನಡೆಯಲಿದೆ ಎಂಬ ಕ್ರಿಕೆಟ್ ಅಭಿಮಾನಿಗಳ ಲೆಕ್ಕಾಚಾರಗಳು ನಡೆದಿದೆ.

ಈ ವರ್ಷ ಮೆಗಾ ಹರಾಜು ನಡೆಯುವುದರಿಂದ ಈಗಾಗಲೇ ಈ ಹಿಂದಿನ ಐಪಿಎಲ್ ಸರಣಿಯಲ್ಲಿ ಪಾಲ್ಗೊಂಡಿದ್ದ ಫ್ರಾಂಚೈಸಿಗಳು ತಮ್ಮ ತಂಡದಲ್ಲಿ ನಾಲ್ವರು ಪ್ರಮುಖ ಆಟಗಾರರನ್ನು ಉಳಿಸಿಕೊಳ್ಳಲು ಇಂದಿನವರೆಗೂ ಕಾಲಾವಕಾಶವನ್ನು ನೀಡಿತ್ತು.

ಆರ್‍ಸಿಬಿ ತಂಡದಲ್ಲಿ ಎಬಿಡಿವಿಯರ್ಸ್ ಮುಂದಿನ ಆವೃತ್ತಿಯಲ್ಲಿ ಆಡದಿರುವುದರಿಂದ ಕಳೆದ ಬಾರಿ ಸ್ಪೋಟಕ ಬ್ಯಾಟಿಂಗ್ ನಡೆಸಿದ್ದ ಆಸ್ಟ್ರೇಲಿಯಾದ ಗ್ಲೆನ್ ಮ್ಯಾಕ್ಸ್‍ವೆಲ್ ಅವರನ್ನು ಉಳಿಸಿಕೊಂಡಿದ್ದರೆಯೇ ಅತಿ ಹೆಚ್ಚು ವಿಕೆಟ್ ಪಡೆಯುವ ಮೂಲಕ ಪರ್ಪಲ್ ಕ್ಯಾಪ್ ಗೆದ್ದಿರುವ ವೇಗಿ ಹರ್ಷ ಲ್ ಪಟೇಲ್‍ಗೆ ಸ್ಥಾನ ಕಲ್ಪಿಸಲಾಗಿದೆಯೇ? ವಿರಾಟ್ ಕೊಹ್ಲಿ, ಸ್ಪಿನ್ನರ್ ಯಜುವೇಂದ್ರ ಚಹಾಲ್, ಕನ್ನಡಿಗ ದೇವದತ್ ಪಡಿಕ್ಕಲ್‍ಗೆ ಸ್ಥಾನ ಕಲ್ಪಿಸಲಾಗಿದೆ ಎಂಬ ಬಗ್ಗೆ ಕಾತರ ಕೂಡ ಹೆಚ್ಚಾಗಿದೆ.

ಆರ್‍ಸಿಬಿ ಅಲ್ಲದೆ ಇತರ ತಂಡಗಳು ಯಾವ್ಯಾವ ಸ್ಟಾರ್ ಆಟಗಾರರನ್ನು ಉಳಿಸಿಕೊಂಡಿದ್ದಾರೆ ಎಂಬುದರ ಬಗ್ಗೆ ಇಂದು ರಾತ್ರಿ ಸ್ಪಷ್ಟ ಚಿತ್ರಣ ಬೀಳುವ ನಡುವೆ ಕ್ರಿಕೆಟ್‍ನ ಖ್ಯಾತ ಚಿಂತಕ ಕೆ.ಶ್ರೀನಿವಾಸನ್ ಅವರು ಈ ಬಾರಿಯ ಮೆಗಾ ಹರಾಜೇ ಅಂತಿಮವಾಗಬಹುದು ಎಂದು ಹೇಳುವ ಮೂಲಕ ಕುತೂಹಲ ಮೂಡಿಸಿದ್ದಾರೆ.

ಐಪಿಎಲ್ ಮೆಗಾ ಹರಾಜು ತುಂಬಾ ಹಳೆಯ ಪದ್ಧತಿ ಆಗಿರುವುದರಿಂದ ಮುಂದಿನ ಋತುವಿನಿಂದ ತಮಗೆ ಬೇಕಾದ ಸ್ಟಾರ್ ಆಟಗಾರರನ್ನು ನೇರವಾಗಿಯೇ ಆಯ್ಕೆ ಮಾಡಿಕೊಳ್ಳುವ ಪದ್ಧತಿಯನ್ನು ಜಾರಿಗೆ ತಂದರೂ ಆಶ್ಚರ್ಯಪಡಬೇಕಾಗಿಲ್ಲ ಎಂದು ಹೇಳಿದ್ದಾರೆ.

ಶ್ರೀನಿವಾಸನ್‍ರ ಟ್ವಿಟ್‍ಗೆ ಹಲವರು ಇದು ಉತ್ತಮ ಬೆಳವಣಿಗೆ ಎಂದು ಪ್ರತಿಕ್ರಿಯಿಸಿದ್ದರೆ, ಈ ರೀತಿ ಮಾಡಿದರೆ ಬಲಿಷ್ಠ ಫ್ರಾಂಚೈಸಿಗಳು ತಮ್ಮ ತಂಡವನ್ನು ಬಲಿಷ್ಠಗೊಳಿಸಿಕೊಳ್ಳುವ ಮೂಲಕ ಐಪಿಎಲ್ ಗೆಲ್ಲುವ ನೆಚ್ಚಿನ ತಂಡವಾಗುತ್ತದೆ, ಆಗ ಐಪಿಎಲ್ ಮಹತ್ವವೇ ಕಳೆದು ಹೋಗುತ್ತದೆ ಎಂಬ ಅನಿಸಿಕೆಗಳನ್ನು ಕೂಡ ಹಂಚಿಕೊಂಡಿದ್ದಾರೆ.

Facebook Comments