ಜಗತ್ತಿಗೆ ಕಂಟಕವಾದ ಚೀನಾ ಈ 5 ಪ್ರಶ್ನೆಗಳಿಗೆ ಉತ್ತರಿಸುವುದೇ..?

ಈ ಸುದ್ದಿಯನ್ನು ಶೇರ್ ಮಾಡಿ

ನವದೆಹಲಿ, ಏ.14-ಕಳೆದ ವರ್ಷ ಚೀನಾದ ಹೆಬೀ ಪ್ರಾಂತ್ಯದ ವುಹಾನ್ ನಗರಿಯಲ್ಲಿ ಸಣ್ಣದಾಗಿ ಕಾಣಿಸಿಕೊಂಡ ಕೊರೊನಾ ವೈರಸ್ ಇದು ಜಗತ್ತಿನಾದ್ಯಂತ ಕಬಂಧ ಬಾಹುಗಳನ್ನು ವಿಸ್ತರಿಸಿ ವ್ಯಾಪಕ ಸಾವು-ನೋವು ಮತ್ತು ಸೋಂಕು ವ್ಯಾಪನೆಗೆ ಕಾರಣವಾಗಿದೆ.

ಕೋವಿಡ್-19 ವೈರಸ್ ಬೀರುತ್ತಿರುವ ದುಷ್ಟ ಪ್ರಭಾವ ಊಹಾತೀತವಾಗಿದ್ದು, ಇಡೀ ಜಗತ್ತೇ ಕಂಗೆಟ್ಟಿದೆ.
ಕಿಲ್ಲರ್ ವೈರಸ್‍ನ ಉಗಮ ಸ್ಥಾನವಾದ ವುಹಾನ್ ಸಿಟಿ ಸೇರಿದಂತೆ ಮೂರು ತಿಂಗಳಿಗೂ ಹೆಚ್ಚು ಕಾಲ ಚೀನಾ ವಿಧಿಸಿದ್ದ ಲಾಕ್‍ಡೌನ್ ತೆರವುಗೊಳಿಸಿದೆ. ಅಲ್ಲದೇ ತನ್ನ ದಿನನಿತ್ಯದ Zಟುವಟಿಕೆಗಳು ಆರಂಭಿಸಿದೆ.

ಏಷ್ಯಾದ ಆರ್ಥಿಕ ಪ್ರಬಲ ದೇಶವಾದ ಚೀನಾಗೆ ಇದು ಸಂತಸದ ಸಂಗತಿಯಾದರೂ, ಜಗತ್ತಿನ ಯಾವ ದೇಶಗಳೂ ಕೂಡ ಕೊರೊನಾ ವಜ್ರ ಮುಷ್ಟಿಯಿಂದ ಸಡಿಲಗೊಂಡಿಲ್ಲ. ಚೀನಾ ನೀಡುವ ಯಾವುದೇ ಸುದ್ದಿಯನ್ನು ನಂಬುವ ಸ್ಥಿತಿಯಲ್ಲಿ ಈ ಜಗತ್ತು ಇಲ್ಲ.

ಈಗಾಗಲೇ ಡೆಡ್ಲಿ ಕೊರೊನಾ ವಿಷಯದಲ್ಲಿ ಸಾಕಷ್ಟು ಸುಳ್ಳು ಹೇಳಿಕೆಗಳನ್ನು ನೀಡಿ ಸಾವು-ನೋವಿನ ಬಗ್ಗೆ ತಪ್ಪು ಮಾಹಿತಿಗಳನ್ನು ಕೊಟ್ಟು ಅಂತಾರಾಷ್ಟ್ರೀಯ ಸಮುದಾಯದ ದಿಕ್ಕು ತಪ್ಪಿಸಿರುವ ಚೀನಾದ ಧೋರಣೆ ಜಗಜ್ಜಾಹೀರವಾಗಿದೆ.

