ಬಿಗ್ ಬ್ರೇಕಿಂಗ್ : ಕರೋನಾ ಸಾವಿನ ಸಂಖ್ಯೆಯಲ್ಲಿ ಚೀನಾ ಹಿಂದಿಕ್ಕಿದ ಇಟಲಿ…!

ಈ ಸುದ್ದಿಯನ್ನು ಶೇರ್ ಮಾಡಿ

ವಾಷಿಂಗ್ಟನ್/ಇಂಗ್ಲೆಂಡ್/ಮಿಲಾನ್, ಮಾ.19-ದ್ವಿತೀಯ ಮಹಾ ಸಂಗ್ರಾಮದ ನಂತರ ಇಡೀ ವಿಶ್ವವನ್ನೇ ಆತಂಕಕ್ಕೀಡು ಮಾಡಿರುವ ಯಮಸ್ವರೂಪಿ ಕೊರೊನಾ (ಕೋವಿಡ್-19) ವೈರಾಣುವಿನ ದಾಳಿ ಮತ್ತಷ್ಟು ತೀವ್ರಗೊಂಡಿದೆ. ಜಗತ್ತಿನಲ್ಲಿ ಈವರೆಗೆ ಸುಮಾರು 10,000ಕ್ಕೂ ಮಂದಿ ಈ ಹೆಮ್ಮಾರಿಗೆ ಬಲಿಯಾಗಿದ್ದಾರೆ. ಅಲ್ಲದೆ, ಸೋಂಕು ಪೀಡಿತರ ಸಂಖ್ಯೆ 2.50 ಲಕ್ಷ ಸಮೀಪಿಸುತ್ತಿದೆ.

ಕೊರೊನಾ ಬಾಧೆಯಿಂದ ತತ್ತರಿಸಿರುವ ಇಟಲಿ ವೈರಾಣು ಸೋಂಕಿನ ಸಾವು ಪ್ರಕರಣಗಳಲ್ಲಿ ಚೀನಾವನ್ನು ಹಿಂದಿಕ್ಕಿದೆ. ಅಲ್ಲಿ ಈವರೆಗೆ ಸುಮಾರು 3,500 ಮಂದಿ ಮೃತಪಟ್ಟಿದ್ದಾರೆ. ಅಲ್ಲದೆ, ಸೋಂಕು ಪೀಡಿತರ ಸಂಖ್ಯೆ 41,000 ದಾಟಿದೆ. ಕಳೆದ 24 ತಾಸುಗಳ ಅವಧಿಯಲ್ಲಿ ಇಟಲಿಯಲ್ಲಿ ಮತ್ತೆ 500ಕ್ಕೂ ಮಂದಿ ಬಲಿಯಾಗಿದ್ದು, ಸತ್ತವರ ಸಂಖ್ಯೆ ಏರುತ್ತಲೇ ಇರುವುದು ಕಳವಳಕಾರಿಯಾಗಿದೆ.

ಮಾರಕ ಕೊರೊನಾ ಸೋಂಕಿನ ಕೇಂದ್ರ ಬಿಂದು ಚೀನಾದಲ್ಲಿ ಈಗಾಗಲೇ 3,260 ಮಂದಿ ಮೃತಪಟ್ಟಿದ್ದು, ಸುಮಾರು 90,000 ಜನರಿಗೆ ಸೋಂಕು ರೋಗ ತಗುಲಿದೆ. ಸಮಾಧಾನಕರ ಸಂಗತಿ ಎಂದರೆ ಚೀನಾದಲ್ಲಿ ವೈರಾಣು ಸೋಂಕಿನ ತೀವ್ರತೆ ಇಳಿಮುಖವಾಗುತ್ತಿದೆ. ಆದರೆ, ಇಟಲಿಯಲ್ಲಿ ಸಾವು ಮತ್ತು ಪೀಡಿತರ ಸಂಖ್ಯೆ ಆತಂಕಕಾರಿ ಮಟ್ಟದಲ್ಲಿ ಏರುತ್ತಿರುವುದು ಕಳವಳಕಾರಿಯಾಗಿದೆ.

