ವಿಶ್ವ ಬ್ಯಾಂಕ್ ಅಧ್ಯಕ್ಷ ಸ್ಥಾನಕ್ಕಾಗಿ ಟ್ರಂಪ್ ಪುತ್ರಿ ಜೊತೆ ನಿಕ್ಕಿ ಫೈಟ್

ಈ ಸುದ್ದಿಯನ್ನು ಶೇರ್ ಮಾಡಿ

Ivanka Trump Nikki Haleyವಾಷಿಂಗ್ಟನ್, ಜ.14- ಜಿಮ್ ಯಂಗ್ ಕಿಮ್ ಅವರ ನಿರ್ಗಮನದ ನಂತರ ಖಾಲಿಯಾಗಿರುವ ವಿಶ್ವ ಬ್ಯಾಂಕ್ ಅಧ್ಯಕ್ಷ ಸ್ಥಾನಕ್ಕೆ ಅಮೆರಿಕಾ ಅಧ್ಯಕ್ಷ ಡೊನಾಲ್ಡï ಟ್ರಂಪ್ ಪುತ್ರಿ ಇವಾಂಕ ಟ್ರಂಪ್ ಹಾಗೂ ವಿಶ್ವಸಂಸ್ಥೆಯಲ್ಲಿ ಮಾಜಿ ಅಮೆರಿಕಾ ರಾಯಬಾರಿ ನಿಕ್ಕಿ ಹ್ಯಾಲೆ ಸ್ಪರ್ಧೆಯಲ್ಲಿದ್ದಾರೆ.

ಕಿಮ್ ತನ್ನ ಎರಡನೆ ಅವಧಿ ಮುಕ್ತಾಯಗೊಳ್ಳಲು ಇನ್ನೂ ಮೂರು ವರ್ಷ ಬಾಕಿ ಇದ್ದರೂ ಹಠಾತ್ ವಿಶ್ವ ಬ್ಯಾಂಕ್ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ಘೋಷಿದ್ದಾರೆ.
ಸೌದಿ ಬೆಂಬಲಿತ ವಿಶ್ವ ಬ್ಯಾಂಕ್‍ನಲ್ಲಿ 2017ರಲ್ಲಿ ಮಹಿಳಾ ಉದ್ಯಮ ಪ್ರೋತ್ಸಾಹಕ್ಕಾಗಿ 1 ಶತ ಕೋಟಿ ಡಾಲರ್ ಮೊತ್ತದ ನಿಧಿ ಮೀಸಲಿಡುವಂತೆ ಮಾಡುವಲ್ಲಿ ಇವಾಂಕ ಟ್ರಂಪ್ ಶ್ರಮ ವಹಿಸಿದ್ದಾರೆ.

ಎರಡನೇ ವಿಶ್ವ ಸಮರದ ನಂತರ ಸ್ಥಾಪನೆಯಾದ ವಿಶ್ವ ಬ್ಯಾಂಕ್‍ನಲ್ಲಿ ಹೆಚ್ಚು ಷೇರುಗಳನ್ನು ಹೊಂದಿರುವ ಅಮೆರಿಕಾ ದೇಶವೇ ಅಧ್ಯಕ್ಷರನ್ನು ಆಯ್ಕೆ ಮಾಡುವುದು ಅಲಿಖಿತ ಒಪ್ಪಂದವಾಗಿ ನಡೆದು ಬಂದಿದೆ.

ಆದರೆ, ಅಧ್ಯಕ್ಷರಾಗಿ ಆಯ್ಕೆಯಾಗುವವರು ಅವಧಿ ಪೂರ್ಣಗೊಳಿಸುತ್ತಾರೆ ಎಂಬ ಭರವಸೆ ಇರುವುದಿಲ್ಲ.
ಒಟ್ಟಾರೆ ವಿಶ್ವ ಬ್ಯಾಂಕ್‍ಗೆ ಹೊಸ ಅಧ್ಯಕ್ಷರು ಯಾರಾಗುತ್ತಾರೆ ಎಂಬುದು ಕುತೂಹಲ ಮೂಡಿಸಿದೆ.

Facebook Comments