ಬೆಂಗಳೂರು ಪ್ರವೇಶಿಸದಂತೆ ಅಂಗನವಾಡಿ ಕಾರ್ಯಕರ್ತೆಯರಿಗೆ ಪೊಲೀಸ್ ಆಯುಕ್ತರ ಸೂಚನೆ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಡಿ.10- ಕರ್ನಾಟಕ ರಾಜ್ಯ ಅಂಗನವಾಡಿ ನೌಕರರ ಸಂಘದ ರಾಜ್ಯಾಧ್ಯಕ್ಷೆ ವರಲಕ್ಷ್ಮಿ ಅವರ ನೇತೃತ್ವದಲ್ಲಿ ಕಾಲ್ನಡಿಗೆಯಲ್ಲಿ ಆಗಮಿಸುವ ಅಂಗನವಾಡಿ ನೌಕರರು ಹಾಗೂ ಪ್ರತಿಭಟನೆ ನಡೆಸಲು ಉದ್ದೇಶಿಸಿರುವ ಇತರೆ ಯಾವುದೇ ಕಾರ್ಯಕರ್ತೆಯರು ಇಂದಿನಿಂದ ಹದಿನೈದು ದಿನಗಳವರೆಗೆ ನಗರ ಪ್ರವೇಶಿಸದಂತೆ ಬೆಂಗಳೂರು ನಗರ ಪೊಲೀಸ್ ಆಯುಕ್ತ ಭಾಸ್ಕರರಾವ್ ನಿಷೇಧಾಜ್ಞೆ ಜಾರಿಗೊಳಿಸಿದ್ದಾರೆ.

ಅಂಗನವಾಡಿ ನೌಕರರು ಮತ್ತು ಸಹಾಯಕಿಯರು ವಿವಿಧ ಬೇಡಿಕೆಗಳನ್ನು ಮುಂದಿಟ್ಟುಕೊಂಡು ತುಮಕೂರಿನಿಂದ ಇಂದು ಕಾಲ್ನಡಿಗೆ ಜಾಥಾ ಹೊರಟು ಡಿ.12 ರಂದು ನಗರದ ಫ್ರೀಡಂಪಾರ್ಕ್ ಮೈದಾನಕ್ಕೆ ಬರುವುದಕ್ಕೆ ಅನುಮತಿ ಕೋರಿದ್ದು, ನಗರ ಸಂಚಾರ ದಟ್ಟಣೆಯ ಕಾರಣದಿಂದ ಆಯುಕ್ತರು ಅನುಮತಿ ನಿರಾಕರಿಸಿದ್ದಾರೆ.

ಈ ಹಿಂದೆ ಮೂರು ದಿನಗಳ ಕಾಲ ನಡೆಸಿದ ಪ್ರತಿಭಟನೆಯಿಂದಾಗಿ ಬಹುತೇಕ ವಾಹನಗಳ ಸಂಚಾರಕ್ಕೆ ಅಡಚಣೆಯಾಗಿ ಸಾರ್ವಜನಿಕರಿಗೆ ಹಾಗೂ ಪ್ರಮುಖ ಆಸ್ಪತ್ರೆಗಳಿಗೆ ಸೇರಿದ ಆ್ಯಂಬುಲೆನ್ಸ್‍ಗಳ ಓಡಾಟಕ್ಕೆ ಅಡಚಣೆಯಾಗಿ ಅನಾನುಕೂಲವಾಗಿರುತ್ತದೆ. ಈ ಹಿನ್ನೆಲೆಯಲ್ಲಿ ಶಾಂತಿ-ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಅನುಮತಿ ನಿರಾಕರಿಸಿ ಆಯುಕ್ತರು ನಿಷೇಧಾಜ್ಞೆ ಜಾರಿಗೊಳಿಸಿದ್ದಾರೆ.

Facebook Comments