ರಫೇಲ್ ಜೆಟ್‍ಗಳಿದ್ದ ಯುಎಇ ವಾಯು ನೆಲೆ ಬಳಿ ಇರಾನ್‌ನಿಂದ ಕ್ಷಿಪಣಿ ದಾಳಿ..!

ಈ ಸುದ್ದಿಯನ್ನು ಶೇರ್ ಮಾಡಿ

ಅಲ್‍ಧಪ್ರಾ ವಾಯು ನೆಲೆ (ಅಬುದಾಬಿ), ಜು.29-ಫ್ರಾನ್ಸ್‍ನಿಂದ ಭಾರತಕ್ಕೆ ಆಗಮಿಸುವ ಮಾರ್ಗದಲ್ಲಿ ಸಂಯುಕ್ತ ಆರಬ್ ಗಣರಾಜ್ಯದ(ಯುನೈಟೆಡ್ ಅರಬ್ ಎಮಿರೆಟ್ಸ್ ಯುಎಇ) ಅಲ್‍ಧಪ್ರಾ ವಾಯು ನೆಲೆಯಲ್ಲಿ ಇಳಿಸಿದ್ದ ಐದು ರಫೇಲ್ ಫೈಟರ್ ಜೆಟ್‍ಗಳ ಸಮೀಪವೇ ಇರಾನ್‍ನ ಮೂರು ಕ್ಷಿಪಣಿಗಳ ಬಿದ್ದ ಘಟನೆ ತಡ ರಾತ್ರಿ ನಡೆದಿದೆ.

ಈ ಘಟನೆ ಹಿನ್ನೆಲೆಯಲ್ಲಿ ಯುಎಇ ಮತ್ತು ಕತಾರ್ ವಾಯು ನೆಲೆಗಳ ಬಳಿ ತೀವ್ರ ಕಟ್ಟೆಚ್ಚರ ವಹಿಸಲಾಗಿದೆ. ಯುಎಇ ರಾಜಧಾನಿ ಅಬು ಧಾಬಿಯ ಸಮೀಪ ಇರುವ ಅಲ್‍ಧಪ್ರಾ ಏರ್ ಬೇಸ್‍ನಲ್ಲಿ ಫ್ರಾನ್ಸ್‍ನಿಂದ ಭಾರತಕ್ಕೆ ಹೊರಟಿದ್ದ ಐದು ರಫೇಲ್ ಯುದ್ಧ ವಿಮಾನಗಳು ಮಂಗಳವಾರ ರಾತ್ರಿ ಇಳಿದಿದ್ದವು.

ಇದೇ ಸಂದರ್ಭದಲ್ಲಿ ಇರಾನ್‍ನ ರೆವೆಲ್ಯೂಷನರಿ ಗಾಡ್ರ್ಸ್ ಸೇನಾಪಡೆ ಉಡಾಯಿಸಿದ್ದ ಮೂರು ಕ್ಷಿಪಣಿಗಳು ವಾಯು ನೆಲೆ ಸಮೀಪವೇ ಬಿದ್ದವು. ಆದರೆ, ಈ ಮಿಸೈಲ್‍ಗಳು ನೀರಿನಲ್ಲಿ ಬಿದ್ದ ಕಾರಣ ಯಾವುದೇ ಅನಾಹುತ ಸಂಭವಿಸಲಿಲ್ಲ.

ಇರಾನ್ ಸೇನಾ ಪಡೆ ಸಮರಾಭ್ಯಾಸ ನಡೆಸುತ್ತಿದ್ದ ಸಂದರ್ಭದಲ್ಲಿ ಈ ಕ್ಷಿಪಣಿಗಳು ವಾಯುನೆಲೆ ಸಮೀಪ ಬಿದ್ದಿವೆ ಎಂದು ವರದಿಗಳು ಹೇಳುತ್ತಿವೆಯಾದರೂ ಇದು ಆಕಸ್ಮಿಕವೋ ಅಥವಾ ಉದ್ದೇಶಪೂರ್ವಕವೋ ಎಂಬ ಬಗ್ಗೆ ತನಿಖೆ ನಡೆಯುತ್ತಿದೆ.

ಅಮೆರಿಕದ ವಾರ್ತಾ ವಾಹಿನಿ ಸಿಎನ್‍ಎನ್ ಮತ್ತು ಫಾಕ್ಸ್ ನ್ಯೂಸ್ ಚಾನೆಲ್‍ಗಳು ಅಲ್ ಧಪ್ರಾ ವಾಯು ನೆಲೆ ಬಳಿ ಇರಾನ್‍ನ ಮೂರು ಕ್ಷಿಪಣಿಗಳು ಬಿದ್ದ ಘಟನೆಯನ್ನು ದೃಢಪಡಿಸಿವೆ.

ಆದರೆ, ವಾಯು ನೆಲೆಯ ಉನ್ನತಾಧಿಕಾರಿಗಳು ಏರ್‍ಬೇಸ್ ಹೊರಗೆ ಕ್ಷಿಪಣಿಗಳು ಬಿದ್ದಿರಬಹುದು. ಆದರೆ, ನೆಲೆಗೆ ಯಾವುದೇ ಹಾನಿಯಾಗಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಈ ಘಟನೆ ಹಿನ್ನೆಲೆಯಲ್ಲಿ ಯುಎಇಯ ಅಲ್‍ಧಪ್ರಾ ಮತ್ತು ಕತಾರ್‍ನ ಅಲ್ ಉದೈದ್‍ನಲ್ಲಿನ ಅಮೆರಿಕ ವಾಯು ನೆಲೆಗಳಲ್ಲಿ ತೀವ್ರ ಕಟ್ಟೆಚ್ಚರ ವಹಿಸಲಾಗಿದೆ.

ಈ ವಾಯು ನೆಲೆಗಳ ಸಮೀಪವೇ ಇರಾನ್ ರೆವಲ್ಯೂಷನರಿ ಗಾಡ್ರ್ಸ್ ಸೇನಾ ಪಡೆ ಯುದ್ಧಾಭ್ಯಾಸ ನಡೆಸುತ್ತಿದ್ದ ವೇಳೆ ಆಕಸ್ಮಿಕವಾಗಿ ಮೂರು ಕ್ಷಿಪಣಿಗಳು ಏರ್‍ಬೇಸ್ ಸಮೀಪ ನೀರಿನಲ್ಲಿ ಬಿದ್ದಿರಬಹುದು ಎಂದು ಉನ್ನತಾಧಿಕಾರಿಯೊಬ್ಬರು ತಿಳಿಸಿದ್ದಾರೆ.

Facebook Comments

Sri Raghav

Admin