12 ಕೋಟಿ ರೂ. ಮೌಲ್ಯದ ವಜ್ರದ ಮಾಸ್ಕ್..!

ಈ ಸುದ್ದಿಯನ್ನು ಶೇರ್ ಮಾಡಿ

ಜೆರುಸಲೆಂ, ಆ. 23- ಕೊರೊನಾ ಕಾಟದಿಂದಾಗಿ ತುತ್ತು ಅನ್ನಕ್ಕಾಗಿ ಪರದಾಡುವಂತಹ ಸ್ಥಿತಿ ಎದುರಾಗಿರುವ ಬೆನ್ನಲ್ಲೇ ಕೆಲವು ಶ್ರೀಮಂತರು ಬೆಳ್ಳಿ, ಚಿನ್ನ ಮಾಸ್ಕ್ ಗಳನ್ನು ಧರಿಸುವ ಮೂಲಕ ಗಮನ ಸೆಳೆದಿದ್ದಾರೆ, ಈಗ ಉದ್ಯಮಿಯೊಬ್ಬರು 12 ಕೋಟಿ ರೂ. ಬೆಲೆಯ ವಜ್ರದ ಮಾಸ್ಕ್ ಅನ್ನು ತಯಾರಿಸುತ್ತಿರುವುದು ಆಶ್ಚರ್ಯ ಮೂಡಿಸಿದೆ.

ಕೊರೊನಾ ವೈರಸ್‍ನಿಂದ ತಪ್ಪಿಸಿಕೊಳ್ಳಲು ಜನರು ಕಾಟನ್, ಮೆಡಿಕಲ್ ಮಾಸ್ಕ್‍ಗಳನ್ನು ಧರಿಸಿ ಆರೋಗ್ಯ ಕಾಪಾಡಿಕೊಳ್ಳಲು ಮುಂದಾಗಿದ್ದರೆ, ಜೆರುಸಲೆಂನ ಯವಲೆ ಕಂಪೆನಿಯ ಮಾಲೀಕ ಐಸಾಕ್ ಲೇವಿ 12 ಕೋಟಿ ಬೆಲೆಬಾಳುವ ಮಾಸ್ಕ್ ಸಿದ್ಧಪಡಿಸುತ್ತಿರುವುದು ಶೋಜಿಗ ಎನಿಸಿದೆ.

ಈ ದುಬಾರಿ ಮಾಸ್ಕ್‍ನ ವಿಶೇಷವೆಂದರೆ ಇದರ ತಯಾರಿಕೆಗೆ ಯವಲೆ ಕಂಪೆನಿಯ ಮಾಲೀಕ ಐಸಾಕ್, 3600 ಬಿಳಿ ಮತ್ತು ಕಪ್ಪು ವಜ್ರಗಳನ್ನು ಬಳಸುತ್ತಿರುವುದರೊಂದಿಗೆ 10 ಕ್ಯಾರೆಟ್ ಚಿನ್ನವನ್ನು ಬಳಕೆ ಮಾಡುತ್ತಿದ್ದಾನೆ, ಡಿಸೆಂಬರ್ ವೇಳೆಗೆ ಮಾಸ್ಕ್ ತಯಾರಾಗಲಿದೆ ಎಂದು ಆತ ತಿಳಿಸಿದ್ದಾನೆ.

ಐಸಾಕ್ ತಯಾರಿಸುತ್ತಿರುವ 12 ಕೋಟಿ ಬೆಲೆಬಾಳುವ ಮಾಸ್ಕ್‍ನಲ್ಲಿ ಎನ್99 ಮಾದರಿಯಲ್ಲಿನ ಸುರಕ್ಷತೆಯನ್ನು ಅಳವಡಿಸಿಕೊಳ್ಳುತ್ತಿರುವುದರೊಂದಿಗೆ ಉನ್ನತ ತಂತ್ರಜ್ಞಾನವನ್ನು ಬಳಸಿಕೊಂಡಿದ್ದಾರಂತೆ.

ಐಸಾಕ್ ತಯಾರಿಸುತ್ತಿರುವ ದುಬಾರಿ ಬೆಲೆಯ ಮಾಸ್ಕ್ ಅನ್ನು ಕೊಳ್ಳುವವರ್ಯಾರು ಎಂಬ ಆಶ್ಚರ್ಯವು ಕೂಡ ಬಹಳಷ್ಟು ಮಂದಿಯನ್ನು ಕಾಡಿದ್ದು , ಚೀನಾ ಮೂಲದ ಅಮೆರಿಕಾ ಉದ್ಯಮಿಯೊಬ್ಬರು 12 ಕೋಟಿ ಬೆಲೆ ಬಾಳುವ ಮಾಸ್ಕ್ ಅನ್ನು ಖರೀದಿಸಲು ಮುಂದಾಗಿದ್ದಾರೆ ಎಂದು ಕೂಡ ತಿಳಿದುಬಂದಿದೆ.

Facebook Comments

Sri Raghav

Admin