ಸ್ಪಿನ್ ಬಲ ಹೆಚ್ಚಿಸಿಕೊಂಡ ಆರ್‌ಸಿಬಿ: ಕೇನ್ ಔಟ್, ಜಂಪಾ ಇನ್

ಈ ಸುದ್ದಿಯನ್ನು ಶೇರ್ ಮಾಡಿ

ದುಬೈ, ಸೆ.1- ಐಪಿಎಲ್ 13 ಆವೃತ್ತಿಯಲ್ಲಿ ಚಾಂಪಿಯನ್ಸ್ ಆಗಲು ರಣತಂತ್ರ ರೂಪಿಸುತ್ತಿರುವ ವಿರಾಟ್ ಕೊಹ್ಲಿ ಸಾರಥ್ಯದ ರಾಯಲ್‍ಚಾಲೆಂಜರ್ಸ್ ಬೆಂಗಳೂರು ತಂಡವು ಸ್ಪಿನ್ವಿ ಭಾಗವನ್ನು ಬಲಿಷ್ಠಗೊಳಿಸಲು ಮುಂದಾಗಿದೆ.

ಐಪಿಎಲ್ ಹರಾಜಿನಲ್ಲಿ 4 ಕೋಟಿಗೆ ಬಿಕರಿಯಾಗಿದ್ದ ಆಸ್ಟ್ರೇಲಿಯಾದ ವೇಗಿ ಕೇನ್ ರಿಚರ್ಡ್‍ಸನ್ ತಂದೆ ಯಾಗಿರುವುದರಿಂದ ಆ ಸಂತಸವ ನ್ನುಕುಟುಂಬದವರೊಂದಿಗೆ ಕಳೆಯಲೆಂದು ತವರಿಗೆ ಹಿಂದಿರುಗಿರುವುದರಿಂದ ಐಪಿಎಲ್ 13 ರಿಂದ ಬಹುತೇಕ ಕೇನ್ ಔಟಾಗಿದ್ದು ಅವರ ಸ್ಥಾನದಲ್ಲಿ ಆಸ್ಟ್ರೇಲಿಯಾದ ಖ್ಯಾತ ಸ್ಪಿನ್ನರ್ ಆ್ಯಡಂ ಜಂಪಾರನ್ನು ಆರ್‍ಸಿಬಿ ಖರೀದಿಸಿದೆ.

2017ರಲ್ಲಿ ರೈಸಿಂಗ್ ಪುಣೆ ಜೆಂಟ್ಸ್ ಪರ ಆಡಿದ್ದ ಜಂಪಾ 11 ಪಂದ್ಯಗಳಿಂದ 19 ವಿಕೆಟ್‍ಗಳನ್ನು ಕಬಳಿಸಿ ತಂಡವನ್ನು ಫೈನಲ್‍ಗೇರಿಸಿದ್ದರೂ, ನಂತರದ ಆವೃತ್ತಿಗಳಲ್ಲಿ ಅವರು ಆನ್‍ಸೋಲ್ಡ್ ಆಗಿ ಉಳಿದಿದ್ದರು.

ಈ ಬಾರಿಯ ಐಪಿಎಲ್ ಹರಾಜಿನಲ್ಲೂ ಆ್ಯಡಂ ಜಂಪಾ ಹರಾಜಾಗದೆ ಉಳಿದಿದ್ದರು, ಈಗ ಕೇನ್‍ರಿಚರ್ಡ್‍ಸನ್ ತವರಿಗೆ ಹಿಂದಿಗಿರುವುದರಿಂದ ಅವರ ಜಾಗದಲ್ಲಿ ಆ್ಯಡಂ ಜಂಪಾ ಅವರಿಗೆ ಸ್ಥಾನ ಕಲ್ಪಿಸಲಾಗಿದೆ. ದುಬೈ ಪಿಚ್‍ಗಳು ಸ್ಪಿನ್ನರ್‍ಗಳಿಗೆ ಸ್ಪಂದಿಸಲಿದ್ದು ಆರ್‍ಸಿಬಿ ಬೌಲಿಂಗ್ ಪಡೆ ಹೆಚ್ಚಾಗಿದೆ, ತಂಡದಲ್ಲಿ ಈಗಾಗಲೇ ಯಜುವೇಂದ್ರ ಚಹಾಲ್, ಪವನ್ ನೇಗಿ, ಮೊಹಿನ್ ಅಲಿ, ವಾಷ್ಟಿಂಗನ್ ಸುಂದರ್‍ರಂತಹ ಶ್ರೇಷ್ಠ ಸ್ಪಿನ್ನರ್‍ಗಳಿದ್ದು ಈಗ ಜಂಪಾರ ಸೇರ್ಪಡೆಯಿಂದ ಸ್ಪಿನ್ ಪಡೆ ಮತ್ತಷ್ಟು ಸದೃಢವಾಗಿದ್ದು ಎದುರಾಳಿ ಬ್ಯಾಟ್ಸ್ ಮನ್‍ಗಳ ರನ್ ದಾಹಕ್ಕೆ ಬ್ರೇಕ್ ಹಾಕಲು ಅನುಕೂಲವಾಗಿದೆ.

Facebook Comments