ಮುಸ್ಲಿಂ ರಾಷ್ಟ್ರಗಳಿಂದ ಮೋದಿಗೆ ಪ್ರಶಸ್ತಿಗಳ ಸುರಿಮಳೆ, ಪಾಕ್‍ ಹೊಟ್ಟೆ ಭಗ ಭಗ..!

ಈ ಸುದ್ದಿಯನ್ನು ಶೇರ್ ಮಾಡಿ

ನವದೆಹಲಿ, ಆ. 25-ಅನ್ವೇಷನಾತ್ಮಕ ವಿದೇಶಾಂಗ ನೀತಿಗಳ ಯಶಸ್ವಿ ಅನುಷ್ಠಾನ ಮತ್ತು ವಿದೇಶಗಳೊಂದಿಗೆ ಉತ್ತಮ ಬಾಂಧವ್ಯ-ಬಲವರ್ಧನೆಗಾಗಿ ನೀಡಿದ ಅಮೂಲ್ಯ ಕೊಡುಗೆಗಳನ್ನು ಪರಿಗಣಿಸಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಕಳೆದ ಐದು ವರ್ಷಗಳಲ್ಲಿ ಅನೇಕ ಅಂತಾರಾಷ್ಟ್ರೀಯ ಪ್ರಶಸ್ತಿ-ಪುರಸ್ಕಾರಗಳು ಲಭಿಸಿವೆ.

ಮುಸ್ಲಿಂ ಮತ್ತು ಅರಬ್ ದೇಶಗಳಿಂದಲೂ ಪ್ರಧಾನಿ ಮೋದಿ ಅವರಿಗೆ ಪ್ರತಿಷ್ಠಿತ ಗೌರವ-ಪುರಸ್ಕಾರಗಳು ಲಭಿಸುತ್ತಿರುವುದಕ್ಕೆ ಪಾಕಿಸ್ತಾನ ಮತ್ತು ಚೀನಾಗೆ ಭಾರೀ ಮುಖಭಂಗವಾಗಿದೆ.

ಸಂಯುಕ್ತ ಅರಬ್ ಗಣರಾಜ್ಯ(ಯುಎಇ) ಪ್ರವಾಸ ಕೈಗೊಂಡಿದ್ದ ಪ್ರಧಾನಿ ಮೋದಿ ಅವರಿಗೆ ನಿನ್ನೆ ಆ ದೇಶದ ಅತ್ಯುನ್ನತ ರಾಷ್ಟ್ರೀಯ ಪುರಸ್ಕಾರವಾದ ಆರ್ಡರ್ ಆಫ್ ಜಾಯೇದ್ ಪ್ರಶಸ್ತಿ ನೀಡಿ ಗೌರವಿಸಲಾಗಿತ್ತು. ಮೋದಿ ಅವರಿಗೆ ಮುಸ್ಲಿಂ ದೇಶದಿಂದ ಲಭಿಸುತ್ತಿರುವ ಪ್ರಶಸ್ತಿ ಇದೇ ಮೊದಲೆನಲ್ಲ. ಈ ಹಿಂದೆ ಆಫ್ಘಾನಿಸ್ತನಿಂದ ಮೋದಿಗೆ ಸ್ಟೇಟ್ ಆರ್ಡರ್ ಆಫ್ ಘಾಜಿ ಅಮೀರ್ ಅಮಾನುಲ್ಲಾ ಖಾನ್ ಪ್ರಶಸ್ತಿ ಲಭಿಸಿತ್ತು. ಇದು ಅಫ್ಘನ್‍ನ ಅತ್ಯುನ್ನತ ರಾಷ್ಟ್ರೀಯ ಪುರಸ್ಕಾರ.

ಪ್ಯಾಲೆಸ್ತೀನ್ ಭೇಟಿ ವೇಳೆ ಪ್ರಧಾನಿ ಅವರಿಗೆ ಗ್ರಾಂಡ್ ಕಾಲರ್ ಆಫ್ ಡಿ ಸ್ಟೇಟ್ ಆಫ್ ಪ್ಯಾಲೆಸ್ತೀನ್ ಪ್ರಶಸ್ತಿ ನೀಡಿ ಗೌರವಿಸಲಾಗಿತ್ತು. ಸೌದಿ ಅರೇಬಿಯಾದ ಅತ್ಯುನ್ನದ ಗೌರವವಾದ ನಾಗರಿಕ ಆರ್ಡರ್ ಆಫ್ ಅಬ್ದುಲ್ ಅಜೀಜ್ ಅಲ್ ಸಾಥ್ ಪ್ರಶಸ್ತಿಯು ಕೂಡ ಮೋದಿ ಅವರಿಗೆ ಸಂದಾಯವಾಗಿದೆ. ಅಲ್ಲದೆ ರಷ್ಯಾಯ ಮತ್ತು ಮಾಲ್ಡೀವ್ಸ್‍ನ ಅತ್ಯುತ್ತಮ ನಾಗರಿಕ ಪ್ರಶಸ್ತಿಗೂ ಮೋದಿ ಭಾಜನರಾಗಿದ್ದಾರೆ.

ಇವುಗಳಲ್ಲದೆ ದಕ್ಷಿಣ ಕೋರಿಯಾ ಮೋದಿ ಅವರಿಗೆ ಶಾಂತಿ ಪುರಸ್ಕಾರ ಮತ್ತು ವಿಶ್ವ ಸಂಸ್ಥೆಯು ಚಾಂಪಿಯನ್ ಆಫ್ ದಿ ಅರ್ಥ್ ಪ್ರಶಸ್ತಿಗಳನ್ನು ನೀಡಿ ಗೌರವಿಸಿದೆ.
ಪ್ರಧಾನ ಮಂತ್ರಿಯೊಬ್ಬರು ವಿದೇಶಗಳಿಂದ ಇಷ್ಟು ಪ್ರಶಸ್ತಿ-ಪುರಸ್ಕಾರಗಳನ್ನು ಪಡೆದಿರುವುದು ಇದೇ ಮೊದಲು ಲೋಕಪ್ರಿಯತೆಯಲ್ಲಿ ವಿದೇಶಗಳ ಅತ್ಯುನ್ನತ ನಾಯಕರನ್ನು ಹಿಂದಿಕ್ಕಿರುವ ಮೋದಿ ಕಳೆದ ಐದು ವರ್ಷಗಳಿಂದ 8 ಅಂತಾರಾಷ್ಟ್ರೀಯ ಪ್ರಶಸ್ತಿಗಳನ್ನು ಪಡೆದಿದ್ದಾರೆ.

Facebook Comments

Sri Raghav

Admin