ಐಪಿಎಲ್ ಬೆಟ್ಟಿಂಗ್ : ಇಬ್ಬರು ಬುಕ್ಕಿಗಳ ಸೆರೆ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಸೆ.27- ಹಣವನ್ನು ಪಣವಾಗಿ ಕಟ್ಟಿಕೊಂಡು ಮೊಬೈಲ್ ಮೂಲಕ ಐಪಿಎಲ್ ಕ್ರಿಕೆಟ್ ಬೆಟ್ಟಿಂಗ್ ಜೂಟಾಟದಲ್ಲಿ ತೊಡಗಿದ್ದ ಇಬ್ಬರು ಬುಕಿಗಳನ್ನು ಕೆಜಿ ಹಳ್ಳಿ ಉಪವಿಭಾಗದ ಕಾಡುಗೊಂಡನಹಳ್ಳಿ ಠಾಣೆ ಪೊಲೀಸರು ಬಂಧಿಸಿ 16 ಸಾವಿರ ನಗದು, ಎರಡು ಮೊಬೈಲ್‍ಗಳನ್ನು ವಶಪಡಿಸಿಕೊಂಡಿದ್ದಾರೆ.

ಕೆಜಿ ಹಳ್ಳಿ ಕುಶಾಲನಗರದ ಅಕ್ರಮ್ ಅಲಿಯಾಸ್ ಶೇಕ್(38) ಮತ್ತು ಅನ್ವರ್ ಷರೀಫ್(39) ಬಂತ ಆರೋಪಿಗಳು. ಕುಶಾಲನಗರದ ನೊಬೆಲ್ ಸೆಂಟ್ ಶಾಲೆ ಸಮೀಪದ ರಸ್ತೆ ಬದಿಯ ಪುಟ್‍ಪಾತ್‍ನಲ್ಲಿ ಇಬ್ಬರು ಹಣವನ್ನು ಕಟ್ಟಿಕೊಂಡು ಆರ್‍ಸಿಬಿ ತಂಡ ಗೆದ್ದರೆ 1000 ರೂ.ಗೆ 1200 ರೂ. ಹಾಗೂ ಸಿಎಸ್‍ಕೆ ತಂಡ ಗೆದ್ದರೆ 1000 ರೂ.ಗೆ 700 ರೂ.ಗಳನ್ನು ಕೊಡುತ್ತೇವೆಂದು ಹಣ ಪಡೆದುಕೊಂಡು ಕ್ರಿಕೆಟ್ ಬೆಟ್ಟಿಂಗ್‍ನಲ್ಲಿ ತೊಡಗಿದ್ದರು.

ಈ ಬಗ್ಗೆ ಮಾಹಿತಿ ಪಡೆದ ಪಿಎಸ್‍ಐ ರಾಜೇಶ್ ಹಾಗೂ ಸಿಬ್ಬಂದಿಯೊಂದಿಗೆ ದಾಳಿ ಮಾಡಿ ಆರೋಪಿಗಳನ್ನು ಬಂಧಿಸಿ ಪಣಕ್ಕಿಟ್ಟಿದ ಹಣ ಹಾಗೂ ಮೊಬೈಲ್‍ಗಳನ್ನು ವಶಪಡಿಸಿಕೊಂಡಿದ್ದಾರೆ.

ಕ್ರಿಕೆಟ್ ಬೆಟ್ಟಿಂಗ್‍ನಲ್ಲಿ ಭಾಗಿಯಾದ ಉಳಿದ ಆರೋಪಿಗಳಾದ ಅಲಿ, ಖಾಜಾ, ತಹರೇಜ್ ಹಾಗೂ ಇನ್ನೂ ಕೆಲವರು ಮೊಬೈಲ್ ಪೋನ್‍ನಲ್ಲೇ ಕ್ರಿಕೆಟ್ ಬೆಟ್ಟಿಂಗ್ ದಂಧೆ ನಡೆಸಿದ್ದು , ಆರೋಪಿಗಳ ಕಾರ್ಯ ಮುಂದುವರೆದಿದೆ.

ಡಿಸಿಪಿ ಡಾ.ಶರಣಪ್ಪ , ಎಸಿಪಿ ಜಗದೀಶ್ ಅವರ ಮಾರ್ಗದರ್ಶನದಲ್ಲಿ ಕೆಜಿ ಹಳ್ಳಿ ಠಾಣೆ ಇನ್ಸ್‍ಪೆಕ್ಟರ್ ಸಂತೋಷ್ ಕುಮಾರ್ ಅವರನ್ನೊಳಗೊಂಡ ತಂಡದ ಕಾರ್ಯವನ್ನು ನಗರದ ಪೊಲೀಸ್ ಆಯುಕ್ತರಾದ ಕಮಲ್ ಪಂಥ್ ಹಾಗೂ ಹೆಚ್ಚುವರಿ ಪೊಲೀಸ್ ಆಯುಕ್ತರಾದ ಮುರುಘನ್ ಅವರು ಶ್ಲಾಘಿಸಿರುತ್ತಾರೆ.

Facebook Comments