ಯಾವುದೇ ಕಾರಣಕ್ಕೂ ಇಸ್ರೋ ಖಾಸಗೀಕರಣ ಇಲ್ಲ : ಕೆ.ಶಿವನ್ ಸ್ಪಷ್ಟನೆ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು,ಆ.21- ದೇಶದ ಹೆಮ್ಮೆಯ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯನ್ನು ಯಾವುದೇ ಕಾರಣಕ್ಕೂ ಖಾಸಗೀಕರಣಗೊಳಿಸುವ ಪ್ರಶ್ನೆಯೇ ಇಲ್ಲ ಎಂದು ಇಸ್ರೋ ಅಧ್ಯಕ್ಷ ಮತ್ತು ಬಾಹ್ಯಾಕಾಶ ಇಲಾಖೆಯ ಕಾರ್ಯದರ್ಶಿ ಕೆ.ಶಿವನ್ ಸ್ಪಷ್ಟಪಡಿಸಿದ್ದಾರೆ.

ಕೇಂದ್ರ ಸರ್ಕಾರದ ಇತ್ತೀಚಿನ ಬಾಹ್ಯಾಕಾಶ ಕ್ಷೇತ್ರ ಸುಧಾರಣೆ ಘೋಷಣೆಯಿಂದ ಇಸ್ರೋಗೆ ಖಾಸಗೀಕರಣವಾಗುತ್ತದೆ ಎಂಬ ಭಾವನೆ ಅನೇಕರಲ್ಲಿದೆ. ಆದರೆ ಇದು ಸಂಪೂರ್ಣ ಸುಳ್ಳು ಎಂದು ಅವರು ಸ್ಪಷ್ಟಪಡಿಸಿದರು.

ಅಂತರಿಕ್ಷ ವಲಯದ ಸುಧಾರಣೆ ಘೋಷಣೆಯು ಇಸ್ರೋ ಖಾಸಗಿಕರಣದ ಉದ್ದೇಶ ಹೊಂದಿಲ್ಲ. ಖಾಸಗಿ ಸಂಸ್ಥೆಗಳು ಮತ್ತು ನವೋದ್ಯಮ ಕಂಪನಿಗಳು ಬಾಹ್ಯಾಕಾಶ ಚಟುವಟಿಕೆಯಲ್ಲಿ ಪಾಲ್ಗೊಳ್ಳಲು ಸಹಭಾಗಿತ್ವ ವಹಿಸುವ ಉದ್ದೇಶ ಹೊಂದಿವೆ ಹೊರತು ಇದು ಖಾಸಗೀಕರಣದ ಅರ್ಥವಲ್ಲ ಎಂದು ಅವರು ಹೇಳಿದರು.

ಬಾಹ್ಯಾಕಾಶ ಕ್ಷೇತ್ರದಲ್ಲಿ ಭಾರತದ ಸಾಮಥ್ರ್ಯ ಅನಾವರಣ ಕುರಿತ ವೆಬಿನಾರ್‍ನಲ್ಲಿ ಮಾತನಾಡಿದ ಅವರು, ಇಸ್ರೋ ಅತ್ಯುತ್ತಮ ರೀತಿಯಲ್ಲಿ ಕಾರ್ಯ ನಿರ್ವಹಿಸುತ್ತಿದೆ. ಹೀಗಿರುವಾಗ ಇದನ್ನು ಖಾಸಗಿಕರಣಗೊಳಿಸುವ ಪ್ರಶ್ನೆಯೇ ಉದ್ಭವಿಸುವುದಿಲ್ಲ ಎಂದರು.

ಬಾಹ್ಯಾಕಾಶ ಚಟುವಟಿಕೆ ಮಸೂದೆಯ ಕರಡು ಅಂತಿಮ ರೂಪದಲ್ಲಿದೆ. ಇದನ್ನು ಕೇಂದ್ರ ಸಚಿವ ಸಂಪುಟದ ಮುಂದೆ ಮಂಡಿಸಿ ವಿಧೇಯಕಕ್ಕೆ ಅನುಮೋದನೆ ಪಡೆಯುವುದಾಗಿ ಅವರು ತಿಳಿಸಿದರು.

Facebook Comments

Sri Raghav

Admin