ಕೊಡಗಿನ ಬೆಡಗಿ, ‘ಕಿರಿಕ್’ ಹುಡುಗಿ ರಶ್ಮಿಕಾಗೆ ಐಟಿ ಶಾಕ್..!

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಜ.16-ಕಿರಿಕ್ ಬೆಡಗಿ ರಶ್ಮಿಕಾ ಮಂದಣ್ಣ ಅವರ ನಿವಾಸದ ಮೇಲೆ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಕೊಡಗಿನ ವಿರಾಜಪೇಟೆಯಲ್ಲಿರುವ ರಶ್ಮಿಕಾ ನಿವಾಸದ ಮೇಲೆ ಬೆಳ್ಳಂ ಬೆಳಿಗ್ಗೆ ಐಟಿ ಅಧಿಕಾರಿಗಳು ದಾಳಿ ನಡೆಸಿ ದಾಖಲೆಗಳನ್ನು ಪರಿಶೀಲನೆ ನಡೆಸಿದರು.

ಕಿರಿಕ್ ಪಾರ್ಟಿ ಚಿತ್ರದ ಸಾನ್ವಿ ಪಾತ್ರದ ಮೂಲಕ ರಾತ್ರೋರಾತ್ರಿ ಸ್ಟಾರ್ ನಟಿಯಾಗಿ ಗುರುತಿಸಿಕೊಂಡ ರಶ್ಮಿಕಾ ಇಂದು ದಕ್ಷಿಣ ಚಿತ್ರರಂಗದಲ್ಲಿ ಬಹುಬೇಡಿಕೆಯ ನಟಿಯಾಗಿ ಕೋಟಿ ಕೋಟಿ ಸಂಪಾದನೆ ಮಾಡುತ್ತಿದ್ದಾರೆ.ಕಿರಿಕ್ ಪಾರ್ಟಿಯಲ್ಲಿ ರಕ್ಷಿತ್ ಶೆಟ್ಟಿ ಜೊತೆ ನಟಿಸಿದ ನಂತರ ಇಬ್ಬರಲ್ಲೂ ಪೇಮಾಂಕುರವಾಗಿತ್ತು. ಇಬ್ಬರು ಮನೆಯವರ ಒಪ್ಪಿಗೆ ಪಡೆದು ನಿಶ್ಚಿತಾರ್ಥ ಕೂಡ ಮಾಡಿಕೊಂಡಿದ್ದರು.

ಆದರೆ, ತೆಲುಗು, ತಮಿಳು ಚಿತ್ರರಂಗದಲ್ಲಿ ರಶ್ಮಿಕಾಗೆ ಬೇಡಿಕೆ ಹೆಚ್ಚಾಯಿತು. ತೆಲುಗು ಚಿತ್ರರಂಗದಲ್ಲಿ ಅರ್ಜುನ್ ರೆಡ್ಡಿ ಚಿತ್ರದ ಮೂಲಕ ಯುವ ಸಮುದಾಯ ಕಣ್ಮಣಿಯಾಗಿ ಜನಮನ ಗೆದ್ದ ವಿಜಯ್ ದೇವರಕೊಂಡ ಅವರ ಗೀತಾ ಗೋವಿಂದ ಚಿತ್ರದಲ್ಲಿ ರಶ್ಮಿಕಾ ಮೈ ಚಳಿ ಬಿಟ್ಟು ನಟಿಸಿ ಹಸಿ ಬಿಸಿ ದೃಶ್ಯಗಳಲ್ಲಿ ಕಾಣಿಸಿಕೊಂಡ ನಂತರ ಅವರಿಬ್ಬರ ಮಧ್ಯೆ ಕುಚು ಕುಚು ಇದೆ ಎಂಬ ಮಾತುಗಳು ಕೇಳಿ ಬಂದವು.

