ಬ್ರೆಜಿಲ್‍ನ ಅಮೆಜಾನಿಯಾ-1 ಸೇರಿ 19 ಉಪಗ್ರಹಗಳನ್ನು ಯಶಸ್ವಿಯಾಗಿ ಉಡಾಯಿಸಿದ ಇಸ್ರೋ

ಈ ಸುದ್ದಿಯನ್ನು ಶೇರ್ ಮಾಡಿ

ನವದೆಹಲಿ, ಫೆ.28- ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಇಂದು ಮತ್ತೊಂದು ಮೈಲಿಗಲ್ಲು ಸ್ಥಾಪಿಸಿದೆ. ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಲ್ಲಿ ಇಂದು ಖಾಸಗಿ ಒಪ್ಪಂದದ ಅನ್ವಯ ಬ್ರೆಜಿಲ್‍ನ ಅಮೆಜಾನಿಯಾ-1 ಉಪಗ್ರಹವನ್ನು ಪಿಎಸ್‍ಎಲ್‍ವಿ ಸಿ-51 ರಾಕೆಟ್ ಮೂಲಕ ನಭಕ್ಕೆ ಯಶಸ್ವಿಯಾಗಿ ಉಡಾಯಿಸಲಾಗಿದೆ. ಬ್ರೆಜಿಲ್‍ನ ಉಪಗ್ರಹ ಸೇರಿದಂತೆ 19 ಉಪಗ್ರಹಗಳನ್ನು ಇಂದು ಬೆಳಗ್ಗೆ 10.24ಕ್ಕೆ ಉಡಾಯಿಸಲಾಯಿತು ಎಂದು ಇಸ್ರೋ ವಿಜ್ಞಾನಿಗಳು ತಿಳಿಸಿದ್ದಾರೆ.

ಪಿಎಸ್‍ಎಲ್‍ವಿ ಸಿ-51 ರಾಕೆಟ್ ಮೂಲಕ ಅಮೆಜಾನಿಯಾ-1 ವಾಣಿಜ್ಯ ಉದ್ದೇಶಿತ ವಾಣಿಜ್ಯ ಉಪಗ್ರಹವಾಗಿದ್ದು, ಕೇಂದ್ರ ಸರ್ಕಾರಿ ಸ್ವಾಮ್ಯದ ನ್ಯೂ ಸ್ಪೇಸ್ ಇಂಡಿಯಾ ಲಿಮಿಟೆಡ್ (ಎನ್‍ಎಸ್‍ಐಎಲ್) ಅಮೆರಿಕದ ಸ್ಪೇಸ್ ಫ್ಲೈಟ್ ಇಂಚ್ ಜತೆ ಒಪ್ಪಂದದನ್ವಯ ಈ ಯೋಜನೆಯನ್ನು ಹಾಕಿಕೊಳ್ಳಲಾಗಿತ್ತು ಎಂದು ತಿಳಿಸಲಾಗಿದೆ.

ಅಮೆಜಾನಿಯಾ-1 ಉಪಗ್ರಹ ಭೂಮಂಡಲವನ್ನು ಮತ್ತಷ್ಟು ಸೂಕ್ಷ್ಮವಾಗಿ ಗಮನಿಸಬಲ್ಲ ತಂತ್ರಜ್ಞಾನ ಹೊಂದಿದ್ದು, ಅಮೆಜಾನ್ ಪ್ರದೇಶದಲ್ಲಿ ಕೃಷಿ ಮತ್ತು ಪರಿಸರ ಬದಲಾವಣೆಗಳ ಕುರಿತಂತೆ ಸೂಕ್ಷ್ಮವಾಗಿ ರಿಮೋಟ್ ಸೆನ್ಸಿಂಗ್ ಡೇಟಾಗಳನ್ನು ಪಡೆಯಬಹುದಾಗಿದೆ.

ಇಂದು ಉಡಾಯಿಸಲಾಗಿರುವ ಉಪಗ್ರಹಗಳಲ್ಲಿ ಭಾರತದ ಶಿಕ್ಷಣ ಸಂಸ್ಥೆಗಳ ಉಪಗ್ರಹವೂ ಕೂಡ ಸೇರಿದೆ. ಇದರಲ್ಲಿ ಬೆಂಗಳೂರಿನ ಪಿಎಸ್ ವಿವಿ ಕೂಡ ಸೇರಿದೆ.

Facebook Comments

Sri Raghav

Admin