ಕೊರೋನಾ ವುಹಾನ್ ಲ್ಯಾಬ್‍ನಲ್ಲಿ ಸೃಷ್ಟಿಯಾಗಿಲ್ಲ : ಮತ್ತೆ ಚೀನಾ ಪರ ನಿಂತ WHO

ಈ ಸುದ್ದಿಯನ್ನು ಶೇರ್ ಮಾಡಿ

ನ್ಯೂಯಾರ್ಕ್, ಮೇ 5- ಇಡೀ ವಿಶ್ವಕ್ಕೆ ಕಿಲ್ಲರ್ ಕೊರೊನಾ ವೈರಸ್‍ನನ್ನು ಚೀನಾ ಕೊಡುಗೆಯಾಗಿ ನೀಡುವುದಕ್ಕೆ ಬಲವಾದ ಪುರಾವೆಗಳಿದ್ದರೂ ಕೂಡ ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯುಎಚ್‍ಒ) ಮತ್ತೆ ಬೀಜಿಂಗ್ ಪರ ನಿಂತಿರುವುದು ಅಮೆರಿಕ ಸೇರಿದಂತೆ ವಿಶ್ವದ ಅನೇಕ ರಾಷ್ಟ್ರಗಳಲ್ಲಿ ತೀವ್ರ ಅಸಮಾಧಾನಕ್ಕೆ ಕಾರಣವಾಗಿದೆ.

ಚೀನಾದ ವುಹಾನ್ ಲ್ಯಾಬ್‍ನಲ್ಲಿ ಡೆಡ್ಲಿ ಕೋವಿಡ್-19 ವೈರಸ್ ಸೃಷ್ಟಿಯಾಗಿದೆ ಎಂಬ ಅಮೆರಿಕ ಆರೋಪವನ್ನು ತಳ್ಳಿ ಹಾಕಿರುವ ವಿಶ್ವ ಆರೋಗ್ಯ ಸಂಸ್ಥೆ ಈ ಆಪಾದನೆಗೆ ಯಾವುದೇ ಸಾಕ್ಷ್ಯಾಧಾರವಿಲ್ಲ ಎಂದು ಹೇಳಿದೆ.

ಇದರೊಂದಿಗೆ ಕೊರೊನಾ ವಿಷಯಕ್ಕೆ ಸಂಬಂಧಿಸಿದಂತೆ ಅಮೆರಿಕ ಮತ್ತು ಡಬ್ಲ್ಯುಎಚ್‍ಒ ನಡುವೆ ನಡೆಯುತ್ತಿದ್ದ ಆರೋಪ ಮತ್ತು ಪ್ರತ್ಯಾರೋಪ ಈಗ ಮತ್ತೊಂದು ಘಟ್ಟ ತಲುಪಿದೆ.

ಕೋವಿಡ್-19 ವೈರಸ್ ಕುರಿತು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಊಹಾತ್ಮಕ ಆರೋಪಗಳಿಗೆ ಯಾವುದೇ ಪುರಾವೆಗಳಿಲ್ಲ. ಮತ್ತು ಸಮಪರ್ಕವಾದ ಸಾಕ್ಷ್ಯಾಧಾರಗಳಿಲ್ಲ ಎಂದು ವಿಶ್ವ ಆರೋಗ್ಯ ಸಂಸ್ಥೆಯ ತುರ್ತು ಆರೋಗ್ಯ ವಿಭಾಗದ ನಿರ್ದೇಶಕ ಮೈಕಲ್ ರಿಯಾನ್ ಹೇಳಿದ್ದಾರೆ.

ಅಮೆರಿಕ ಅಧ್ಯಕ್ಷ ಟ್ರಂಪ್ ಮತ್ತು ವಿದೇಶಾಂಗ ಸಚಿವ ಮೈಕ್ ಪೊಂಪಿಯೋ ಕಿಲ್ಲರ್ ವೈರಸ್ ಚೀನಾ ಲ್ಯಾಬ್‍ನ ಸೃಷ್ಟಿ ಇದಕ್ಕೆ ಬಲವಾದ ಸಾಕ್ಷ್ಯಾಧಾರಗಳಿವೆ ಎಂದು ಹೇಳಿದ್ದರು.

Facebook Comments

Sri Raghav

Admin