ಶಾಕಿಂಗ್ ನ್ಯೂಸ್ : ಐಸಿಸ್ ಉಗ್ರರ ಮುಂದಿನ ಟಾರ್ಗೆಟ್ ಭಾರತ..!

ಈ ಸುದ್ದಿಯನ್ನು ಶೇರ್ ಮಾಡಿ

ನವದೆಹಲಿ/ಕೋಲ್ಕತ್ತಾ, ಏ.29- ಪಾಕಿಸ್ತಾನ ಕೃಪಾಪೋಷಿತ ಜೈಷ್-ಎ-ಮೊಹಮ್ಮದ್, ಲಷ್ಕರ್-ಎ-ತೊಯ್ಬಾ ಹಾಗೂ ಹಿಜ್ಬುಲ್ ಮುಜಾಹಿದ್ದೀನ್ ಉಗ್ರಗಾಮಿ ಸಂಘಟನೆಗಳ ದಾಳಿ ಆತಂಕದಲ್ಲಿರುವ ಭಾರತಕ್ಕೆ ವಿಶ್ವದ ಅತ್ಯಂತ ಕ್ರೂರ ಮತ್ತು ನಿರ್ದಯಿ ಉಗ್ರಗಾಮಿ ಸಂಘಟನೆ ಇಸ್ಲಾಮಿಕ್ ಸ್ಟೇಟ್ (ಐಸೀಸ್) ಉಗ್ರರಿಂದಲೂ ದೊಡ್ಡಮಟ್ಟದ ಗಂಡಾಂತರ ಎದುರಾಗುವ ಸಾಧ್ಯತೆ ಇದೆ.

ಈಸ್ಟರ್ ಸಂಡೆಯಂದು ಐಸೀಸ್ ಉಗ್ರರು ಆತ್ಮಾಹುತಿ ಬಾಂಬ್ ದಾಳಿ ನಡೆಸಿ ಅಮಾಯಕರ ರಕ್ತಪಾತ ಹರಿಸಿದ್ದರು. ಇದೀಗ ಬೆಂಗಾಳಿ ಭಾಷೆಯಲ್ಲಿ ಐಸೀಸ್ ಉಗ್ರರು ಕಮಿಂಗ್ ಸೂನ್ ಎಂದು ಪೋಸ್ಟ್ ಮಾಡಿದ್ದು ಈ ಭಾರತ ಅವರ ಟಾರ್ಗೆಟ್ ಭಾರತ ಎಂಬ ಆತಂಕಕಾರಿ ಸಂಗತಿ ಬಯಲಾಗಿದೆ.

ರಾರಾಜಿಸುತ್ತಿರುವ ಐಸೀಸ್ ಪೋಸ್ಟರ್: ಬೆಂಗಾಳಿಯಲ್ಲಿ ಶಿಗ್ರೋಯ್ ಆಶ್ಚೆ ಎಂದು ಪೋಸ್ಟ್ ಮಾಡಿದ್ದಾರೆ. ಹೀಗೆಂದರೆ ಬೆಂಗಾಲಿಯಲ್ಲಿ ಶೀಘ್ರದಲ್ಲಿ ಬರಲಿದ್ದೇವೆ ಎಂದು ಅರ್ಥ. ಅದಾಗಲೇ ಐಸೀಸ್ ಬಾಂಗ್ಲಾದೇಶದಲ್ಲಿ ನೆಲೆಯೂರಿದ್ದು, ಅಲ್ಲಿನ ಯುವಕರ ಮನಪರಿವರ್ತನೆಯಲ್ಲಿ ತೊಡಗಿದ್ದು ಬಾಂಗ್ಲಾದೇಶದಲ್ಲಿ ವಿಧ್ವಂಸಕ ಕೃತ್ಯ ನಡೆಸುವ ಸಾಧ್ಯತೆ ಇದೆ.

ಬಾಂಗ್ಲಾದೇಶ ಪಶ್ಚಿಮ ಬಂಗಾಳಕ್ಕೆ ಹೊಂದಿಕೊಂಡಿರುವುದರಿಂದ ಈ ಗಡಿಯ ಮೂಲಕ ಭಾರತಕ್ಕೆ ಇಸಿಸ್ ಉಗ್ರರು ನುಸುಳಲು ಸಾಧ್ಯತೆಯೂ ಇದೆ ಎನ್ನಲಾಗಿದೆ. ಸದ್ಯ ಐಸೀಸ್‍ನ ಟೆಲಿಗ್ರಾಮ್ ಚಾನೆಲ್‍ನಲ್ಲಿ ಪ್ರಸಾರವಾಗಿರುವ ಪೋಸ್ಟ್ ನ ಕುರಿತಾಗಿ ತನಿಖೆ ಆರಂಭವಾಗಿದ್ದು, ಈ ಪೋಸ್ಟರ್‍ನಲ್ಲಿ ಅಲ್-ಮುರ್ಸಾಲತ್ ಎನ್ನುವ ಲೋಗೋ ಸಹ ಇದೆ. ಸದ್ಯ ವೈರಲ್ ಆಗಿರುವ ಪೋಸ್ಟರ್‍ಅನ್ನು ಗಂಭೀರವಾಗಿ ಪರಿಗಣಿಸಲಾಗಿದೆ.

ಕಳೆದ ಕೆಲವು ವರ್ಷಗಳಿಂದ ಭಾರತದಲ್ಲೂ ತನ್ನ ಪ್ರಾಬಲ್ಯ ವಿಸ್ತರಿಸಲು ಹವಣಿಸುತ್ತಿರುವ ಇಸ್ಲಾಮಿಕ್ ಸ್ಟೇಟ್ ಉಗ್ರರು ಯಾವುದೆ ಸಂದರ್ಭದಲ್ಲಿ ವಿಧ್ವಂಸಕ ಕೃತ್ಯ ನಡೆಸುವ ಸಾಧ್ಯತೆ ಇದ್ದು, ಕಟ್ಟೆಚ್ಚರದಿಂದಿರುವಂತೆ ಈಗಾಗಲೇ ಎಲ್ಲ ರಾಜ್ಯಗಳಿಗೂ ಸೂಚನೆ ನೀಡಲಾಗಿದೆ.

Facebook Comments

Sri Raghav

Admin