ಕ್ರಿಕೆಟ್ ನಿವೃತ್ತಿ ನಂತರ ಬಿಜೆಪಿ ಸೇರ್ತಾರಂತೆ ಧೋನಿ..!?

ಈ ಸುದ್ದಿಯನ್ನು ಶೇರ್ ಮಾಡಿ

ನವದೆಹಲಿ, ಜು. 13- ಭಾರತ ಕ್ರಿಕೆಟ್ ತಂಡದ ಯಶಸ್ವಿ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಕ್ರೀಡಾಕ್ಷೇತ್ರದಿಂದ ನಿವೃತ್ತರಾಗಲಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿರುವ ನಡುವೆಯೇ ಅವರು ಬಿಜೆಪಿ ಸೇರಿ ರಾಜಕೀಯ ರಂಗದಲ್ಲಿ ಎರಡನೇ ಇನಿಂಗ್ಸ್ ಆರಂಭಿಸಲಿದ್ದಾರೆಂಬ ಸುಳಿವು ಲಭಿಸಿದೆ.

ಟೀ ಇಂಡಿಯಾದ ವಿಕೆಟ್‍ಕೀಪರ್ ಮತ್ತು ಆಕ್ರಮಣಕಾರಿ ಬ್ಯಾಟ್ಸಮೆನ್ ಆಗಿರುವ ಧೋನಿ ನಿವೃತ್ತರಾದ ಬಳಿಕ ಬಿಜೆಪಿ ಸೇರಲಿದ್ದಾರೆಂದು ಕೇಂದ್ರ ಮಾಜಿ ಸಚಿವ ಮತ್ತು ಪಕ್ಷದ ಮುಖಂಡ ಸಂಜಯ್ ಪಾಸ್ವಾನ್ ಸುಳಿವು ನೀಡಿದ್ದಾರೆ.

ಧೋನಿಯವರು ನನ್ನ ಪರಮಿತ್ರರು ಅವರಿಗೆ ಬಿಜೆಪಿ ಬಗ್ಗೆ ಅಪಾರ ಗೌರವ ಮತ್ತು ಒಲವು ಇದೆ. ಅವರನ್ನು ತಮ್ಮ ಪಕ್ಷಕ್ಕೆ ಆಹ್ವಾನಿಸಲು ನಾವು ಸಿದ್ಧರಿದ್ದೇವೆ. ಆದರೆ ಕ್ರಿಕೆಟ್‍ಗೆ ವಿದಾಯ ಹೇಳಿದ ನಂತರವಷ್ಟೇ ಇದು ಸಾಧ್ಯವಾಗಲಿದೆ ಎಂದು ಸುದ್ದಿವಾಹಿನಿಯೊಂದಕ್ಕೆ ಪಾಸ್ವಾನ ತಿಳಿಸಿದ್ದಾರೆ.

ಧೋನಿಯವರು ರಾಜಕೀಯ ಸೇರಲಿದ್ದಾರೆ ಎಂಬ ಮಾತುಗಳು ಕೆಲಕಾಲದಿಂದ ಚಾಲ್ತಿಯಲ್ಲಿದೆ. ಅವರು ಕ್ರಿಕೆಟ್‍ಗೆ ವಿದಾಯ ಹೇಳಿದ ನಂತರ ಬಿಜೆಪಿಗೆ ಸೇರಿಗೆ ರಾಜಕೀಯ ರಂಗದ ಎರಡನೇ ಇನಿಂಗ್ಸ್ ಆರಂಭಿಸಲಿದ್ದಾರೆ ಎಂಬ ಸುದ್ದಿಗಳಿವೆ ಇವೆ. ಆದರೂ ಧೋನಿ ನಿವೃತ್ತವಾದ ನಂತರ ಅಷ್ಟೇ ನಿಖರ ಸುದ್ದಿ ತಿಳಿಯಲಿದೆ.

