“ಭಯೋತ್ಪಾದನೆಗೆ ಕುಮ್ಮಕ್ಕು ನೀಡುವ ದೇಶಗಳನ್ನು ಮೂಲೆ ಗುಂಪು ಮಾಡಬೇಕು” : ಉಪರಾಷ್ಟ್ರಪತಿ

ಈ ಸುದ್ದಿಯನ್ನು ಶೇರ್ ಮಾಡಿ

ವಾಷಿಂಗ್ಟನ್, ಮೇ 21- ಭಯೋತ್ಪಾದನೆಗೆ ಬೆಂಬಲ ಮತ್ತು ಕುಮ್ಮಕ್ಕು ನೀಡುವ ದೇಶಗಳನ್ನು ಮೂಲೆಗುಂಪು ಮಾಡಲು ಎಲ್ಲ ರಾಷ್ಟ್ರಗಳು ಒಗ್ಗೂಡಬೇಕು ಎಂದು ಉಪ ರಾಷ್ಟ್ರಪತಿಡಾ. ಎಂ.ವೆಂಕಯ್ಯ ನಾಯ್ಡು ಕರೆ ನೀಡಿದ್ದಾರೆ.

ಇಂದು ಭಯೋತ್ಪಾದನೆ ನಿಗ್ರಹ ದಿನ. ಭಯೋತ್ಪಾದನೆ ಪಿಡುಗಿನಿಂದ ತಾಯ್ನಾಡನ್ನು ರಕ್ಷಿಸಲು ಪ್ರಾಣಾರ್ಪಣೆ ಮಾಡಿದ ಪುರುಷರು ಮತ್ತು ಮಹಿಳೆಯರಿಗೆ ನಾಯ್ಡು ಶ್ರದ್ಧಾಂಜಲಿ ಸಲ್ಲಿಸಿದ್ದಾರೆ. ಭಯೋತ್ಪಾದನೆಯು ಮನುಕುಲಕ್ಕೆ ವೈರಿ ಮತ್ತು ಜಾಗತಿಕ ಶಾಂತಿ ನೆಮ್ಮದಿಗೆ ದೊಡ್ಡ ಆತಂಕ.

ಉಗ್ರವಾದಕ್ಕೆ ಬೆಂಬಲ, ಸಹಕಾರ ಮತ್ತು ಕುಮ್ಮಕ್ಕು ನೀಡುತ್ತಿರುವ ದೇಶಗಳನ್ನು ಮೂಲೆ ಗುಂಪು ಮಾಡಬೇಕು. ಇದಕ್ಕಾಗಿ ಎಲ್ಲ ರಾಷ್ಟ್ರಗಳು ಮುಂದೆ ಬರಬೇಕು ಎಂದು ಉಪ ರಾಷ್ಟ್ರಪತಿ ಸಲಹೆ ಮಾಡಿದರು.

ಭಯೋತ್ಪಾದನೆ ವಿರುದ್ಧದ ಹೋರಾಟವು ಕೇವಲ ಭದ್ರತಾ ಪಡೆಗಳ ಜವಾಬ್ದಾರಿಯಲ್ಲಿ ಈ ಪಿಡುಗಿನ ವಿರುದ್ಧ ಸಮರ ಮುಂದುವರಿಸುವುದು ಪ್ರತಿಯೊಬ್ಬ ನಾಗರಿಕರ ಕರ್ತವ್ಯವೂ ಆಗಿದೆ ಎಂದು ವೆಂಕಯ್ಯನಾಯ್ಡು ಹೇಳಿದರು.

ದೇಶಕ್ಕೆ ಕಂಟಕವಾಗಿರುವ ಭಯೋತ್ಪಾದನೆಯನ್ನು ನಿರ್ಮೂಲನೆ ಮಾಡಲು ಭಾರತೀಯರೆಲ್ಲರೂ ಒಗ್ಗೂಡಿ ಹೋರಾಟ ಮುಂದುವರಿಸಬೇಕೆಂದು ಅವರು ಕರೆ ನೀಡಿದರು.

Facebook Comments

Sri Raghav

Admin