ಕೊರೋನಾ ಕಾಲದಲ್ಲಿ ಮಿಲನ ಮಹೋತ್ಸವ ಕುರಿತು ಇಲ್ಲಿದೆ ‘ರಸವಾರ್ತೆ’..!

ಈ ಸುದ್ದಿಯನ್ನು ಶೇರ್ ಮಾಡಿ

ಸ್ಟಾಕ್‍ಹೋಮ್(ಸ್ವೀಡನ್), ಮೇ 27-ಕಿಲ್ಲರ್ ಕೊರೊನಾ ವೈರಸ್ ದಾಳಿಯಿಂದ ಸೋಂಕು ಮತ್ತು ಸಾವಿನ ಸಂಖ್ಯೆಯಲ್ಲಿ ಆತಂಕಕಾರಿ ಏರಿಕೆ ಕಂಡುಬಂದಿದೆ. ಸೋಂಕು ತಡೆಗಟ್ಟಲು ವಿಶ್ವದಲ್ಲಿ ಸೋಷಿಯಲ್ ಡಿಸ್ಟೆನ್ಸ್(ಸಾಮಾಜಿಕ ಅಂತರ) ಕಡ್ಡಾಯವಾಗಿ ಜಾರಿಯಲ್ಲಿದೆ.

ಸಾಮಾಜಿಕ ಅಂತರದ ವೇಳೆ ಲೈಂಗಿಕ ಕ್ರಿಯೆ ಎಷ್ಟು ಸುರಕ್ಷಿತ ಎಂಬ ಬಗ್ಗೆ ಚರ್ಚೆಗಳು ವ್ಯಾಪಕವಾಗಿ ನಡೆಯುತ್ತಿರುವಾಗಲೇ ಸ್ವೀಡನ್ ಸರ್ಕಾರ ನೀಡಿರುವ ಸಲಹೆಯೊಂದು ಸೆಕ್ಸ್ ಪ್ರಿಯರನ್ನು ಥ್ರಿಲ್ ಆಗಿಸಿದೆ.

ಸೋಷಿಯಲ್ ಡಿಸ್ಟೆನ್ಸ್ ವೇಳೆ ಪತಿ-ಪತ್ನಿ ಮತ್ತು ಸಂಗಾತಿಗಳು ಮಿಲನ ಮಹೋತ್ಸವ ಆಚರಿಸುವುದಕ್ಕೆ ಅಡ್ಡಿ ಇಲ್ಲ. ಆ ಚಟುವಟಿಕೆ ಆರೋಗ್ಯ ದೃಷ್ಟಿಯಿಂದ ಒಳ್ಳೆಯದು ಮತ್ತು ಸುರಕ್ಚಿತ ಎಂದು ಸ್ವೀಡನ್ ಆರೋಗ್ಯ ಸಚಿವಾಲಯ ತಿಳಿಸಿದೆ.

ಸೋಂಕಿನ ಭಯದಿಂದ ಸಾಮಾಜಿಕ ಆಂತರ ಕಾಯ್ದುಕೊಂಡು ಸಂಗಾತಿ ಜೊತೆ ಸಮಾಗಮ ಇಲ್ಲದೆ ವಿರಹದ ಬೇಗೆಯಲ್ಲಿ ಬೇಯುತ್ತಿದ್ದ ರಸಿಕ ಮಹಾಶಯರಿಗೆ ಇದು “ರಸ”ವಾರ್ತೆಯಾಗಿದೆ.

ಸ್ವೀಡನ್ ಆರೋಗ್ಯ ಸಚಿವಾಲಯ ಈ ಸಂಬಂಧ ಹೊಸ ಮಾರ್ಗಸೂಚಿಯೊಂದನ್ನು ಹೊರಡಿಸಿರುವುದು ಸಂಪ್ರದಾಯವಾದಿಗಳನ್ನು ಕೆರಳಿಸಿದೆ. ಈ ಹೊಸ ಸಲಹೆಯಿಂದ ಇಂಥ ಮಂದಿ ಹೊರಗೆ ಕೆರಳಿದರೂ, ಒಳಗೆ ಖುಷಿಯಿಂದ ಅರಳಿದ್ದಾರೆ ಎಂಬ ವಿಡಂಬನೆಗಳೂ ಕೇಳಿಬಂದಿವೆ.

ಹೊರಗೆ ಸಾಮಾಜಿಕ ಅಂತರ ಕಾಯ್ದುಕೊಳ್ಳುವ ಮಂದಿ ಮನೆಯೊಳಗೆ ಮಂಚದಲ್ಲಿ ಬಾಳ ಸಂಗಾತಿ ಜೊತೆ ಸಂಭ್ರಮದಿಂದ ಬೆಸೆದುಕೊಳ್ಳುತ್ತಾರೆ ಎಂದು ರಸಿಕ ಮಹಾಶಯರು ಲೇವಡಿ ಮಾಡುತ್ತಿದ್ದಾರೆ.

