ಭಾರತದ ಬಾಲೆಯ ಸಾಹಸಕ್ಕೆ ಇವಾಂಕಾ ಟ್ರಂಪ್ ಫಿದಾ..!

ಈ ಸುದ್ದಿಯನ್ನು ಶೇರ್ ಮಾಡಿ

ವಾಷಿಂಗ್ಟನ್, ಮೇ 23-ಕೊರೊನಾ ಹಾವಳಿಯಿಂದ ಭಾರತದಲ್ಲಿ ಲಾಕ್‍ಡೌನ್ ಜಾರಿ ವೇಳೆ ಗಾಯಗೊಂಡತಂದೆಯನ್ನು ಹೊತ್ತು 1,200 ಕಿ.ಮೀ. ಸೈಕಲ್ ತುಳಿದ 15 ವರ್ಷ ಬಾಲಕಿ ಜ್ಯೋತಿಕುಮಾರಿ ಸಾಹಸ ಮತ್ತು ಸಾಧನೆಯನ್ನು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಪುತ್ರಿ ಮತ್ತು ಶ್ವೇತಭವನದ ಸಲಹೆಗಾರ್ತಿ ಇವಾಂಕಾ ಟ್ರಂಪ್ ಪ್ರಶಂಸಿಸಿದ್ದಾರೆ.

ಇದು ಅದ್ಭುತ ಸಾಹಸ ಮತ್ತು ಪಿತೃ ವಾತ್ಸಲ್ಯದ ಸಂಗತಿ ಎಂದು ಇವಾಂಕಾ, ಭಾರತದ ದಿಟ್ಟ ಬಾಲೆಯನ್ನು ಕೊಂಡಾಡಿದ್ದಾರೆ. ಹರಿಯಾಣದ ಗುರುಗಾಂವ್ (ಗುರುಗ್ರಾಮ)ನಿಂದ ಬಿಹಾರದ ತನ್ನ ಗ್ರಾಮಕ್ಕೆ ಗಾಯಾಳು ತಂದೆ ಮೋಹನ್ ಪಾಸ್ವಾನ್‍ಅವರನ್ನು ಸೈಕಲ್‍ನ ಹಿಂಬದಿ ಆಸನದಲ್ಲಿ ಕೂರಿಸಿ ಜ್ಯೋತಿ ಕುಮಾರಿ 1,200 ಕಿ.ಮೀ. ಸೈಕಲ್ ತುಳಿದು ಊರು ಸೇರಿದ್ದಳು.

ಮೇ 10ರಂದು ಗುರುಗಾಂವ್‍ನಿಂದ ಸೈಕಲ್‍ನಲ್ಲಿ ತಂದೆ ಜೊತೆ ಪ್ರಯಾಣ ಬೆಳಸಿದ ಜ್ಯೋತಿ ಮೇ 16ರಂದು ತನ್ನ ಗ್ರಾಮ ತಲುಪುವಲ್ಲಿ ಸಫಲಳಾದಳು.  ಎಂಟನೆ ತರಗತಿಯ ಈ ಬಾಲೆಯ ಸಾಹಸ ಮತ್ತು ಪಿತೃ ವಾತ್ಸಲ್ಯವನ್ನು ಟ್ವೀಟರ್‍ನಲ್ಲಿ ಗುಣಗಾನ ಮಾಡಿರುವ ಇವಾಂಕಾ ಟ್ರಂಪ್, ಜ್ಯೋತಿಕುಮಾರಿ ಅಸಾಮಾನ್ಯ ಹುಡುಗಿ, 1,200 ಕಿ.ಮೀ. ಸೈಕಲ್ ಸವಾರಿ ಅದೂ ತಂದೆಯನ್ನು ಹೊತ್ತು ಕ್ರಮಿಸಿರುವುದು ಒಂದು ದೊಡ್ಡ ಸಾಧನೆ.

ತಂದೆ ಮತ್ತು ಮಗಳ ನಿಜಕ್ಕೂ ಅದ್ಭುತ ವ್ಯಕ್ತಿಗಳು ಎಂದು ಇವಾಂಕಾ ಬಣ್ಣಿಸಿದ್ದಾರೆ. ಮೋಹನ್ ಪಾಸ್ವಾನ್ ಗುರುಗಾಂವ್‍ನಲ್ಲಿ ಆಟೋ ಚಾಲಕರಾಗಿದ್ದರು. ಬಾಡಿಗೆ ಅಟೋ ಓಡಿಸುತ್ತಿದ್ದ ಅವರು ಲಾಕ್‍ಡೌನ್ ವೇಳೆ ಗಾಯಗೊಂಡರು.

ತೀವ್ರ ಅರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದ ಮೋಹನ್ ಅವರು ಸ್ವಗ್ರಾಮಕ್ಕೆ ತೆರಳುವ ಬಯಕೆ ಹೊಂದಿದ್ದರು. ತಂದೆ ಮತ್ತು ಮಗಳು ತಮ್ಮ ಬಳಿ ಇದ್ದ ಹಣದಿಂದ ಸೈಕಲ್ ಖರೀದಿಸಿದರು. ತಂದೆಯನ್ನು ಹೊತ್ತು ಅನೇಕ ಕಷ್ಟಕಾರ್ಪಣ್ಯಗಳ ನಡುವೆ ಜ್ಯೋತಿ ಕೇವಲ ಏಳೇ ದಿನಗಳಲ್ಲಿ ತಮ್ಮ ಊರು ತಲುಪಿದಳು.

Facebook Comments

Sri Raghav

Admin