ಫ್ರಾನ್ಸ್‍ನಲ್ಲಿ ಮುಂದುವರಿದ ಉಗ್ರರ ಅಟ್ಟಹಾಸ : ಚರ್ಚ್ ಮೇಲೆ ದಾಳಿ, ಮೂವರ ಹತ್ಯೆ

ಈ ಸುದ್ದಿಯನ್ನು ಶೇರ್ ಮಾಡಿ

ನೈಸ್, ಅ.30-ಪ್ರವಾದಿ ಮಹಮದ್ ಅವರಿಗೆ ಅಪಮಾನ ಮಾಡಿದರೆನ್ನಲಾದ ಘಟನೆ ನಂತರ ಫ್ರಾನ್ಸ್‍ನ ವಿವಿಧೆಡೆ ಇಸ್ಲಾಂ ಉಗ್ರಗಾಮಿಗಳ ಹಿಂಸಾಚಾರ ಮುಂದುವರಿದಿದೆ. ಫ್ರಾನ್ಸ್‍ನ ಮೆಡಿಟರೇನಿಯನ್ ನಗರಿ ನೈಸ್‍ನ ನೋರ್ಟೆ ಡೇಮ್ ಬ್ಯಾಸಿಲಿಕಾ ಚರ್ಚ್ ಮೇಲೆ ದಾಳಿ ನಡೆಸಿದ ಕುರಾನ್ ಗ್ರಂಥ ಕೈಯಲ್ಲಿ ಹಿಡಿದಿದ್ದ ಶಸ್ತ್ರಸಜ್ಜಿತ ಉಗ್ರನೊಬ್ಬ ಮೂವರಿಗೆ ಭೀಕರವಾಗಿ ಇರಿದು ಕೊಂದಿದ್ದಾನೆ.

ಟುನಿಷಿಯಾ ಮೂಲದ ಉಗ್ರಗಾಮಿ ನಡೆಸಿದ ಈ ದಾಳಿಯಲ್ಲಿ ಕೆಲವರಿಗೆ ಗಾಯಗಳಾಗಿವೆ. ಈ ದಾಳಿ ನಂತರ ಪೆÇಲೀಸರು ಉಗ್ರನ ಮೇಲೆ ಗುಂಡು ಹಾರಿಸಿದ್ದು, ಆತ ತೀವ್ರ ಗಾಯಗೊಂಡಿದ್ದಾನೆ.  ನೈಸ್ ನಗರದಲ್ಲಿ ಈ ಎರಡು ತಿಂಗಳಲ್ಲಿ ನಡೆದ ಮೂರನೇ ಹತ್ಯಾಕಾಂಡ ಇದಾಗಿದೆ.

ಪ್ರವಾದಿ ಮಹಮದ್ ಅವರ ವ್ಯಂಗ್ಯಚಿತ್ರವನ್ನು ಶಾಲೆಯಲ್ಲಿ ಪ್ರದರ್ಶಿಸಿದ ಶಿಕ್ಷಕರೊಬ್ಬರ ಶಿರಚ್ಛೇದ ಮಾಡಲಾಗಿತ್ತು.  ಉಗ್ರಗಾಮಿಗಳ ದಾಳಿ ಹೆಚ್ಚಾಗುತ್ತಿರುವ ಹಿನ್ನಲೆಯೆಲ್ಲಿ ದೇಶಾದ್ಯಂತ ಕಟ್ಟೆಚ್ಚರ ವಹಿಸಲಾಗಿದೆ.

Facebook Comments