ಈವರೆಗೆ ತನ್ನ ದೇಶದಲ್ಲಿ ಸುಮಾರು 4,800 ಮಂದಿ ಮಾತ್ರ ಮೃತಪಟ್ಟಿದ್ದಾರೆ ಎಂದು ಚೀನಾ ಬೊಗಳೆ ಬಿಟ್ಟಿದೆ. ಆದರೆ ದೂರದ ಅಮೆರಿಕದಲ್ಲೇ 23,000 ಮಂದಿ ಸತ್ತಿರುವಾಗ, ವೈರಸ್ ಉಗಮ ಸ್ಥಾನದಲ್ಲಿ ಅತ್ಯಲ್ಪ ಸಂಖ್ಯೆ ಸಾವು ಸಂಭವಿಸಿರುವುದನ್ನು ನಂಬಲು ಜಗತ್ತು ಮೂರ್ಕವಲ್ಲ. ಅನಧಿಕೃತ ಮೂಲಗಳ ಪ್ರಕಾರ ಚೀನಾದಲ್ಲಿ ಈವರೆಗೆ 60,000ಕ್ಕೂ ಹೆಚ್ಚು ಮಂದಿ ಮೃತಪಟ್ಟಿದ್ದಾರೆ. ಆದರೆ ಈ ಬಗ್ಗೆ ಚೀನಾ ವಿಶ್ವ ಆರೋಗ್ಯ ಸಂಸ್ಥೆಯ ದಿಕ್ಕನ್ನೇ ತಪ್ಪಿಸಿದೆ.  ಈಗ ಎಲ್ಲರೂ ಚೀನಾವನ್ನು ಐದು ಮುಖ್ಯ ಪ್ರಶ್ನೆಗಳನ್ನು ಕೇಳಿ ಉತ್ತರ ಬಯಸಿದ್ದಾರೆ.

# ಪ್ರಶ್ನೆ 1 : ಕೋವಿಡ್-19 ವೈರಸ್ ಬಂದಿದ್ದು ಏಲ್ಲಿಂದ ?
ಇಡೀ ವಿಶ್ವದ ಚೀನಾವನ್ನು ಕೇಳುತ್ತಿರುವ ಮೊದಲ ಪ್ರಶ್ನೆ ಇದಾಗಿದೆ. ವೈರಸ್ ಹೇಗೆ ಉಗಮವಾಯಿತು. ಇದು ವಿವಿಧ ಪ್ರಾಣಿಗಳನ್ನು ಮಾರಾಟ ಮಾಡುವ ಮಾರುಕಟ್ಟೆಗಳಿಂದಲೇ ? ಹಾಗಿದ್ದರೆ, ಕೋವಿಡ್-21 ಮತ್ತು ಕೋವಿಡ್-22 ಆತಂಕವೂ ಇರಬೇಕಲ್ಲವೇ.. ? ಚೀನಾದ ಕುಖ್ಯಾತ ಪ್ರಯೋಗಾಲಯಗಳಿಂದ ಈ ಕಿಲ್ಲರ್ ವೈರಸ್ ಹಬ್ಬಿತೇ ? ಹಾಗಾದರೆ ತಪ್ಪಿತಸ್ಥರನ್ನು ಚೀನಾ ಏಕೆ ಶಿಕ್ಷಿಸಿಲ್ಲ? ವಾಸ್ತವ ಸಂಗತಿಗಳನ್ನು ಚೀನಾ ಕೊರೊನಾ ಮೃತರಂತೆಯೇ ಮಣ್ಣಿನೊಳಗೆ ಸಮಾಧಿ ಮಾಡಿದೆಯೇ ?

# ಪ್ರಶ್ನೆ 2- ರೋಗಿಗಳಿಗೆ ಚೀನಾ ಹೇಗೆ ಆರೈಕೆ ಮಾಡಿತು..?
ಚೀನಾದಲ್ಲಿ 80,000ಕ್ಕೂ ಹೆಚ್ಚು ಕೊರೊನಾ ಪಾಸಿಟಿವ್ ಪ್ರಕರಣಗಳು ವರದಿಯಾಗಿವೆ ಎಂದು ಹೇಳಿದೆ. ಇವರಲ್ಲಿ ಬಹುತೇಕ ಮಂದಿ ಗುಣಮುಖರಾಗಿದ್ದಾರೆ/ಚೇತರಿಸಿಕೊಂಡಿದ್ದಾರೆ ಎಂಬ ಹೇಳಿಕೆಯನ್ನೂ ಕೊಟ್ಟಿದೆ. ಇದು ನಿಜವೇ? ಸಾಂಪ್ರದಾಯಿಕ ಅಥವಾ ರೂಢಿಗತ ಔಷಧಿಗಳಿಂದ ಇಷ್ಟೊಂದು ಸೋಂಕಿತರು ಸಾವಿನ ದವಡೆಯಿಂದ ಪಾರಾದರೇ? ಇದನ್ನು ವಿಶ್ವಕ್ಕೆ ಚೀನಾ ಪರಿಣಾಮಕಾರಿಯಾಗಿ ಏಕೆ ಮಾಹಿತಿ ನೀಡಿ ಜಗತ್ತನ್ನು ಸಂಕಷ್ಟದಿಂದ ಪಾರು ಮಾಡುತ್ತಿಲ್ಲ.