ಧೋನಿ ಬಿಜೆಪಿ ಸೇರುವುದು ಖಚಿತವು ಎಂಬ ಪ್ರಶ್ನೆಗೆ ಉತ್ತರಿಸಿದ ಸಂಜಯ್ ಪಾಸ್ವಾನ್ ಬಹು ಹಿಂದಿನಿಂದಲೂ ಈ ಬಗ್ಗೆ ತಮ್ಮ ಪಕ್ಷದ ನಾಯಕರು ಒಲವು ಹೊಂದಿದ್ದಾರೆ. ಆದರೆ ಅವರು ಕ್ರಿಕೆಟ್ ರಂಗದಲ್ಲಿ ಮಿಂಚುತ್ತಿರುವ ಹಿನ್ನೆಲೆಯಲ್ಲಿ ಈ ವಿಚಾರ ಮಹತ್ವ ಪಡೆದುಕೊಂಡಿರಲಿಲ್ಲ, ಆದರೆ ಈಗ ಅವರು ಕ್ರಿಕೆಟ್‍ನಿಂದ ನಿವೃತ್ತಿಯಾಗಲಿದ್ದಾರೆಂಬ ಸುದ್ದಿಗೆ ಪುಷ್ಠಿದೊರೆಕಿರುವುದರಿಂದ ಈ ವಿಷಯಕ್ಕೆ ಚಾಲನೆ ದೊರೆತಿದೆ.

ಧೋನಿ ತಮ್ಮ ನಿವೃತ್ತಿ ಘೋಷಿಸಿದ ನಂತರ ಬಿಜೆಪಿ ನಾಯಕರು ಅವರನ್ನು ಸಂಪರ್ಕಿಸಿ ತಮ್ಮ ಪಕ್ಷಕ್ಕೆ ಆಮಂತ್ರಣ ನೀಡಿದ್ದಾರೆ. ಅವರು ಬಿಜೆಪಿ ಸೇರುವುದು ಬಹು ಖಚಿತ ಎಂದು ಸುಳಿವು ನೀಡಿದರು.

ವಿಶ್ವ ಕಪ್ ಕ್ರಿಕೆಟ್‍ನ ಸೆಮಿಫೈನಲ್‍ನಲ್ಲಿ ಭರ್ಜರಿ ಪ್ರದರ್ಶನ ನೀಡಿರುವ ಧೋನಿ ನಿವೃತ್ತರಾಗುವುದು ಬೇಡ. ಅವರು ಮತ್ತಷ್ಟು ಕಾಲ ಕ್ರಿಕೆಟ್‍ರಂಗದಲ್ಲೇ ಮುಂದುವರೆಯಬೇಕು ಎಂದು ಅಭಿಮಾನಿಗಳು ಒಂದೆಡೆ ಒತ್ತಡ ಹೇರುತ್ತಿದ್ದಾರೆ.

ಆದರೆ ವಿಶ್ವ ಕಪ್‍ನ ಉಪಾಂತ್ಯದಲ್ಲಿ ಭಾರತಕ್ಕೆ ಸೋಲುಂಟಾಗಿರುವುದರಿಂದ ಧೋನಿ ತಮ್ಮ ನಿವೃತ್ತಿಯನ್ನು ಘೋಷಿಸುವ ಸಾಧ್ಯತೆ ದಟ್ಟವಾಗಿದೆ. ಹಾಗೆಯೇ ಕ್ರಿಕೆಟ್‍ಗೆ ವಿದಾಯ ಹೇಳಿದ ನಂತರ ಅವರು, ರಾಜಕೀಯದಲ್ಲಿ ತಮ್ಮ ಜೀವನ ಕಳೆಯು ಉದ್ದೇಶವನ್ನು ಹೊಂದಿದ್ದಾರೆಂದು ಹೇಳಲಾಗುತ್ತಿದೆ.

ಈಗಾಗಲೇ ಭಾರತೀಯ ಕ್ರಿಕೆಟ್ ತಂಡದ ಖ್ಯಾತ ಆಟಗಾರರಾಗಿದ್ದ ನವಜೋತ್ ಸಿಂಗ್ ಸಿಧು, ಗೌತಮ್ ಗಂಭೀರ್ ಮೊದಲಾದವರು ರಾಜಕೀಯ ರಂಗ ಪ್ರವೇಶಿಸಿ ಉಜ್ವಲ ಭವಿಷ್ಯ ರೂಪಿಸಿಕೊಂಡಿದ್ದಾರೆ.

Facebook Comments

Sri Raghav

Admin