ಅಕಾಡೆಮಿ ನೇಮಕದಲ್ಲಿ ಕ್ರೈಸ್ತ ಸಮುದಾಯದ ಯಾರೊಬ್ಬರಿಗೂ ಅವಕಾಶ ನೀಡಿಲ್ಲ : ಐವಾನ್ ಆರೋಪ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಅ.22- ರಾಜ್ಯದ ವಿವಿಧ 16 ಅಕಾಡೆಮಿಗಳಿಗೆ 250 ಮಂದಿ ಅಧ್ಯಕ್ಷರು ಮತ್ತು ಸದಸ್ಯರನ್ನು ನೇಮಕ ಮಾಡಿರುವ ಸರ್ಕಾರ ಒಬ್ಬರೇ ಒಬ್ಬ ಕ್ರೈಸ್ತ ಸಮುದಾಯದವರಿಗೆ ಅವಕಾಶ ಕಲ್ಪಿಸಿಲ್ಲ ಎಂದು ವಿಧಾನಪರಿಷತ್ ಸದಸ್ಯ ಐವಾನ್ ಡಿಸೋಜ ಇಂದಿಲ್ಲಿ ಆರೋಪಿಸಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಇನ್ನು 15 ದಿನಗಳಲ್ಲಿ ಆಗಿರುವ ಲೋಪವನ್ನು ಸರಿಪಡಿಸಿ ಅಕಾಡೆಮಿಗಳಲಿ ್ಲ ಕ್ರೈಸ್ತ ಸಮುದಾಯಕ್ಕೆ ಅವಕಾಶ ಕಲ್ಪಿಸದಿದ್ದರೆ ವಿಧಾನಸೌಧ ಹಾಗೂ ವಿಕಾಸಸೌಧದ ನಡುವೆ ಇರುವ ಮಹಾತ್ಮಾಗಾಂಧೀಜಿ ಪ್ರತಿಮೆ ಬಳಿ ಕೊಂಕಣಿ ಕ್ರೈಸ್ತ  ಸಮುದಾಯ ಹಾಗೂ ಸಾಹಿತಿಗಳೊಂದಿಗೆ ಧರಣಿ ಸತ್ಯಾಗ್ರಹ ಮಾಡಲಾಗುವುದು ಎಂದು ಎಚ್ಚರಿಸಿದರು.

ರಾಜ್ಯದಲ್ಲಿ ಶೇ.4ರಷ್ಟಿರುವ ಕ್ರೈಸ್ತ ಸಮುದಾಯಕ್ಕೆ ಅಧ್ಯಕ್ಷರನ್ನು ನೇಮಕ ಮಾಡಲಾಗದಿದ್ದರೆ ಕನಿಷ್ಠ ಸದಸ್ಯರನ್ನಾದರೂ ನೇಮಕ ಮಾಡಬೇಕು. ರಾಜ್ಯದ 11 ಧರ್ಮ ಪ್ರಾಂತ್ಯಗಳ ಪೈಕಿ 4 ಧರ್ಮ ಪ್ರಾಂತ್ಯಗಳಲ್ಲಿ ಕೊಂಕಣಿಯೇ ಅಧಿಕೃತ ಭಾಷೆಯಾಗಿದೆ. ಆದರೂ ಸಹ ಕೊಂಕಣಿ ಅಕಾಡೆಮಿಯಲ್ಲಿ ಆ ಸಮುದಾಯದ ಯಾರೊಬ್ಬರಿಗೂ ಸ್ಥಾನಮಾನ ನೀಡಿಲ್ಲ.

ಕೊಂಕಣಿ ಅಕಾಡೆಮಿ ಪ್ರಾರಂಭವಾಗಿ ಇದುವರೆಗೂ 9 ಅಧ್ಯಕ್ಷರು ಸೇವೆ ಸಲ್ಲಿಸಿದ್ದು, ಅವರಲ್ಲಿ ನಾಲ್ವರು ಕ್ರೈಸ್ತ ಸಮುದಾಯದವರು ಎಂದು ಹೇಳಿದರು. ಕನ್ನಡ ಮತ್ತು ಸಂಸ್ಕøತಿ ಇಲಾಖೆ ಸಚಿವ ಸಿ.ಟಿ.ರವಿ ಅವರ ತವರು ಜಿಲ್ಲೆ ಚಿಕ್ಕಮಗಳೂರಿನಲ್ಲೂ ಶೇ.6ರಷ್ಟು ಕೊಂಕಣಿ ಭಾಷೆಯವರಿದ್ದಾರೆ.

ಪ್ರಸಕ್ತ ಸಾಲಿನ ಆಯವ್ಯಯದಲ್ಲಿ ಕ್ರೈಸ್ತ ಸಮುದಾಯದ ಅಭಿವೃದ್ಧಿಗೆ 200 ಕೋಟಿ ಒದಗಿಸಲಾಗಿದೆ. ಆದರೆ, ಈವರೆಗೂ ಕ್ರೈಸ್ತ ಸಮುದಾಯದ ಅಭಿವೃದ್ಧಿ ನಿಗಮವನ್ನು ಅಸ್ಥಿತ್ವಕ್ಕೆ ತಂದಿಲ್ಲ. ಅಲ್ಲದೆ, ಕ್ರೈಸ್ತ ಅಭಿವೃದ್ಧಿ ಸಮಿತಿಯನ್ನು ನೇಮಕ ಮಾಡಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಇನ್ನು 15 ದಿನಗಳಲ್ಲಿ ಕ್ರೈಸ್ತ ಅಭಿವೃದ್ಧಿ ನಿಗಮ ಸ್ಥಾಪಿಸುವ ಬಗ್ಗೆ ಕೂಡಲೇ ಘೋಷಣೆ ಮಾಡಬೇಕೆಂದು ಅವರು ಆಗ್ರಹಿಸಿದರು.

Facebook Comments

Sri Raghav

Admin