ಕೊರೊನಾ ಹಾವಳಿಯಿಂದ ಸಾರ್ವಜನಿಕರ ಆರೋಗ್ಯ ರಕ್ಷಣೆಗಾಗಿ ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು ಕಡ್ಡಾಯ. ಆದರೆ ಪತಿ-ಪತ್ನಿ ಮತ್ತು ಆಪ್ತ ಸಂಗಾತಿಗಳ ವಿಷಯದಲ್ಲಿ ಸೋಷಿಯಲ್ ಡಿಸ್ಟೆನ್ಸ್ ಇದ್ದರೂ, ಲೈಂಗಿಕ ಸಂಪರ್ಕಕ್ಕೆ ಅಡ್ಡಿಯಾಗದು.

ಆದರೆ ಸಮಾಗಮ ಸುರಕ್ಷಿತವಾಗಿರಬೇಕು ಎಂದು ಸ್ವೀಡನ್ ಪಬ್ಲಿಕ್ ಹೆಲ್ತ್ ಏಜೆನ್ಸಿಯ ಸೋಂಕುರೋಗ ತಜ್ಞ ಆಂಡ್ರೆಸ್ ವ್ಯಾಲೆನ್‍ಸ್ಟೆನ್ ಸಲಹೆ ನೀಡಿದ್ದಾರೆ.

ಸಂಗಾತಿ ಜೊತೆ ಆತ್ಮೀಯ ಒಡನಾಟ, ಮಧುರ ಬಾಂಧವ್ಯ ಮತ್ತು ಸುರಕ್ಷಿತ ಲೈಂಗಿಕತೆ, ದಾಂಪತ್ಯ ಜೀವನದ ಸೌಖ್ಯತೆಯಲ್ಲಿ ಮುಖ್ಯ ಪಾತ್ರ ವಹಿಸುತ್ತದೆ. ಸಾಮಾಜಿಕ ಅಂತರವಿದ್ದರೂ ಸಂಗಾತಿಗಳು ಸುರಕ್ಷತೆಯಿಂಧ ಸಮಾಗಮ ಮಾಡಬಹುದು. ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ದಂಪತಿ ಅಥವಾ ಸಂಗಾತಿಗಳು ಇಬ್ಬರೂ ಆರೋಗ್ಯವಾಗಿದ್ದು, ಯಾವುದೇ ಸೋಂಕಿನ ಭೀತಿ ಇಲ್ಲದಿದ್ದರೆ ಮಿಲನಕ್ಕೆ ಅಡ್ಡಿಯಾಗದು. ಆದರೆ ಹೊರಗೆ ಸಾಮಾಜಿಕ ಅಂತರ ಅತ್ಯಗತ್ಯ ಎಂದು ಸ್ವೀಡನ್ ಆರೋಗ್ಯ ಇಲಾಖೆ ತಿಳಿಸಿರುವುದು ಸೆಕ್ಸ್‍ಪ್ರಿಯರಿಗೆ ಸಿಹಿ ಸುದ್ದಿಯಾಗಿದೆ.

ಕಳೆದ ವಾರವಷ್ಟೇ ನೆದರ್‍ಲೆಂಡ್ಸ್‍ನಲ್ಲೂ ಆರೋಗ್ಯ ಅಕಾರಿಗಳು ಜನರಿಗೆ ಸಲಹೆಯೊಂದನ್ನು ನೀಡಿ, ಕೊರೊನಾ ವೈರಸ್ ಹಾವಳಿ ಸಂದರ್ಭದಲ್ಲಿ ಸುರಕ್ಷಿತ ಲೈಂಗಿಕ ಕ್ರಿಯೆಗೆ ಸಲಹೆ ಮಾಡಿದೆ. ಅಲ್ಲದೇ ಏಕ ಸಂಗಾತಿ ಜೊತೆ ಮಾತ್ರ ಇದು ನಡೆಯಬೇಕು ಎಂದು ಸ್ಪಷ್ಟಪಡಿಸಿದೆ.

ಡೆನ್ಮಾರ್ಕ್‍ನಲ್ಲಿಯೂ ಸಹ ಆರೋಗ್ಯ ಇಲಾಖೆ ಕಠಿಣ ಸಾಮಾಜಿಕ ಅಂತರವು ಸುರಕ್ಷಿತ ಲೈಂಗಿಕ ಚಟುವಟಿಕೆಗೆ ಅನ್ವಯಿಸುವುದಿಲ್ಲ ಎಂದು ತಿಳಿಸಿದೆ.

Facebook Comments

Sri Raghav

Admin