ಸಂಕಷ್ಟದಲ್ಲಿ ಐಟಿಬಿಟಿ ಕಂಪೆನಿಗಳು, ಬಿಬಿಎಂಪಿಗೆ 2 ಸಾವಿರ ಕೋಟಿ ತೆರಿಗೆ ನಷ್ಟದ ಆತಂಕ..!

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಜು.22- ಲಾಕ್‍ಡೌನ್‍ನಿಂದ ಐಟಿಬಿಟಿ ಕಂಪೆನಿಗಳು ತೀವ್ರವಾಗಿ ಕಂಗೆಟ್ಟಿದ್ದು, ಇದರಿಂದ ಬಿಬಿಎಂಪಿಗೆ ಬರೋಬ್ಬರಿ 2 ಸಾವಿರ ಕೋಟಿ ರೂ.ಗಳಷ್ಟು ತೆರಿಗೆ ನಷ್ಟವಾಗುವ ಆತಂಕ ಎದುರಾಗಿದೆ.

ಮೊದಲ ಲಾಕ್‍ಡೌನ್ ಹಾಗೂ ರಾಜ್ಯಸರ್ಕಾರದಿಂದ ಮತ್ತೊಂದು ಸುತ್ತಿನ ಲಾಕ್‍ಡೌನ್ ಜಾರಿಗೊಳಿಸಿದ ಪರಿಣಾಮ ಐಟಿಬಿಟಿ ಕಂಪೆನಿಗಳು, ವಾಣಿಜ್ಯ ಮಳಿಗೆಗಳು, ಕೈಗಾರಿಕಾ ಕ್ಷೇತ್ರ ಕಂಗೆಟ್ಟು ಹೋಗಿವೆ.

ಕಳೆದ ಮಾರ್ಚ್‍ನಿಂದ ಎಲ್ಲ ವಹಿವಾಟುಗಳು ಬಂದ್ ಆಗಿರುವ ಹಿನ್ನೆಲೆಯಲ್ಲಿ 2020-21ನೆ ಸಾಲಿನ ವಾಣಿಜ್ಯ ತೆರಿಗೆ ಮನ್ನಾ ಮಾಡಬೇಕೆಂದು ಐಟಿಬಿಟಿ ಕಂಪೆನಿಗಳು, ಐಷಾರಾಮಿ ಹೊಟೇಲ್‍ಗಳು, ಎಫ್‍ಕೆಸಿಸಿಐ ಸೇರಿದಂತೆ ಎಲ್ಲ ಕೈಗಾರಿಕಾ ವಲಯಗಳವರು ಸರ್ಕಾರ ಹಾಗೂ ಬಿಬಿಎಂಪಿಯ ಬೆನ್ನು ಬಿದ್ದಿವೆ.

ಹೀಗಾಗಿ ಬಿಬಿಎಂಪಿಗೆ ಸಂಗ್ರಹವಾಗುವ ಆಸ್ತಿ ತೆರಿಗೆಯಲ್ಲಿ ಶೇ.2 ಸಾವಿರ ಕೋಟಿಯಷ್ಟು ನಷ್ಟವಾಗುವ ಆತಂಕ ಎದುರಾಗಿದೆ. ಕಳೆದ ಮಾರ್ಚ್‍ನಿಂದ ಬಹುತೇಕ ಉದ್ಯಮಗಳು ಸಂಪೂರ್ಣ ಸ್ಥಗಿತಗೊಂಡಿವೆ.

ವೇತನ ಕೊಡಲಾರದ ಪರಿಸ್ಥಿತಿ ನಿರ್ಮಾಣವಾಗಿದೆ. ಉತ್ಪಾದನಾ ವಲಯ ಸ್ಥಗಿತವಾಗಿದೆ. ರಫ್ತು, ಆಮದು ಸಂಪೂರ್ಣ ನಿಂತು ಹೋಗಿದೆ. ಹೀಗಾಗಿ ತೆರಿಗೆ ಮನ್ನಾ ಮಾಡಬೇಕೆಂದು ಉದ್ದಿಮೆದಾರರು ಸರ್ಕಾರವನ್ನು ಆಗ್ರಹಿಸಿರುವ ಹಿನ್ನೆಲೆಯಲ್ಲಿ ಪ್ರಸಕ್ತ ಸಾಲಿನಲ್ಲಿ ಬರುವ ತೆರಿಗೆ ಖೋತಾ ಆಗುವ ಸಾಧ್ಯತೆ ಇದೆ.

ಈಗಾಗಲೇ ಬಿಬಿಎಂಪಿ ಆರ್ಥಿಕ ಸಂಕಷ್ಟ ಎದುರಿಸುತ್ತಿದೆ. ಈಗ ಈ ಪ್ರಮಾಣದ ತೆರಿಗೆ ನಷ್ಟವಾದರೆ ಮತ್ತೆ ಆರ್ಥಿಕ ಸಂಕಷ್ಟ ಎದುರಿಸಬೇಕಾಗುತ್ತದೆ.

ಆಸ್ತಿ ತೆರಿಗೆ ಮತ್ತಿತರ ಮೂಲಗಳಿಂದ ಬಿಬಿಎಂಪಿ ತೆರಿಗೆ ಸಂಗ್ರಹ ಮಾಡುತ್ತಿತ್ತು. ಆದರೆ, ಕೈಗಾರಿಕೆ ಹಾಗೂ ವಿವಿಧ ತೆರಿಗೆ ಮೂಲಗಳು ರದ್ದಾದರೆ ಮುಂದೇನು ಎಂಬ ಚಿಂತೆ ಅಧಿಕಾರಿಗಳನ್ನು ಕಾಡತೊಡಗಿದೆ.

Facebook Comments

Sri Raghav

Admin