ಕೊಕೈನ್ ಮತ್ತು ಎಂಡಿಎಂಎ ಮಾರಾಟ ಮಾಡುತ್ತಿದ್ದ ಐವರಿನ್ ಪ್ರಜೆ ಅರೆಸ್ಟ್

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಮೇ 22- ಬಿಸಿನೆಸ್ ವೀಸಾದಲ್ಲಿ ಭಾರತಕ್ಕೆ ಬಂದು ನಗರದಲ್ಲಿ ವಾಸ್ತವ್ಯ ಹೂಡಿ ಮನೆಯಲ್ಲಿ ಮಾದಕ ವಸ್ತು ಸಂಗ್ರಹಿಸಿಕೊಂಡು ತನ್ನದೇ ಗಿರಾಕಿಗಳಿಗೆ ಮಾರಾಟ ಮಾಡುತ್ತಿದ್ದ ಐವರಿನ್ ದೇಶದ ಪ್ರಜೆಯನ್ನು ಸಿಸಿಬಿ ಪೊಲೀಸರು ಬಂಧಿಸಿ ಕೊಕೈನ್ ಮತ್ತು ಎಂಡಿಎಂಎ ಮಾದಕ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ.

ನಗರದ ಹೊರಮಾವು, ಅಗರ ವಿಲೇಜ್‍ನಲ್ಲಿ ವಾಸವಾಗಿದ್ದ ಅಸ್ಸಿ ಅಯಾ ಬಸಿಲೆ (31) ಬಂಧಿತ ಐವರಿನ್ ಪ್ರಜೆ. ಹೆಣ್ಣೂರು ಪೊಲೀಸ್ ಠಾಣೆ ವ್ಯಾಪ್ತಿಯ ಅಗರ ವಿಲೇಜಿನಲ್ಲಿ ವಾಸವಾಗಿದ್ದ ಈತ ಮಾದಕ ವಸ್ತು ಕೊಕೇನ್ ಮತ್ತು ಎಂಡಿಎಂಎ ಎಂಬ ಮಾದಕ ವಸ್ತುಗಳನ್ನು

ಸಂಗ್ರಹಿಸಿಟ್ಟುಕೊಂಡು ತನ್ನದೇ ಗಿರಾಕಿಗಳಿಗೆ ಮಾರಾಟ ಮಾಡುತ್ತಾ ಹೆಚ್ಚಿನ ಹಣ ಸಂಪಾದನೆ ಮಾಡುತ್ತಾ ಸಮಾಜದ ಸ್ವಾಸ್ಥ್ಯವನ್ನು ಹಾಳು ಮಾಡುತ್ತಿದ್ದ ಬಗ್ಗೆ ಸಿಸಿಬಿ ಪೊಲೀಸರಿಗೆ ಮಾಹಿತಿ ಲಭಿಸಿತ್ತು.

ಈ ಆಧಾರದ ಮೇಲೆ ಸಿಸಿಬಿ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಮನೆ ಮೇಲೆ ಕ್ಷಿಪ್ರ ಕಾರ್ಯಾಚರಣೆ ನಡೆಸಿ ಆರೋಪಿಯನ್ನು ಬಂಧಿಸಿ 50 ಗ್ರಾಂ ತೂಕದ ಮಾದಕ ವಸ್ತು, ಮೊಬೈಲ್, ಒಂದು ಸಾವಿರ ಹಣ ವಶಪಡಿಸಿಕೊಂಡಿದ್ದು, ಒಟ್ಟು ಮೊತ್ತ 4 ಲಕ್ಷ ರೂ.ಗಳೆಂದು ಅಂದಾಜಿಲಾಗಿದೆ. ಆರೋಪಿ ವಿರುದ್ಧ ಹೆಣ್ಣೂರು ಪೆÇಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

Facebook Comments

Sri Raghav

Admin