ಇಶಾಪಂತ್ ವರ್ಗಾವಣೆ ರದ್ದು

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು,ಫೆ.29- ಮೂರು ದಿನಗಳ ಹಿಂದೆಯಷ್ಟೇ ಸಿಐಡಿ ವಿಭಾಗದ ಎಸ್‍ಪಿಯಾಗಿ ವರ್ಗಾವಣೆಗೊಂಡಿದ್ದ ಇಶಾಪಂತ್ ಅವರನ್ನು ಪುನಃ ಹಿಂದಿನ ಸ್ಥಳಕ್ಕೆ ವರ್ಗಾವಣೆಗೊಳಿಸಲಾಗಿದೆ. ಈ ಹಿಂದೆ ಬೆಂಗಳೂರಿನ ಆಗ್ನೇಯ ವಿಭಾಗದ ಡಿಸಿಪಿಯಾಗಿದ್ದ ಇಶಾಪಂತ್ ಅವರನ್ನು ಕಳೆದ ಗುರುವಾರ ಸಿಐಡಿ ಎಸ್‍ಪಿಯಾಗಿ ವರ್ಗಾವಣೆ ಮಾಡಲಾಗಿತ್ತು.

ಇದೀಗ ಅವರ ವರ್ಗಾವಣೆ ಆದೇಶವು ರದ್ದುಗೊಂಡಿದ್ದು, ಪುನಃ ಆಗ್ನೇಯ ವಿಭಾಗದ ಡಿಸಿಪಿಯಾಗಿ ಮುಂದುವರೆಯಲಿದ್ದಾರೆ. ಯಾವ ಕಾರಣಕ್ಕಾಗಿ ವರ್ಗಾವಣೆ ಆದೇಶ ರದ್ದಾಗಿದೆ ಎಂಬುದು ಮಾತ್ರ ತಿಳಿದುಬಂದಿಲ್ಲ.

Facebook Comments