ಗಿರೀಶ್ ಕಾರ್ನಾಡ್ ಪುತ್ರ ರಘು ಜೊತೆ ಬಾಲಿವುಡ್ ಬ್ಯುಟಿ ಸ್ವರ ಡೇಟಿಂಗ್..!?

ಈ ಸುದ್ದಿಯನ್ನು ಶೇರ್ ಮಾಡಿ

ಬಾಲಿವುಡ್ ಟ್ಯಾಲೆಂಟೆಡ್ ಬ್ಯೂಟಿ ಸ್ವರ ಭಾಸ್ಕರ್ ಹೊಸ ಲವ್ ಸ್ಟೋರಿ ಈಗ ಸಿನಿಮಾ ಮತ್ತು ಪತ್ರಿಕೋದ್ಯಮ ವಲಯಗಳ ಕುತೂಹಲ ಕೆರಳಿಸಿದೆ. ಜ್ಞಾನಪೀಠ ಪುರಸ್ಕೃತ ಸಾಹಿತಿ ದಿವಂಗತ ಗಿರೀಶ್ ಕಾರ್ನಾಡ್ ಪುತ್ರ ಪತ್ರಕರ್ತ ಮತ್ತು ಲೇಖಕ ರಘು ಕಾರ್ನಾಡ್ ಜೊತೆ ಸ್ವರ ಡೇಟಿಂಗ್ ಮಾಡುತ್ತಿದ್ದಾಳೆ ಎನ್ನಲಾದ ಸಮಾಚಾರವಿದು.

ಪತ್ರಕರ್ತ ಮತ್ತು ಲೇಖಕರೂ ಆಗಿರುವ ರಘು ಕಾರ್ನಾಡ್ ತಂದೆಯಂತೆಯೇ ಪ್ರತಿಭಾವಂತರು. ಎರಡನೇ ವಿಶ್ವಯುದ್ದದ ಭಾರತದ ಕಥೆಗಳೂ ಸೇರಿದಂತೆ ಕೆಲವು ಪುಸ್ತಕಗಳನ್ನು ಬರೆದು ಅಂತಾರಾಷ್ಟ್ರೀಯ ಪ್ರಶಸ್ತಿ-ಪುರಸ್ಕಾರಕ್ಕೆ ರಘು ಪಾತ್ರರಾಗಿದ್ದಾರೆ.

ಅಲ್ಲದೇ ಸಾಹಿತ್ಯ ಕ್ಷೇತ್ರಕ್ಕೆ ಇವರು ನೀಡಿದ ಕೊಡುಗೆಗಾಗಿ ಕೇಂದ್ರ ಸಾಹಿತ್ಯ ಅಕಾಡೆಮಿಯ ಯುವ ಪುರಸ್ಕಾರ ಸಹ ನೀಡಲಾಗಿದೆ. ಸಿನಿಮಾಗಳ ಪೂರ್ವಭಾವಿ ಪ್ರದರ್ಶನ ಮತ್ತು ಇತರ ಸಭೆ-ಸಮಾರಂಭಗಳಲ್ಲಿ ಸ್ವರ ಮತ್ತು ರಘು ಜೊತೆಜೊತೆಯಾಗಿ ಕಾರಣಿಸಿಕೊಂಡು ಗಣ್ಯಾತಿಗಣ್ಯರ ಹುಬ್ಬೇರುವಂತೆ ಮಾಡಿದೆ. ಅಲ್ಲದೇ ಇವರಿಬ್ಬರು ರೆಸ್ಟೋರೆಂಟ್‍ಗಳಲ್ಲಿ ಡಿನ್ನರ್ ಚಾಟಿಂಗ್‍ನನ್ನೂ ಅನೇಕರು ಗಮನಿಸಿದ್ದಾರೆ.

ಸಾರ್ವಜನಿಕವಾಗಿ ಈ ಜೋಡಿ ಪದೇ ಪದೇ ಕಾಣಿಸಿಕೊಳ್ಳುತ್ತಿರುವುದು ರೂಮರ್‍ಗಳ ಬೆಲೂನ್ ಮತ್ತಷ್ಟು ಉಬ್ಬಿಕೊಳ್ಳುವಂತೆ ಮಾಡಿದೆ. ಇವರಿಬ್ಬರ ಸಂಬಂಧದ ಮುಂದಿನ ಹಂತ ಏನೆಂಬುದನ್ನು ಕಾಲವೇ ನಿರ್ಧರಿಸಬೇಕು.

ವೀರೆ ಡಿ ವೆಡ್ಡಿಂಗ್ ಸೇರಿದಂತೆ ಬಾಲಿವುಡ್ ಸೂಪರ್‍ಹಿಟ್ ಚಿತ್ರಗಳಲ್ಲಿ ನಟಿಸಿರುವ ಸ್ವರ ಭಾಸ್ಕರ್ 2016ರಲ್ಲಿ ಚಿತ್ರಕಥೆ ಬರಹಗಾರ(ಸ್ಕ್ರೀನ್ ರೈಟರ್) ಹಿಮಾಂಶು ಶರ್ಮ ಜೊತೆ ಮೂರು ವರ್ಷ ಕಾಲ ಓಡಾಡಿದ್ದಳು.

ಆದರೆ ಇತ್ತೀಚೆಗೆ ಇವರ ಸಂಬಂಧ ಹಳಸಿತ್ತು. ಈಗ ಪ್ರತಿಭಾವಂತ ನಟಿ ಮತ್ತು ಪ್ರತಿಭಾನ್ವಿತ ಪತ್ರಕರ್ತ ನಡುವೆ ಪ್ರೇಮ ಸ್ವರಾಲಾಪ ತಾರಕ ಧ್ವನಿಯಲ್ಲಿದೆ. ಮುಂದೇನೋ ತಿಳಿಯದು.

Facebook Comments