ಉರಳಿಬಿದ್ದ ಕೇಬಲ್ ಕಾರ್, 14 ಮಂದಿ ಸಾವು

ಈ ಸುದ್ದಿಯನ್ನು ಶೇರ್ ಮಾಡಿ

ಇಟಲಿ.ಮೇ24 ಕೇಬಲ್ ಕಾರೊಂದು ನೆಲಕ್ಕುರುಳಿ ಬಿದ್ದ ಪರಿಣಾಮ 14 ಮಂದಿ ಧಾರುಣವಾಗಿ ಮೃತಪಟ್ಟಿರುವ ಘಟನೆ ಮ್ಯಾಜಿಯೊರ್ ಸರೋವರದ ಸಮಿಪ ಸಂಭವಿಸಿದೆ. ಪರ್ವತಗಳಿಗೆ ಸಂಪರ್ಕ ಕಲ್ಪಿಸುವ ಕೇಬಲ್ ಕಾರು ಆಕಸ್ಮಿಕ ವಾಗಿ ನೆಲಕ್ಕೆ ಉರುಳಿಬಿದ್ದಿದ್ದು ಅದರಲ್ಲಿದ್ದ 14 ಜನ ಸ್ಥಳದಲ್ಲೆ ಸಾವನ್ನಪ್ಪಿದ್ದಾರೆ ಎನ್ನಲಾಗಿದೆ.

ಇದರಲ್ಲಿ ಇಸ್ರೇಲಿಗರು ಸೆರಿದಂತೆ ವಿವಿಧ ದೇಶಗಳ ವಾಸಿಗಳು ಇದ್ದರು ಎನ್ನಲಾಗಿದ್ದು ಹಲವರ ಸ್ಥಿತಿ ಚಿಂತಾ ಜನಕ ವಾಗಿದೆ ಎಂದು ತಿಳಿದು ಬಂದಿದೆ.
ಸ್ಟ್ರೀಸಾ ಮೊಟ್ಟರೊನ್ ಕೇಬಲ್ ಕಾರು ಸಮುದ್ರ ಮಟ್ಟದಿಂದ ಸರಿ ಸುಮಾರು 1.500 ಮಿಟರ್ ಎತ್ತರದಲ್ಲಿತ್ತು ಎನ್ನಲಾಗಿದೆ.20 ನಿಮಿಷ ದಲ್ಲಿ ಮೊಟ್ಟರೊನ್ ಪರ್ವತದಿಂದ ತುದಿಗೆ ಪ್ರವಾಸಿಗರನ್ನು ಕರೆದೋಯ್ಯುವ ಶಕ್ತಿ ಈ ಕಾರಿಗಿದೆ.

Facebook Comments