ಭಾರತವು ತೀವ್ರ ಸಂಕಷ್ಟದಲ್ಲಿದ್ದರೂ 30ಕ್ಕೂ ಹೆಚ್ಚು ದೇಶಗಳಿಗೆ ಹೈಡ್ರೋಕ್ಲೋರೊಕ್ವೇನ್(ಎಚ್‍ಸಿಕ್ಯೂ) ಮೊದಲಾದ ಜೀವ ರಕ್ಷಕ ಔಷಧಿಗಳನ್ನು ನೀಡಿ ಉಪಕರಿಸಿದೆ. ಆದರೆ ಚೀನಾ ಕೆಲವು ದೇಶಗಳಿಗೆ ರವಾನಿಸಿರುವ ಕೊರೊನಾ ಕಿಟ್‍ಗಳು ಮತ್ತು ಔಷಧಿಗಳು ಅತ್ಯಂತ ಕಳಪೆಯಾಗಿವೆ.

# ಪ್ರಶ್ನೆ 3-ಸಂಶೋಧನೆ ಏನು ಹೇಳುತ್ತದೆ ?
ಚೀನಾ ಭಾರತವು ರವಾನಿಸಿದ ಎಚ್‍ಸಿಕ್ಯೂ ಔಷಧಿಯನ್ನು ನಿರಾಕರಿಸಿ ಉದ್ಧಟನ ಪ್ರದರ್ಶಿಸಿದೆ. ಅಲ್ಲದೇ ಪರ್ಯಾಯ ಔಷಧಿಯನ್ನೂ ತಿಳಿಸಿಲ್ಲ. ಕೊರೊನಾ ನಿಯಂತ್ರಣಕ್ಕೆ ನಿರಂತರ ಸಂಶೋಧನೆ ನಡೆಯುತ್ತಿದೆ ಎಂದು ಕೊಚ್ಚಿಕೊಂಡಿದ್ದ ಚೀನಾ. ಇನ್ನೂ ಏಕೆ ಅದರ ಫಲಿತಾಂಶವನ್ನು ಪ್ರಕಟಿಸಿಲ್ಲ. ಒಂದೇ ಒಂದು ಸಂಶೋಧನಾ ವರದಿ ಇನ್ನೂ ಬಹಿರಂಗಗೊಂಡಿಲ್ಲ ಏಕೆ ?

# ಪ್ರಶ್ನೆ 4: ಚೀನಾ ಏನೂ ಮುಚ್ಚುಮರೆ ಮಾಡದಿದ್ದಲ್ಲಿ, ಅಂತಾರಾಷ್ಟ್ರೀಯ ತಜ್ಞರಿಗೆ ಏಕೆ ಯಾವುದೇ ಮಾಹಿತಿ ನೀಡುತ್ತಿಲ್ಲ ?
ಭಾರತ, ಅಮೆರಿಕ ಸೇರಿದಂತೆ ವಿಶ್ವದ ಅನೇಕ ದೇಶಗಳು ಒಗ್ಗೂಡಿ ಕೊರೊನಾ ವಿರುದ್ಧ ಹೋರಾಡುತ್ತಿದ್ದರೂ, ಚೀನಾ ಏಕೆ ಅಂತಾರಾಷ್ಟ್ರೀಯ ಸಮುದಾಯಕ್ಕೆ ಏಕೆ ಸಹಕಾರ ನೀಡುತ್ತಿಲ್ಲ. ವುಹಾನ್‍ಗೆ ತೆರಳಿದ್ದ ವಿಶ್ವ ಆರೋಗ್ಯ ಸಂಸ್ಥೆಯ ವಿಶೇಷ ತಂಡ ಚೀನಾ ಅಸಹಕಾರದಿಂದ ಬರಿಗೈಯಲ್ಲಿ ವಾಪಸ್ಸಾಯಿತು. ಅದು ನೀಡಿದ ಸುಳ್ಳು ಹೇಳಿಕೆಗಳನ್ನು ಪ್ರಕಟಿಸಿತು.

# ಪ್ರಶ್ನೆ 5 : ಮತ್ತೆ ಲೋಪದೋಷ ಆಗುವುದಿಲ್ಲ ಎಂದು ಚೀನಾ ಭರವಸೆ ನೀಡುತ್ತದೆಯೇ ?
ಸಾವಿರ ಸುಳ್ಳಿನ ರಾಷ್ಟ್ರ ಎಂದೇ ಕುಖ್ಯಾತಿ ಪಡೆದಿರುವ ಚೀನಾ ಕೊರೊನಾದಂಥ ವಿನಾಶಕಾರಿ ಸೋಂಕಿನಂಥ ಸೋರಿಕೆಯ ಲೋಪದೋಷಗಳು ಮುಂದೆ ಮರುಕಳಿಸುವುದಿಲ್ಲ ಎಂದು ಆಶ್ವಾಸನೆ ನೀಡಲಿದೆಯೇ.. ಚೀನಾವನ್ನು ನಂಬುವುದಾದರೂ ಹೇಗೆ..?

Facebook Comments

Sri Raghav

Admin