ಈ ಬೆಳವಣಿಗೆ ಬೆನ್ನಲ್ಲೇ ರಶ್ಮಿಕಾ ನಾನು ಸದ್ಯ ಮದುವೆಯಾಗುವುದಿಲ್ಲ ಎಂದು ಘೋಷಿಸುವ ಮೂಲಕ ರಕ್ಷಿತ್ ಶೆಟ್ಟಿ ಅವರಿಗೆ ಶಾಕ್ ನೀಡಿದ್ದರು. ರಕ್ಷಿತ್ ಶೆಟ್ಟಿ ಅವರಿಗೆ ಕೈ ಕೊಟ್ಟು ರಶ್ಮಿಕಾ ವಿಜಯ್ ದೇವರಕೊಂಡ ಅವರನ್ನು ವಿವಾಹವಾಗಲಿದ್ದಾರೆ ಎಂಬ ಗುಸು ಗುಸು ಕೇಳಿಬಂದಿತ್ತು. ಆದರೆ, ಈ ವಿಚಾರವನ್ನು ಇಬ್ಬರು ನಿರಾಕರಿಸುವ ಮೂಲಕ ವಿವಾದಕ್ಕೆ ಅಂತ್ಯ ಹಾಡಿದ್ದರು.

ತೆಲುಗಿನ ಹೆಸರಾಂತ ಕಲಾವಿದರಾದ ಮಹೇಶ್ ಬಾಬು, ನಾಗರ್ಜುನ್, ನಾನಿ, ಅಲ್ಲು ಅರ್ಜುನ್, ವಿಜಯ್ ಸೇತುಪತಿ, ಕನ್ನಡದಲ್ಲಿ ಪುನಿತ್ ರಾಜ್‍ಕುಮಾರ್, ಗಣೇಶ್, ದರ್ಶನ್, ಧ್ರುವ ಸರ್ಜಾರಂತಹ ಘಟಾನುಘಟಿ ನಾಯಕರ ಜತೆ ನಟಿಸಿ ಸೈ ಎನಿಸಿಕೊಂಡಿದ್ದ ರಶ್ಮಿಕಾ ಇತ್ತಿಚೆಗೆ ಬಹುಬೇಡಿಕೆ ನಟಿಯಾಗಿದ್ದರು.

ಚಿತ್ರರಂಗದಲ್ಲಿ ಕೋಟಿ ಕೋಟಿ ಹಣ ಸಂಪಾದನೆ ಮಾಡಿದ್ದ ರಶ್ಮಿಕಾ ತೆಲುಗು ಚಿತ್ರ ನಿರ್ಮಾಣಕ್ಕೂ ಕೈ ಹಾಕಿದ್ದರು. ಆದರೆ, ತಮ್ಮ ಸಂಪಾನೆಗೆ ತಕ್ಕಂತೆ ಅವರು ಆದಾಯ ತೆರಿಗೆ ಪಾವತಿಸಿರಲಿಲ್ಲ ಎಂಬ ಆರೋಪಗಳು ಕೇಳಿಬಂದಿದ್ದವು. ರಶ್ಮಿಕಾ ಅವರ ತಂದೆ ವ್ಯಾಪಾರಸ್ಥರಾಗಿದ್ದು ಇಂದು ಬೆಳಿಗ್ಗೆ ಐಟಿ ಅಧಿಕಾರಿಗಳು ದಿಢೀರ್ ದಾಳಿ ನಡೆಸಿ ದಾಖಲೆ ಪರಿಶೀಲನೆ ನಡೆಸುವ ಮೂಲಕ ರಶ್ಮಿಕಾ ಮಂದಣ್ಣ ಅವರಿಗೆ ಶಾಕ್ ನೀಡಿದ್ದಾರೆ.
ಈ ಹಿಂದೆ ಚಿತ್ರರಂಗದ ಘಟಾನುಘಟಿ ನಾಯಕರಾದ ಶಿವರಾಜ್‍ಕುಮಾರ್, ಪುನಿತ್ ರಾಜ್‍ಕುಮಾರ್, ಸುದೀಪ್, ಯಶ್, ರಾಕ್‍ಲೈನ್ ವೆಂಕಟೇಶ್ ಅವರ ನಿವಾಸಗಳ ಮೇಲೂ ಐಟಿ ರೈಡ್ ಆಗಿತ್ತು.

Facebook Comments

Sri Raghav

Admin