ಬಾಂಗ್ಲಾದೇಶದ ಹಿಂಸಾಚಾರ : ಬೆಂಗಳೂರಿನ ಇಸ್ಕಾನ್‍ನಿಂದ ಶಾಂತಿಯುತ ಕೀರ್ತನ ಮೆರವಣಿ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಳೂರು,ಅ. 23- ಬಾಂಗ್ಲಾದೇಶದಲ್ಲಿ ಹಿಂಸಾಚಾರಕ್ಕೆ ಒಳಗಾದ ಅಲ್ಪ ಸಂಖ್ಯಾತರ ಬೆಂಬಲಿಸಲು ರಾಜಾಜಿನಗರದ ಇಸ್ಕಾನ್ ಬೆಂಗಳೂರು ಕೂಡ ಹರೇ ಕೃಷ್ಣ ಬೆಟ್ಟದ ಮೇಲೆ ಶಾಂತಿಯುತ ಕೀರ್ತನ ಮೆರವಣಿಗೆ ನಡೆಸಿತು.ಕಳೆದ ಕೆಲವು ವಾರಗಳಲ್ಲಿ ಬಾಂಗ್ಲಾದೇಶದ ಹಿಂದೂ ಸಮುದಾಯದ ಮೇಲೆ ನಡೆದ ದಾಳಿಗಳ ವೇಳೆ ಇಸ್ಕಾನ್ ಮತ್ತು ಇತರೆ ದೇವಸ್ಥಾನಗಳನ್ನು ಧ್ವಂಸ ಮಾಡಲಾಗಿದೆ, ದೇವರ ವಿಗ್ರಹಗಳನ್ನು ಮುರಿದು ಹಾಕಲಾಗಿದೆ ಮತ್ತು ದುರ್ಗಾ ಪೂಜೆಯ ಪೆಂಡಾಲುಗಳನ್ನು ಸುಟ್ಟು ಹಾಕಲಾಗಿದೆ. ಮತಾಂಧ ಜನರ ಗುಂಪುಗಳು ನೋಖಾಲಿ ಇಸ್ಕಾನ್‍ನ ಪ್ರಾಂಥ ಚಂದ್ರ ದಾಸ ಮತ್ತು ಜತನ್ ಚಂದ್ರಸಾಹ ಎಂಬ ಇಬ್ಬರು ಭಕ್ತರಲ್ಲದೆ ಅನೇಕ ಜನರನ್ನು ಸಾಯಿಸಿವೆ.

ಅನೇಕ ಹಿಂದೂಗಳ ಮನೆ ಮತ್ತು ಅಂಗಡಿಗಳನ್ನು ವ್ಯವಸ್ಥಿತವಾಗಿ ಗುರಿಯಾಗಿಸಿ ಸುಟ್ಟು ಹಾಕಲಾಗಿದೆ. ಬಾಂಗ್ಲಾದೇಶದಲ್ಲಿ ಹಿಂದೂಗಳ ಮತ್ತು ಇತರ ಅಲ್ಪಸಂಖ್ಯಾತ ಗುಂಪುಗಳ ಮೇಲೆ ದಾಳಿಗಳು ದಶಕಗಳಿಂದ ನಡೆಯುತ್ತಲೇ ಇವೆ. ಇದು ನಿಲ್ಲಬೇಕು ಎಂದು ಆಗ್ರಹಿಸಿವೆ.

ಶಾಂತಿಯುತ, ಕಾನೂನು ಪರಿಪಾಲಿಸುವ ಸಮುದಾಯಗಳ ಮೇಲಿನ ಈ ದಾಳಿಗಳು ಮನುಕುಲದ ಸಾಮೂಹಿಕ ಪ್ರಜ್ಞೆಯನ್ನೇ ಕಲುಕಿವೆ. ಈ ದುರ್ಬಲ ಜನರಿಗಾಗಿ ರಕ್ಷಣೆಯ ಬೇಡಿಕೆ ಒಡ್ಡಲು ಇಸ್ಕಾನ್ ಶಾಂತಿಯುತ ಪ್ರತಿಭಟನೆಗಳನ್ನು ಆಯೋಜಿಸಿದೆ.

ಈ ಪ್ರತಿಭಟನೆಯು ಯಾವುದೇ ಧಾರ್ಮಿಕ ಸಮುದಾಯದ ವಿರುದ್ಧವಾಗಲಿ, ಬಾಂಗ್ಲಾದೇಶದ ಸರ್ಕಾರದ ವಿರುದ್ಧವಾಗಲಿ ಅಲ್ಲ. ಇದು ಇರುವುದು ಆ ದೇಶದ ಎಲ್ಲ ಅಲ್ಪಸಂಖ್ಯಾತರ ಸುರಕ್ಷತೆಯ ಬೇಡಿಗಾಗಿ ಇಂದು ದೇವಸ್ಥಾನದ ಸ್ವಯಂ ಸೇವಕರು, ಭಕ್ತರು ಮತ್ತು ಇತರ ಕಳಕಳಿಯುಳ್ಳ ಪ್ರಜೆಗಳು ಕೀರ್ತನ ಮೆರವಣಿಗೆಯಲ್ಲಿ ಭಾಗವಹಿಸಿದ್ದರು.

ಬೆಂಗಳೂರಿನ ಇಸ್ಕಾನ್ ಅಧ್ಯಕ್ಷ ಶ್ರೀ ಮಧು ಪಂಡಿತ ದಾಸ ಅವರು ಮಾತನಾಡಿ ಬಾಂಗ್ಲಾದೇಶದಲ್ಲಿ ಇಸ್ಕಾನ್ ಭಕ್ತರ, ಹಿಂದೂಗಳ ಮತ್ತು ಇತರ ಅಲ್ಪ ಸಂಖ್ಯಾತರ ಮೇಲೆ ನಡೆದ ಅಪ್ರಚೋದಿತ ದಾಳಿಯಿಂದ ನಾವು ದುಃಖಿತರಾಗಿದ್ದೇವೆ. ಒಗ್ಗಟ್ಟಾಗಿ ನಾವು ಅವರಿಗೆ ಬೆಂಬಲ ಮತ್ತು ಐಕಮತ್ಯ ಸೂಚಿಸುತ್ತೇವೆ. ಅವರ ಸುರಕ್ಷತೆ, ಕ್ಷೇಮಕ್ಕಾಗಿ ಪ್ರಾರ್ಥಿಸುತ್ತೇವೆ.

ಬಾಂಗ್ಲಾದೇಶದ ಸರ್ಕಾರ ನೊಂದ ಅಲ್ಪ ಸಂಖ್ಯಾತರ ರಕ್ಷಣೆಗಾಗಿ ಈ ಕೂಡಲೇ ವ್ಯವಸ್ಥೆ ಮಾಡಬೇಕು ಮತ್ತು ಇಂಥ ಘಟನೆಗಳು ಮುಂದೆ ನಡೆಯದಿರುವಂತೆ ನೋಡಿಕೊಳ್ಳಬೇಕು ಎಂದು ಒತ್ತಾಯಿದರು. ಭಾರತ ಸರ್ಕಾರ ಕೂಡ ನೆರೆ ರಾಷ್ಟ್ರಗಳ ಜೊತೆಗೂಡಿ ಈ ಪ್ರದೇಶದ ಅಲ್ಪ ಸಂಖ್ಯಾತರ ಹಿತಾಸಕ್ತಿಗಳನ್ನು ಸಂರಕ್ಷಿಸಬೇಕು ಎಂದು ಕೋರಿದರು.

Facebook Comments

Sri Raghav

Admin