ಚೆನ್ನೈ ಮಣಿಸಿ 4ನೇ ಬಾರಿಗೆ ಐಪಿಎಲ್ ಚಾಂಪಿಯನ್ ಆದ ಮುಂಬೈ

ಈ ಸುದ್ದಿಯನ್ನು ಶೇರ್ ಮಾಡಿ

ಹೈದರಾಬಾದ್‌. ಮೇ. 13 : ಕಳೆದೊಂದು ತಿಂಗಳಿಂದ ನಡೆಯುತ್ತಿದ್ದ 12ನೇ ಆವೃತ್ತಿಯ ಐಪಿಎಲ್ ಹಬ್ಬಕ್ಕೆ ತೆರೆಬಿದ್ದಿದೆ . ಇಂಡಿಯನ್ ಪ್ರೀಮಿಯರ್ ಲೀಗ್ ಟಿ-20 ಕ್ರಿಕೆಟ್ ಚಾಂಪಿಯನ್‌ಶಿಪ್‌ ಇತಿಹಾಸದಲ್ಲೇ ಮುಂಬೈ ಇಂಡಿಯನ್ಸ್ ತಂಡವು ನಾಲ್ಕನೇ ಬಾರಿಗೆ ಕಿರೀಟವನ್ನು ಮುಡಿಗೇರಿಸಿಕೊಂಡಿದೆ.

ಭಾನುವಾರ ಹೈದರಾಬಾದ್‌ನಲ್ಲಿ ನಡೆದ ಫೈನಲ್ ಪಂದ್ಯದಲ್ಲಿ ಸಾಂಪ್ರಾದಾಯಿಕ ಬದ್ಧ ವೈರಿ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ 1 ರನ್ ಅಂತರದ ಥ್ರಿಲ್ಲಿಂಗ್ ಗೆಲುವು ದಾಖಲಿಸಿರುವ ರೋಹಿತ್ ಶರ್ಮಾ ಮುಂದಾಳತ್ವದ ಮುಂಬೈ ಇಂಡಿಯನ್ಸ್ ಇತಿಹಾಸ ಬರೆದಿದೆ. ಈ ಮೂಲಕ ಮುಂಬೈ 4ನೇ ಬಾರಿಗೆ ಐಪಿಎಲ್ ಕಿರೀಟ ಮುಡಿಗೇರಿಸಿಕೊಂಡು ಇತಿಹಾಸದ ಪುಟ ಸೇರಿತು.

ಮೊದಲು ಬ್ಯಾಟಿಂಗ್‌ ಮಾಡಿದ್ದ ಮುಂಬೈ ಇಂಡಿಯನ್ಸ್‌ ಕರನ್ ಪೊಲಾರ್ಡ್‌ ಅವರ ಅಜೇಯ 41 ರನ್‌ ನೆರವಿನಿಂದ 20 ಓವರ್‌ಗೆ 8 ವಿಕೆಟ್‌ಗೆ 149 ರನ್‌ಗಳಿಸಿತ್ತು. ಈ ಗುರಿ ಬೆನ್ನಟ್ಟಿದ ಚೆನ್ನೈ ತಂಡವು ಶೇನ್‌ ವಾಟ್ಸನ್‌ (80 ರನ್‌) ಅರ್ಧಶತಕ ನೆರವಿನಿಂದ ಗೆಲುವಿನ ಹೋರಾಟ ನಡೆಸಿತಾದರೂ ಕೊನೆಯಲ್ಲಿ ಮುಂಬೈ ಬಿಗಿ ಬೌಲಿಂಗ್‌ ದಾಳಿಗೆ ಸಿಲುಕಿ 20 ಓವರ್‌ಗೆ 7 ವಿಕೆಟ್‌ಗೆ 148 ರನ್‌ಗಳಿಸಿ ಶರಣಾಯಿತು.  ಶೇನ್ ವಾಟ್ಸನ್ 59 ಎಸೆತಗಳಲ್ಲಿ 8 ಬೌಂಡರಿ ಮತ್ತು 4 ಸಿಕ್ಸರ್ ಒಳಗೊಂಡ 80 ರನ್ ಗಳಿಸಿ ಹೋರಾಟ ನಡೆಸಿದರೂ, ಅವರ ಹೋರಾಟ ಫಲ ನೀಡಲಿಲ್ಲ.