ಇತ್ತೀಚಿನ ವರದಿಗಳ ಪ್ರಕಾರ ವಿಶ್ವದ 160ಕ್ಕೂ ಹೆಚ್ಚು ದೇಶಗಳಲ್ಲಿ ಈವರೆಗೆ ಕೋವಿಡ್-19ಗೆ 8,969 ಮಂದಿ ಬಲಿಯಾಗಿದ್ದಾರೆ. ಅಲ್ಲದೆ, ಸುಮಾರು 2.50 ಲಕ್ಷ ಮಂದಿಯಲ್ಲಿ ಸೋಂಕು ಕಾಣಿಸಿಕೊಂಡಿದೆ. ಸಮಾಧಾನಕರ ಸಂಗತಿ ಎಂದರೆ ವಿಶ್ವದ ವಿವಿಧ ದೇಶಗಳಲ್ಲಿ ರೋಗ ಪೀಡತರಾಗಿದ್ದ 95,745 ಮಂದಿ ಚೇತರಿಸಿಕೊಳ್ಳುತ್ತಿದ್ದಾರೆ. ಇವರಲ್ಲಿ ಅನೇಕರು ಪೂರ್ಣ ಗುಣಮುಖರಾಗಿದ್ದಾರೆ.

ಅಮೆರಿಕದಲ್ಲಿ ಕೊರೊನಾ ಸಾವಿನ ಸಂಖ್ಯೆ 120ಕ್ಕೇರಿದ್ದು, ದೇಶದ ಎಲ್ಲ 50 ರಾಜ್ಯಗಳಿಗೂ ವ್ಯಾಪಿಸಿದ್ದು, ಈ ಪ್ರಾಂತ್ಯಗಳಲ್ಲಿ ಹೊಸ ಹೊಸ ಪ್ರಕರಣಗಳು ಪತ್ತೆಯಾಗುತ್ತಿವೆ. ಇರಾನ್ ಮತ್ತು ಸ್ಪೇನ್‍ನಲ್ಲೂ ಈ ಹೆಮ್ಮಾರಿಯ ಅಟ್ಟಹಾಸಕ್ಕೆ ಮತ್ತೆ ಸಾವು ನೋವಿನ ವರದಿಗಳಿವೆ. ಪಾಕಿಸ್ತಾನದಲ್ಲಿ ಕೋವಿಡ್-19 ಸೋಂಕಿಗೆ ಇಬ್ಬರು ಮೃತಪಟ್ಟು, 450ಕ್ಕೂ ಹೆಚ್ಚು ಜನರಲ್ಲಿ ಸೋಂಕು ಕಾರಣಿಸಿಕೊಂಡಿದೆ.

ಜಗತ್ತಿನ 160ಕ್ಕೂ ಹೆಚ್ಚು ದೇಶಗಳಲ್ಲಿ ಈ ಹೊಸ ವೈರಾಣು ಸೋಂಕಿನಿಂದ ಲಕ್ಷಾಂತರ ಮಂದಿ ಬಾಧಿತರಾಗಿದ್ದು, ಸಾವಿನ ಸಂಖ್ಯೆ ಮತ್ತಷ್ಟು ಹೆಚ್ಚಾಗುವ ಆತಂಕವಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯುಎಚ್‍ಒ) ಆತಂಕ ವ್ಯಕ್ತಪಡಿಸಿದೆ. ಕೋವಿಡ್-18 ಸೋಂಕು ಇನ್ನೂ ಕೆಲವು ದೇಶಗಳಿಗೂ ಹಬ್ಬುತ್ತಿದ್ದು, ಜನರು ಮತ್ತಷ್ಟು ಭಯಬೀತರಾಗಿದ್ದಾರೆ.

Facebook Comments

Sri Raghav

Admin