ಬಣ್ಣದ ಲೋಕಕ್ಕೆ ಇರ್ಫಾನ್, ಹರ್ಭಜನ್

ಈ ಸುದ್ದಿಯನ್ನು ಶೇರ್ ಮಾಡಿ

ನವದೆಹಲಿ, ಅ.16- ಬಣ್ಣದ ಲೋಕಕ್ಕೆ ಈಗಾಗಲೇ ಹಲವು ಕ್ರಿಕೆಟಿಗರು ಬಂದಿದ್ದಾರೆ, ಈಗ ಅದೇ ಸಾಲಿಗೆ ಇರ್ಫಾನ್ ಪಠಾಣ್ ಹಾಗೂ ಹರ್ಭಜನ್‍ಸಿಂಗ್ ಅವರು ಸೇರಿದ್ದಾರೆ.
ಕ್ರಿಕೆಟ್ ಅಂಗಳದಲ್ಲಿ ತಮ್ಮ ಬೌಲಿಂಗ್‍ನಿಂದ ಜಾದೂ ಮಾಡಿದ್ದ ಇರ್ಫಾನ್ ಹಾಗೂ ಭಜ್ಜಿ ಈಗ ತಮಿಳು ಚಿತ್ರರಂಗದಲ್ಲಿ ಗುರುತಿಸಿಕೊಳ್ಳುವ ಮೂಲಕ ಬಣ್ಣದ ಲೋಕಕ್ಕೆ ಮಿಂಚಲು ಹೊರಟಿದ್ದಾರೆ.

ನಿರ್ದೇಶಕ ಆರ್.ಅಜಯ್ ಜ್ಞಾನಮುತ್ತು ಅವರು ನಿರ್ದೇಶಿಸಿ ವಿಕ್ರಮ್ ನಟಿಸಿರುವ ವಿಕ್ರಮ್ 58ರಲ್ಲಿ ಇರ್ಫಾನ್ ಪಠಾಮ್ ನಟಿಸಿದರೆ, ಕಾರ್ತಿಕ್ ಯೋಗಿ ನಿರ್ದೇಶಿಸಿರುವ ಡಿಕ್ಕಿಲುನಾದಲ್ಲಿ ಭಜ್ಜಿ ನಟಿಸುತ್ತಿದ್ದು ಈ ವಿಷಯವನ್ನು ಅವರು ತಮ್ಮ ವೈಬ್‍ಸೈಟ್‍ಗಳಲ್ಲಿ ಹಂಚಿಕೊಂಡಿರುವುದೇ ಅಲ್ಲದೆ ತಮಿಳು ಚಿತ್ರರಂಗಕ್ಕೆ ಶುಭಾಶಯ ಕೋರಿದ್ದಾರೆ.

Facebook Comments