ಆರ್‌ಸಿಬಿ ಒಮ್ಮೆಯೂ ಚಾಂಪಿಯನ್ ಅಗದಿರಲು ಕಾರಣ ಬಿಚ್ಚಿಟ್ಟ ಕೊಹ್ಲಿ..!

ಈ ಸುದ್ದಿಯನ್ನು ಶೇರ್ ಮಾಡಿ

ನವದೆಹಲಿ, ಮಾ.17-ತಪ್ಪು ನಿರ್ಧಾರಗಳಿಂದಲೇ ಐಪಿಎಲ್‍ನಲ್ಲಿ ಆರ್‌ಸಿಬಿ ಕಪ್ ಗೆಲ್ಲುವಲ್ಲಿ ಫೇವರೇಟ್ ತಂಡ ಎನಿಸಿಕೊಂಡಿದ್ದರೂ ಒಂದು ಬಾರಿಯೂ ಚಾಂಪಿಯನ್ ಆಗಿ ಹೊರ ಹೊಮ್ಮಲು ಸಾಧ್ಯವಾಗಿಲ್ಲ ಎಂದು ಆರ್‌ಸಿಬಿ ನಾಯಕ ವಿರಾಟ್ ಕೊಹ್ಲಿ ಇಂದಿಲ್ಲಿ ತಮ್ಮ ಮನದಾಳವನ್ನು ಬಿಚ್ಚಿಟ್ಟಿದ್ದಾರೆ.

ಐಪಿಎಲ್‍ನ 11 ಆವೃತ್ತಿಗಳಲ್ಲೂ ತಂಡದಲ್ಲಿ ಬಲಿಷ್ಠ ಆಟಗಾರರಿದ್ದರು. ಆದ್ದರಿಂದಲೇ ನಾವು ಇದುವರೆಗೂ ನಡೆದಿರುವ ಐಪಿಎಲ್ ಋತುವಿನಲ್ಲಿ ಮೂರು ಬಾರಿ ಫೈನಲ್ಸ್ ಹಾಗೂ ಮೂರು ಬಾರಿ ಸೆಮಿ ಫೈನಲ್ಸ್ ತಲುಪಿದ್ದೆವು. ಆದರೆ ತಂಡದ ನಾಯಕನೂ ಸೇರಿದಂತೆ ಆಡಳಿತ ಮಂಡಳಿ ತೆಗೆದುಕೊಂಡ ಕೆಲವು ತಪ್ಪು ನಿರ್ಧಾರಗಳಿಂದ ಇದುವರೆಗೂ ಕಪ್ ಗೆಲ್ಲಲು ಸಾಧ್ಯವಾಗಿಲ್ಲವೆಂದು ಕೊಹ್ಲಿ ಹೇಳಿದ್ದಾರೆ.

ಐಪಿಎಲ್ 12 ಆವೃತ್ತಿಗೆ ದಿನಗಣನೆ ಆರಂಭವಾಗಿರುವುದರಿಂದ ಆರ್‌ಸಿಬಿಯು ತನ್ನ ಆ್ಯಪನ್ನು ಇಂದು ಅನಾವರಣಗೊಳಿಸಿದೆ. ತಂಡದ ಕೋಚ್‍ಗಳಾದ ಆಶೀಶ್ ನೆಹ್ರಾ , ಗ್ಯಾರಿ ಕ್ರಿಸ್ಟಲ್ ಕೂಡ ಹಾಜರಿದ್ದರು. ಈ ವೇಳೆ ಕೊಹ್ಲಿ ಮಾತನಾಡಿ, ಒಂದು ಉತ್ತಮ ಸವಾಲಿನ ಪಂದ್ಯವನ್ನು ಗೆಲ್ಲಬೇಕಾದರೆ ನಿರ್ಧಾರಗಳು ಅಚಲವಾಗಿರಬೇಕು. ಒಂದು ವೇಳೆ ಅವುಗಳು ಕೈ ಕೊಟ್ಟರೆ ಪಂದ್ಯವನ್ನು ಸೋಲಬೇಕಾಗುತ್ತದೆ.

ವಿಶ್ವಕಪ್ ಆವೃತ್ತಿ ಆರಂಭಗೊಳ್ಳುವ ಮುಂಚೆಯೇ ಐಪಿಎಲ್ ಆರಂಭಗೊಂಡಿದ್ದು , ಇದರಲ್ಲಿ ಭಾರತ ತಂಡದ ಬಹುತೇಕ ಎಲ್ಲಾ ಆಟಗಾರರು ಪಾಲ್ಗೊಳ್ಳಬೇಕಾಗಿದೆ. ವಿಶ್ವಕಪ್‍ನ ದೃಷ್ಟಿಯಿಂದ ಆಟಗಾರರಿಗೆ ಐಪಿಎಲ್ ಒಂದು ಉತ್ತಮ ವೇದಿಕೆಯಾಗಿದ್ದರೂ ಕೂಡ ಒಂದು ವೇಳೆ ಗಾಯಾಳುಗಳಾದರೆ ಭಾರತ ತಂಡದ ಮೇಲೆ ಪರಿಣಾಮವಾಗಲಿದೆ ಎಂದು ಕೊಹ್ಲಿ ಇದೇ ಸಂದರ್ಭದಲ್ಲಿ ಹೇಳಿದರು.

ಆರ್‌ಸಿಬಿ ಆ್ಯಪ್‍ನ್ನು ಬೆಂಗಳೂರು ತಂಡವನ್ನು ಪ್ರೋತ್ಸಾಹಿಸುವ ದೃಷ್ಟಿಯಿಂದಲೇ ಬಿಡುಗಡೆ ಮಾಡಲಾಗಿದ್ದು , ಈ ಬಾರಿಯಾದರೂ ಆರ್‌ಸಿಬಿ ತಂಡವು ಚಾಂಪಿಯನ್ ಆಗಿ ಹೊರ ಹೊಮ್ಮಲಿ ಎಂಬ ಅಭಿಮಾನಿಗಳ ಶುಭಾಶಯ ಕೂಡ ಇದೆ.

ಆರ್‌ಸಿಬಿಯು ಈ ಬಾರಿ ಆರಂಭಿಕ ಪಂದ್ಯದಲ್ಲಿಯೇ ಕಠಿಣ ಸವಾಲನ್ನು ಎದುರಿಸುತ್ತಿದ್ದು , ಮಾ.23ರಂದು ನಡೆಯಲಿರುವ ಪಂದ್ಯದಲ್ಲಿ ಕಳೆದ ಬಾರಿ ಚಾಂಪಿಯನ್ಸ್ ಆಗಿರುವ ಮಹೇಂದ್ರ ಸಿಂಗ್ ಧೋನಿ ಸಾರಥ್ಯದ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ಎದುರಿಸಲಿದ್ದು , ಈ ಪಂದ್ಯವನ್ನು ಗೆಲ್ಲುವ ಮೂಲಕ ಹುಮ್ಮಸ್ಸನ್ನು ಹೆಚ್ಚಿಸಿಕೊಳ್ಳಲಿದ್ದೇವೆ ಎಂದು ಕೊಹ್ಲಿ ತಿಳಿಸಿದರು.

Facebook Comments