# ರೋಚಕ ಗೆಲುವು :
ಕೊನೆಯ 3 ಎಸೆತದಲ್ಲಿ ಚೆನ್ನೈಗೆ 5 ರನ್ ಅವಶ್ಯಕತೆ ಇತ್ತು. 2 ರನ್ ಕದಿಯಲು ಹೋದ ವ್ಯಾಟ್ಸನ್ ರನೌಟ್‌ಗೆ ಬಲಿಯಾದರು. ವ್ಯಾಟ್ಸನ್ 59 ಎಸೆತದಲ್ಲಿ 8 ಬೌಂಡರಿ ಹಾಗೂ 4 ಸಿಕ್ಸರ್ ನೆರವಿನಿಂದ 80 ರನ್ ಸಿಡಿಸಿದರು. ಅಂತಿಮ ಎಸೆತದಲ್ಲಿ 2 ರನ್ ಬೇಕಿತ್ತು. ಕ್ರೀಸ್‌ನಲ್ಲಿದ್ದ ಶಾರ್ದೂಲ್ ಠಾಕೂರ್ ಎಲ್‌ಬಿ ಬಲೆಗೆ ಬಿದ್ರು. ಈ ಮೂಲಕ ಮುಂಬೈ ಇಂಡಿಯನ್ಸ್ 1 ರನ್‌ಗಳ ರೋಚಕ ಗೆಲುವು ಸಾಧಿಸಿತು.

# ಮುಂಬೈ 5 ಸಲ ಫೈನಲ್ :
ಒಟ್ಟು 5 ಸಲ ಫೈನಲ್ ಪ್ರವೇಶ ಪಡೆದಿರುವ ಮುಂಬೈ 4 ಬಾರಿ ಟ್ರೋಫಿ ಗೆದ್ದಿದೆ. 2013, 15, 17, 19 ರಲ್ಲಿ ಜಯ ಗಳಿಸಿದೆ. ಇನ್ನು ಐಪಿಎಲ್ ಫೈನಲ್ ನಲ್ಲಿ ಕೇವಲ ಒಂದೇ ಒಂದು ರನ್ ಅಂತರದಿಂದ ಗೆದ್ದ ಸಾಧನೆಯನ್ನು ಮುಂಬೈ 2 ಸಲ ಮಾಡಿದೆ. ಭಾನುವಾರ ನಡೆದ ಪಂದ್ಯದಲ್ಲಿ ಚೆನ್ನೈ ವಿರುದ್ಧ 1 ರನ್ ಥ್ರಿಲ್ಲಿಂಗ್ ಗೆಲುವು ದಾಖಲಿಸಿದ ಮುಂಬೈ 2017 ರಲ್ಲಿ ಪುಣೆಯ ವಿರುದ್ಧ 1 ರನ್ ಅಂತರದಿಂದ ಗೆದ್ದು ಟ್ರೋಫಿ ಎತ್ತಿ ಹಿಡಿದಿತ್ತು.

# ವಿಜೇತರಿಗೆ ದೊರೆತ ಮೊತ್ತ :
20 ಕೋಟಿ ಮುಂಬೈ (ವಿನ್ನರ್‌)
12.5 ಕೋಟಿ ಚೆನ್ನೈ (ರನ್ನರ್‌ ಅಪ್‌)
10.5 ಕೋಟಿ ಡೆಲ್ಲಿ (ತೃತೀಯ ಸ್ಥಾನ)
8.5 ಕೋಟಿ ಹೈದರಾಬಾದ್‌ (4ನೇ ಸ್ಥಾನ)

Facebook Comments

( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ ) > #ವಾಟ್ಸಾಪ್‌ನಲ್ಲಿ ಸುದ್ದಿಗಳನ್ನು ಪಡೆಯಲು 7795582478 ಸಂಖ್ಯೆಯನ್ನು ನಿಮ್ಮ ಮೊಬೈಲ್ ನಲ್ಲಿ SAVE ಮಾಡಿಕೊಂಡು HI EESANJE ಎಂದು ಸಂದೇಶ ಕಳಿಸಿ

Sri Raghav

Admin